ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಹಾಲು, ಬಸ್, ವಿದ್ಯುತ್ ಮತ್ತು ಮೆಟ್ರೋ ದರ ಹೆಚ್ಚಳದ ಬಿಸಿ ಎದುರಿಸುತ್ತಿರುವ ಜನಸಾಮಾನ್ಯರಿಗೆ ಮತ್ತೊಂದು ಆರ್ಥಿಕ ಆಘಾತ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರ ಆಗಸ್ಟ್ 31 ಭಾನುವಾರದಿಂದ ಜಾರಿಗೆ ಬರುವಂತೆ ಆಸ್ತಿ ನೊಂದಣಿ ಶುಲ್ಕವನ್ನು(Karnataka Property Registration Fees Hike) ದುಪ್ಪಟ್ಟುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ನಿರ್ಧಾರವು ಆಸ್ತಿ ಖರೀದಿದಾರರ ಜೇಬಿಗೆ ಮತ್ತಷ್ಟು ಹೊರೆ ಬೀಳುವಂತೆ ಮಾಡಿದೆ.
ಇದನ್ನೂ ಓದಿ: Passports in India: ಭಾರತದಲ್ಲಿವೆ ನಾಲ್ಕು 4 ಬಗೆಯ ಪಾಸ್ಪೋರ್ಟ್ ಗಳು, ಅವುಗಳ ಮಹತ್ವ ಏನು ಗೊತ್ತಾ?
ಶುಲ್ಕ ಹೆಚ್ಚಳದ ಹಿಂದಿನ ಕಾರಣ
ಕಂದಾಯ ಇಲಾಖೆಯ(Revenue Department) ಆದೇಶದ ಪ್ರಕಾರ ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ನಿವೇಶನ ಮನೆ ಫ್ಲಾಟ್ ಅಥವಾ ಸ್ಥಿರಸ್ತಿಕರಿಸುವಾಗ ನೋಂದಣಿ ಶುಲ್ಕ ಶೇ.1 ರಿಂದ ಶೇ.2ಕ್ಕೆ ಏರಿಕೆಯಾಗಲಿದೆ. ಈ ಏರಿಕೆಯೊಂದಿಗೆ ಈಗಾಗಲೇ ಇರುವ ಶೇಕಡ 5.6 ರಷ್ಟು ಮುದ್ರಾಂಕ ಶುಲ್ಕವನ್ನು ಸೇರಿದಂತೆ ಒಟ್ಟಾರೆ ನೋಂದಣಿ ವೆಚ್ಚವು(Property Registration Fees) 6.6 ರಿಂದ ಶೇಕಡ 7.6 ಕ್ಕೆ ಏರಿಕೆಯಾಗಲಿದೆ. ರಾಜ್ಯ ಸರ್ಕಾರವು ತನ್ನ ಆದಾಯದ ಕೊರತೆಯನ್ನು ತುಂಬಿಸಿಕೊಳ್ಳಲು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿದುಬಂದಿದೆ.
ನಮ್ಮ ಕಂದಾಯ ಇಲಾಖೆಯು(Revenue Department) ಕಳೆದ ಹಣಕಾಸು ವರ್ಷ 2024-25 ಹಾಗೂ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆದಾಯ ಸಂಗ್ರಹ ಗುರಿಯನ್ನು ತಲುಪಲು ಸಾಧ್ಯವಾಗಿರಲಿಲ್ಲ. 2024-25ರ ಹಣಕಾಸು ವರ್ಷದಲ್ಲಿ ನಿಗದಿತ ₹26 ಸಾವಿರ ಕೋಟಿ ಆದಾಯ ಸಂಗ್ರಹದ ಬದಲಿಗೆ ಕೇವಲ ₹22,500 ಕೋಟಿ ಮಾತ್ರ ಸಂಗ್ರಹಿಸಲಾಗಿತ್ತು. ಈ ಆದಾಯದ ಕೊರತೆಯೇ ಶುಲ್ಕ ಹೆಚ್ಚಳಕ್ಕೆ ಮುಖ್ಯ ಕಾರಣ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ದಸರಾ ಉದ್ಘಾಟನೆ ವಿವಾದ: ಇದು ನಾಡ ಹಬ್ಬ, ಧಾರ್ಮಿಕ ಹಬ್ಬವಲ್ಲ ಎಂದ ಅಬ್ದುಲ್ ರಜಾಕ್
ರಿಯಲ್ ಎಸ್ಟೇಟ್ ಗೆ ಹೊಡೆತ
ರಿಯಲ್ ಎಸ್ಟೇಟ್ (Real-estate)ವಲಯಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಆಸ್ತಿಗಳ ಮಾರ್ಗದರ್ಶಿ ಮೌಲ್ಯವು ಹೆಚ್ಚಾಗಿರುವುದರಿಂದ ಮತ್ತು ಈ ಖಾತ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಆಸ್ತಿ ನೊಂದನೆಗಳು ನಿಧಾನಗೊಂಡಿದೆ. ಇದರ ಜೊತೆಗೆ ನೋಂದಣಿ ಶುಲ್ಕ(Property Registration Fees Hike) ಏರಿಕೆಯು ಆಸ್ತಿ ಖರೀದಿಸಲು ಮುಂದಾಗಿರುವವರನ್ನು ಇನ್ನಷ್ಟು ಕುಗ್ಗಿಸಬಹುದು ಎಂದು ಬಿಲ್ಡರ್ ಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಕಂದಾಯ ಇಲಾಖೆ ಅಧಿಕಾರಿಗಳು(Revenue Department Officers) ಹೇಳುವಂತೆ, ಈ ಶುಲ್ಕ ಹೆಚ್ಚಳದ ನಂತರವೂ ಕರ್ನಾಟಕದಲ್ಲಿನ ಆಸ್ತಿ ನೊಂದಣಿ ಶುಲ್ಕವು ತಮಿಳುನಾಡು(ಶೇ.11) ಸೇರಿದಂತೆ ಇತರ ಕೆಲವು ರಾಜ್ಯಗಳಿಗಿಂತ ಕಡಿಮೆಯೇ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಆದೇಶವು ಜಂಟಿ ಅಭಿವೃದ್ಧಿ ಒಪ್ಪಂದಗಳು(Joint Development Agreements) ಮತ್ತು ಸಾಮಾನ್ಯ ಪವರ್ ಆಫ್ ಅಟಾರ್ನಿಗಳ(General Power of Attorney GPA) ಮೇಲು ಪರಿಣಾಮ ಬೀರಲಿದ್ದು ಈ ದಾಖಲೆಗಳನ್ನು ನೋಂದಣಿ ಶುಲ್ಕವನ್ನು ಸಹ ಶೇ.1 ರಿಂದ ಶೇ.2ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮ ಸರ್ಕಾರದ ಆದಾಯ ಹೆಚ್ಚಿಸುವಲ್ಲಿ ಎಷ್ಟು ಸಹಕಾರಿಯಾಗಲಿದೆ ಮತ್ತು ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇನ್ನೊಂದೆಡೆ ರಾಜ್ಯದ ಜನರು ಈ ತೆರಿಗೆಗಳ ಭಾರಕ್ಕೆ ಕುಗ್ಗಿ ಹೋಗುತ್ತಿದ್ದಾರೆ. ಜನರ ಸೇವೆ ಮಾಡಲು ಹೊರಟವರು ಕೊನೆಗೆ ಜನರನ್ನೇ ಲೂಟಿ ಹೊಡೆಯುತ್ತಿದ್ದಾರೆ ಎಂದು ಕೆಲ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
