4 Types of Passports in India: ಪಾಸ್ಪೋರ್ಟ್ಗಳು(Passport) ಕೇವಲ ದೇಶದಿಂದ ದೇಶಕ್ಕೆ ಪ್ರಯಾಣಿಸಲು ಬಳಸುವ ದಾಖಲೆಗಳು ಮಾತ್ರವಲ್ಲ ಅವು ನಮ್ಮ ಗುರುತು, ನಿಮ್ಮ ಸ್ಥಾನಮಾನ ಮತ್ತು ನಿಮ್ಮ ಪ್ರಯಾಣದ ಉದ್ದೇಶವನ್ನು ಒಂದು ನೋಟದಲ್ಲೇ ಹೇಳುವಂತಹ ರಹಸ್ಯ ಸಂಕೇತಗಳನ್ನು ಹೊಂದಿವೆ. ಭಾರತದಲ್ಲಿ(India) ನಾವು ನಾಲ್ಕು ವಿಭಿನ್ನ ಬಣ್ಣಗಳ ಪಾಸ್ಪೋರ್ಟ್ಗಳನ್ನು(Passport) ಕಾಣಬಹುದಾಗಿದೆ. ಪ್ರತಿಯೊಂದು ಬಣ್ಣವೂ ತನ್ನದೇ ಆದ ಮಹತ್ವವನ್ನು ಹೊಂದಿವೆ ಮತ್ತು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಅವುಗಳನ್ನು ನೀಡಲಾಗುತ್ತದೆ. ಬನ್ನಿ, ಭಾರತದಲ್ಲಿ ನೀಡಲಾಗುವ ಈ ನಾಲ್ಕು ಬಗೆಯ(4 Types of Passports in India) ಪಾಸ್ಪೋರ್ಟ್ಗಳ(Passport) ಹಿಂದಿರುವ ರೋಚಕ ಕಥೆಯನ್ನು ತಿಳಿಯೋಣ.
1. ನೀಲಿ ಪಾಸ್ಪೋರ್ಟ್: ನಮ್ಮೆಲ್ಲರ ಸಾಮಾನ್ಯ ಪಾಸ್ಪೋರ್ಟ್
ನಾವು ಸಾಮಾನ್ಯವಾಗಿ ನೋಡುವ ನೀಲಿ ಪಾಸ್ಪೋರ್ಟ್(Blue Passport) ಅನ್ನು ಸಾಮಾನ್ಯ ಪಾಸ್ಪೋರ್ಟ್’ ಎಂದು ಕರೆಯುತ್ತೇವೆ. ಇದು ವೈಯಕ್ತಿಕ ಪ್ರವಾಸ, ವಿದ್ಯಾಭ್ಯಾಸ, ವ್ಯಾವಹಾರ ಅಥವಾ ರಜಾದಿನಗಳಿಗಾಗಿ ಬಳಸಲಾಗುತ್ತದೆ. ಇದನ್ನು ಲಕ್ಷಾಂತರ ಭಾರತೀಯರು ಹೊಂದಿದ್ದಾರೆ. ಈಗ ಹೊಸದಾಗಿ ಬಂದಿರುವ ಇ-ಪಾಸ್ಪೋರ್ಟ್ಗಳು ಬಯೋಮೆಟ್ರಿಕ್ ಚಿಪ್ಗಳನ್ನು ಹೊಂದಿದ್ದು ವಿದೇಶಗಳಲ್ಲಿ ವಲಸೆ ಪ್ರಕ್ರಿಯೆಗಳನ್ನು ಸುಲಭ ಮತ್ತು ಸುರಕ್ಷಿತಗೊಳಿಸುತ್ತವೆ.
2. ಬಿಳಿ ಪಾಸ್ಪೋರ್ಟ್: ಸರ್ಕಾರಿ ಅಧಿಕಾರಿಗಳಿಗಾಗಿ
ನೀವು ಬಿಳಿ ಪಾಸ್ಪೋರ್ಟ್(White Passport) ನೋಡಿದರೆ, ಅದು ಸರ್ಕಾರಿ ಅಧಿಕಾರಿಯನ್ನು ಎಂದು ತಿಳಿದುಕೊಳ್ಳಬಹುದು. ಈ ಪಾಸ್ಪೋರ್ಟ್ ಅನ್ನು ಸರ್ಕಾರಿ ಸೇವೆಗಳಲ್ಲಿ ಇರುವವರು, ಸೇನಾ ಸಿಬ್ಬಂದಿ ಮತ್ತು ಅಧಿಕೃತ ಕಾರ್ಯಗಳ ಮೇಲೆ ವಿದೇಶಕ್ಕೆ ಪ್ರಯಾಣಿಸುವವರಿಗೆ ನೀಡಲಾಗುತ್ತದೆ. ಇದು ಅವರಿಗೆ ಕೆಲವು ಸವಲತ್ತುಗಳನ್ನು ನೀಡುತ್ತದೆ. ಈ ಪಾಸ್ಪೋರ್ಟ್ ಪಡೆಯಲು ಕಟ್ಟುನಿಟ್ಟಿನ ಪ್ರಕ್ರಿಯೆ ಇರುತ್ತದೆ ಮತ್ತು ಪ್ರಧಾನಮಂತ್ರಿ ಕಚೇರಿಯಿಂದಲೂ(Prime Minister Office) ಅನುಮತಿ ಬೇಕಾಗುತ್ತದೆ.
3. ಕೆಂಪು ಪಾಸ್ಪೋರ್ಟ್: ರಾಜತಾಂತ್ರಿಕರಿಗೆ
ಕೆಂಪು ಅಥವಾ ಮರೂನ್ ಬಣ್ಣದ ಪಾಸ್ಪೋರ್ಟ್ ಅತ್ಯಂತ ವಿಶೇಷವಾದದ್ದು. ಇದನ್ನು ದೂತ ಅಧಿಕಾರಿಗಳು (ರಾಜತಾಂತ್ರಿಕರು), ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಅವರ ಕುಟುಂಬಗಳಿಗೆ ಮಾತ್ರ ನೀಡಲಾಗುತ್ತದೆ. ಈ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ ಮತ್ತು ಅನೇಕ ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶ ಸಿಗುತ್ತದೆ. ಇದು ಅತ್ಯಂತ ಸೂಕ್ಷ್ಮ ದಾಖಲೆಯಾಗಿದ್ದು, ಪಡೆಯುವ ಪ್ರಕ್ರಿಯೆಯೂ ತುಂಬಾ ಕಟ್ಟುನಿಟ್ಟಾಗಿದೆ. ಈ ಪಾಸ್ಪೋರ್ಟ್ ಪಡೆಯಲು ಪ್ರಧಾನ ಮಂತ್ರಿ ಕಛೇರಿ ಅನುಮತಿ ಅತ್ಯಗತ್ಯ. ಈ ಕೆಂಪು ಪಾಸ್ಪೋರ್ಟ್ ಗಳನ್ನು ಸಹ ಇ- ಪಾಸ್ ಪೋರ್ಟ್ ರೂಪದಲ್ಲಿ ನೀಡಲಾಗುತ್ತದೆ. ಇದು ಅವುಗಳ ಭದ್ರತೆ ಮತ್ತು ಅಂತರಾಷ್ಟ್ರೀಯ ಮಾನ್ಯತೆಯನ್ನು ಇದು ಹೆಚ್ಚಿಸುತ್ತದೆ.
4: ಕೇಸರಿ ಪಾಸ್ಪೋರ್ಟ್: ECR ಸ್ಥಿತಿಯವರಿಗೆ
ಕೆಲವೊಮ್ಮೆ ನೀವು ಕೇಸರಿ ಪಾಸ್ಪೋರ್ಟ್(Saffron Passport) ಅನ್ನು ನೋಡಬಹುದು. ಇದನ್ನು ಎಮಿಗ್ರೇಷನ್ ಚೆಕ್(Emigration Check) ರಿಕ್ರೈರ್ಡ್ (ECR) ಸ್ಥಿತಿಯಲ್ಲಿರುವ ಭಾರತೀಯರಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ನಿರ್ದಿಷ್ಟ ಮಟ್ಟದ ಶಿಕ್ಷಣವನ್ನು ಪೂರ್ಣಗೊಳಿಸದ ಅಥವಾ ಕೆಲವು ದೇಶಗಳಲ್ಲಿ ಕೆಲಸಕ್ಕೆ ಹೋಗುವವರಿಗೆ ಈ ಪಾಸ್ಪೋರ್ಟ್(Passport) ನೀಡಲಾಗುತ್ತದೆ. ಈ ಪಾಸ್ಪೋರ್ಟ್ ಹೊಂದಿರುವವರು ವಿದೇಶಕ್ಕೆ ಹೋಗುವ ಮೊದಲು ಹೆಚ್ಚುವರಿ ವಲಸೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
ಪಾಸ್ಪೋರ್ಟ್ ಬಣ್ಣಗಳು ಏಕೆ ಮುಖ್ಯ?
ವಿಹಾರ, ವ್ಯಾಪಾರ, ಅಧಿಕೃತ ಕರ್ತವ್ಯ ಅಥವಾ ಕೆಲಸಕ್ಕಾಗಿ ಪ್ರಯಾಣಿಸುವಾಗ, ಪಾಸ್ಪೋರ್ಟ್ ಬಣ್ಣವು ಪ್ರಮುಖ ಮಾಹಿತಿಯನ್ನು ತಿಳಿಸುತ್ತದೆ. ನೀಲಿ ಪಾಸ್ಪೋರ್ಟ್ ವೈಯಕ್ತಿಕ ಪ್ರಯಾಣವನ್ನು ಸಚಿಸುತ್ತದೆ, ಬಿಳಿ ಪಾಸ್ಪೋರ್ಟ್ ಅಧಿಕೃತ ಕರ್ತವ್ಯಗಳಿಗಾಗಿ, ಕೆಂಪು ಪಾಸ್ಪೋರ್ಟ್ ರಾಜತಾಂತ್ರಿಕ ಸ್ಥಾನಮಾನವನ್ನು ಗುರುತಿಸುತ್ತದೆ ಮತ್ತು ಕೇಸರಿ ಪಾಸ್ಪೋರ್ಟ್ ECR ಪ್ರವಾಸಿಗರನ್ನು ಗುರುತಿಸುತ್ತದೆ. ಈ ವ್ಯವಸ್ಥೆಯು, ಆಧುನಿಕ ಬಯೋಮೆಟ್ರಿಕ್ ಇ-ವಾಸ್ಪೋರ್ಟ್ಗಳೊಂದಿಗೆ ಸೇರಿಕೊಂಡು, ಎಲ್ಲರಿಗೂ ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮ, ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುತ್ತದೆ.
