Lesson in Morality: ಅಂದು ಪಾಂಚಾಲಿ ಪುಷ್ಪವತಿಯಾಗಿದ್ದ ಸಮಯ ತನ್ನ ಸಖಿಯರ ಜೋಡಿ ಏನೋ ಮಾತಾಡುತ್ತಾ ಇರಬೇಕಾದರೆ ಅಲ್ಲಿಗೆ ಬಂದ ದುಶ್ಯಾಸನ ಮುಲಾಜಿಲ್ಲದೇ ಅವಳ ಹೆರಳನ್ನು ಹಿಡಿದು ಕೌರವಾದಿ ಪಾಂಡವರ ಎದುರಿಗೆ ನಿಲ್ಲಿಸಿದ ದುರ್ಯೋಧನನ ಮುಂದೆ ತಾನು ಪುಷ್ಪವತಿಯಾಗಿದ್ದಾಗಿಯೂ ತನ್ನನ್ನು ಈ ಪರಿಸ್ಥಿತಿಯಲ್ಲಿ ನೀವಾರು ನೋಡಬಾರದಾಗಿಯೂ ಬೇಡಿಕೊಂಡಳು.
ಅವನ ಪ್ರಾರಬ್ಧ ಕರ್ಮ ಬಿಡಬೇಕಲ್ಲಾ ಅವಳ ಮಾನಹರಣ ಮಾಡಲೆಂದು ಸೀರೆ ಸೆಳೆದ, ಮುಡಿ ಬಿಚ್ಚಿದ ಆವತ್ತೇ ಅವಳೊಂದು ಶಾಪ ಹಾಕಿದಳು ಈ ಬಿಚ್ಚಿದ ಮುಡಿಗೆ ದುರ್ಯೋಧನನ ರಕ್ತದ ಅಭಿಷೇಕವಾಗದ ಹೊರತು ತಾನೆಂದೂ ಮುಡಿ ಕಟ್ಟಿಕೊಳ್ಳಲಾರನೆಂದು..!
ಇದನ್ನೂ ಓದಿ: Mahesh Shetty Thimarodi: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಹಿನ್ನೆಲೆ | ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲು |
ಇವಾಗ ನಮ್ಮ ನಿಮ್ಮ ಮನೆಯಲ್ಲಿ ಹಿರಿಯರು ಆವಾಗಾವಾಗ ಈ ಮಾತು ಹೇಳುವದನ್ನು ಕೇಳಿದ್ದೇವೆ ಬಿಚ್ಚಿದ ಮುಡಿಯ ಹಿಂದೆ ಇಂಥದೊಂದು ಭಯಾನಕ ಸತ್ಯ ಇದೆ.
ಇವಾಗ ಈ ಮಾತು ಯಾಕೇ ಬಂತೆಂದರೆ ಹುಡುಗಿಯೇ ಆಗಲಿ, ಅಂಟಿಯರೇ ಆಗಲಿ ಫ್ಯಾಷನ್ ಹೆಸರಲ್ಲಿ ಕೂದಲನ್ನು ಸದಾ ಹಾರಾಡಿಸುತ್ತೀದ್ದೀರಾ ನೆನಪಿರಲಿ ಬಿಚ್ಚಿದ ಕೂದಲು ಶಾಪಗ್ರಸ್ಥ ಹೆಣ್ಣಿನ ಸಂಕೇತ, ಅವಮಾನದ ಕುರುಹು..!
ಈಗ ವಿಷಯಕ್ಕೆ ಬರ್ತೀನಿ ಮತ್ತೆ ಮತ್ತೆ ಟಿಕ್ ಟಾಕ್ ಬಗ್ಗೆ ಹೇಳುತ್ತೀನಿ ಎಂದು ಬೇಜಾರಾಗಬೇಡಿ ಅಲ್ಲಿ ಸಧ್ಯ ತಲೆ ತಗ್ಗಿಸಬೇಕಾದವರು ನಾವೇ ನೋಡಿ. (Lesson in morality)
- ಹುಡುಗಿಯರೇ ನೀವು ಸುಂದರಿಯರು, ತುಂಬೆದೆದೆ ಇದೆ, ಬಳಕುವ ನಡುವಿದೆ, ಮೂಗು ನೇರವಿದೆ, ತುಟಿ ಚಂದವಿದೆ ಒಪ್ಪೋಣ ನೀವು ಮಾಡುವ ಟಿಕ್ ಟಾಕ್ ರೀಲ್ಸ್ ನಿಂದ ಏನಾದರೂ ಸಮಾಜಕ್ಕೆ ಉಪಯೋಗವಿದೆಯಾ..?
2. ಅಂಟಿಯರೇ ದಯಮಾಡಿ ಅಂಕಲ್ಗಳ ಜೊತೆ ಬೈಕಲ್ಲಿ ಕೂತಾಗ ಅವರ ತೊಡೆಯ ಮೇಲೆ ಕೈ ಇಡಬೇಡಿ..!! ನೀವೂ ಎಷ್ಟೇ ಅನ್ಯೋನ್ಯವಾಗಿರಿ ರೋಮ್ಯಾನ್ಸ ಮಾಡಿ ಅದೆಲ್ಲಾ ನಾಲ್ಕು ಗೋಡೆಗಳ ಮಧ್ಯೆಯೇ ಏಕಾಂತದಲ್ಲಿ ಮಾಡಿ ನಿಮ್ಮ ಪ್ರೀತಿಯನ್ನು ಪ್ರದರ್ಶನಕ್ಕೆ ಇಡಬೇಡಿ..!
- ಹುಡುಗಿಯರೇ ದಯಮಾಡಿ ನಿಮ್ಮ ಕೊಬ್ಬು ತುಂಬಿದ ಎದೆಯನ್ನು ಕುಲುಕಿಸುವ ಮೊದಲು ಒಂದು ಅರ್ಥ ಮಾಡಿಕೊಂಡು ಬಿಡಿ ನಿಮ್ಮನ್ನು ಬೇರೆ ಗಂಡಸರ ಜೋಡಿ ನಿಮ್ಮ ಅಪ್ಪ ಅಣ್ಣ ಮೈದುನ ತಮ್ಮಂದಿರೂ ನೋಡುತ್ತಿದ್ದಾರೆಂದು..! ಅವರಿಗಾಗುವ ಕಿರಿ ಕಿರಿಯನ್ನು ಅರ್ಥ ಮಾಡಿಕೊಳ್ಳಿ..
- ಅಂಟಿಯರೆ, ಹುಡುಗಿಯರೇ ನಿಮಗೆ ನಿಮ್ಮ ಸೌಂದರ್ಯದ ಬಗ್ಗೆ ತುಂಬಾ ಹೆಮ್ಮೆ ಇರಬಹುದು..! ನೆನಪಿರಲಿ ಗಂಡು ದೇಹಕ್ಕಿಂತ ನಡತೆಗೆ ಫುಲ್ ಮಾರ್ಕ್ಸ ಕೊಡುತ್ತಾನೆ…!
- ಈಗ ಟಿಕ್ ಟಾಕ್ ಮಾಡುವವರ ಮನಸ್ಥಿತಿ ಹೇಗಿದೆಯೆಂದು ನೋಡೋಣ..
ಅವರಿಗೆ ಹಾಡು, ಹಸೆ ಗೊತ್ತಿಲ್ಲಾ ಕಥೆ, ಕವನ ಕಾದಂಬರಿ ಗೊತ್ತಿಲ್ಲಾ, ರಂಗೋಲಿ, ದೇವರ ಪದ ಹೋಗಲಿ ತುಳಸಿ ಕಟ್ಟೆಗೆ ಸುತ್ತೋದು ಗೊತ್ತಿಲ್ಲಾ ಇಂಥವರಿಂದ ಟಿಕ್ ಟಾಕ್ ಬಿಟ್ಟು ಇನ್ನೇನೂ ಮಾಡಲು ಸಾಧ್ಯ.!?
- ಇಷ್ಟೂ ದಿನ ಟಿಕ್ ಟಾಕಲ್ಲಿ ಒಬ್ಬನೇ ಒಬ್ಬ ಗಂಡಸು ಬನಿಯನ್ ಮೇಲೆ, ಹೋಗಲಿ ಚಡ್ಡಿಯ ಮೇಲೆ ಬಂದ ಉದಾಹರಣೆ ಹೇಳಿ ನೋಡೋಣ.. 🙄
ನೋ ವೇ ಗಂಡಸು ಕಾಮದ ಹೊರತಾಗಿ ಹೆಣ್ಣಿನಷ್ಟೇ ನಾಚಿಕೆ ಹೊಂದಿದ್ದಾನೆ..! ಆದರೆ ನಾರಿಯರನ್ನು ಲಕ್ಷ್ಮೀ, ಸರಸ್ವತಿ, ದುರ್ಗೆಗೆ ಹೋಲಿಸುವ ನಮ್ಮ ದೇಶದಲ್ಲಿ ಹುಡುಗಿಯೊಬ್ಬಳು ಚಡ್ಡಿಯೇ ಹಾಕದೆ ಟಿಕ್ ಟಾಕ್ ಮಾಡುತ್ತಾಳೆಂದರೆ ಏನಿದರ ಅರ್ಥ..??ಮದುವೆಯಾದವಳು ಜಸ್ಟ್ ಸ್ಲಿಪ್ ಹಾಕಿ ಸೀರೆಯ ಹಾಡಿಗೆ ಕುಣಿಯುತ್ತಾಳೆಂದರೆ ನೈತಿಕತೆಯ ಪಾಠ ಹೆಣ್ಣಿಗೆ ಅವಶ್ಯವಾಗ ಬೇಕಿದೆ…!
- ನೆನಪಿಡಿ ಹುಡುಗಿಯರೇ.. ನಮ್ಮ ಇಂಟೆನ್ಷನ್ ಹುಡುಗರ ಗಮನ ಸೆಳೆಯುವುದೇ ಆಗಿದೆ ( ಸೈಕಾಲಜಿ ಪ್ರಕಾರ ಪ್ರತಿ ಹೆಣ್ಣು ಗಂಡಸಿನಿಂದ ಭೇಷ್ ಎನ್ನುವ ಮೆಚ್ಚುಗೆ, ಶಭಾಷ್ ಎನ್ನುವ ನುಡಿ, ವಾವ್ ಎನ್ನಿಸಿಕೊಳ್ಳಬೇಕೆಂದು ಬಯಸುತ್ತಾಳೆ ನನ್ನನ್ನು ಸೇರಿಸಿ..!)
ಆದರೆ ಚಡ್ಡಿ ,ಬ್ರಾ, ಸ್ಲಿಪ್ ಹಾಕಿಕೊಂಡು ಅವರೆದುರು ಟಿಕ್ ಟಾಕ್ ಮಾಡಿದರೆ ಅವರಿಗೆ ಖಂಡಿತ ಇಷ್ಟವಾಗಲಾರದು..! ಸೈಕಾಲಜಿ ಪ್ರಕಾರ ಹೆಣ್ಣಿನ ಅರ್ಧಂಬರ್ಧ ದೇಹ ಊಟ ಮಾಡಿದ ತಟ್ಟೆ ಎತ್ತಿಡದೇ ಇದ್ದರೆ ಆಗುವ ಕಿರಿ ಕಿರಿಯಂತೇ ಅವರಿಗೂ ಆಗುತ್ತದೆ..
- ಫೇಮಸ್ಸಾಗುವ ಭರದಲ್ಲಿ ದೇಹ ತೋರಿಸಿದರೆ ಬಂದ ಫಲವೇನು..!?
ಇನ್ನೊಂದು ವಿಷಯ ನೆನಪಿಡಿ.. ಗಂಡಸು ಕೂಡ ಸೌಂದರ್ಯದ ವಿಷಯದಲ್ಲಿ ಮುಂದಿದ್ದಾನೆ ನಾವು ಸೌಂದರ್ಯವೆಂದು ಭಾವಿಸಿರುವುದು ಕೇವಲ ಭ್ರಮೆ.. ಸಂತಾನಕ್ಕಾಗಿ ಮಾತ್ರ..! ಅವನಂತೆ ನಾವು ಹದಿನಾರು ಗಂಟೆ ದುಡಿಯಲಾರೆವು ನಮ್ಮ ದೇಹ ಕೇವಲ ಸಂತಾನಕ್ಕೆಂದೇ ರೂಪಿಸಲ್ಪಟ್ಟಿದೆ ಅರ್ಥ ಮಾಡಿಕೊಂಡರೆ ಸಾಕು..
- ಬಟ್ಟೆ ದೇಹಕ್ಕಲ್ಲಾ ಮಾನಕ್ಕೆ ದೇಹ ತೋರಿಸಿದರೆ ಹುಡುಗರು ಬೋಲ್ಡ್ ಆಗ್ತಾರೆ ಎನ್ನುವುದು ಭ್ರಮೆ.
ಹುಡುಗರೇ ಮೈತುಂಬ ಬಟ್ಟೆಹಾಕಿಕೊಂಡು ಸಭ್ಯವಾಗಿರಬೇಕಾದರೆ ನಾವೇಕೆ ಅವರ ಮುಂದೆ ಕೀಳಾಗಬೇಕು…?? - ಪ್ಲೀಸ್ ಮನೆಯ ಹೊರಗೆ ಕಾಲಿಡಬೇಕಾದರೆ ಎದೆ ಮೇಲೋಂದು ದುಪ್ಪಟ್ಟಾ ಇರಲಿ.. ಅಟ್ಲೀಸ್ಟ್ ಸ್ಕಾರ್ಪ್ ನಿಂದ ಮುಖ ಮುಚ್ಚಿಕೊಳ್ಳುವ ಬದಲು ನಿಮ್ಮೆದೆ ಮುಚ್ಚಿಕೊಳ್ಳಿ ಹೊಕ್ಕಳು ಕಾಣದ ಹಾಗೇ ಸೀರೆ ಉಟ್ಟುಕೊಳ್ಳಿ..
ನೆನಪಿಡಿ ಗಂಡಸಿಗೆ ಎಲ್ಲಾ ಬಿಚ್ಚಿ ತೋರಿಸುವ ಹೆಣ್ಣಿಗಿಂತ ಎಲ್ಲವನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಕಾಡಿಸುವ, ಕೆರಳಿಸುವ, ಸತಾಯಿಸುವ ಹೆಣ್ಣುಗಳೆಂದರೆ ಬೇಜಾನ್ ಇಷ್ಟ…!
ಮೈತುಂಬ ಬಟ್ಟೆ, ಎದೆಯ ಮೇಲೋಂದು ದುಪ್ಪಟ್ಟಾ, ನಡುವಿನಲ್ಲಿ ನಾಚಿಕೆ, ಹೆರಳಿಗೊಂದು ಕ್ಲಿಪ್ಪು, ಐಬ್ರೋ ನಡುವೆ ಬೊಟ್ಟು ನಿಮ್ಮನ್ನು ಅವರ ಕಣ್ಣಿಗೆ ದೇವತೆಯಂತೆ ಕಾಣಿಸುತ್ತದೆ..!
ಸಾಕಲ್ಲವಾ..?
ಒಂದು ಹೆಣ್ಣಿಗೆ ಇದಕ್ಕಿಂತಲೂ ದೊಡ್ಡ ಬಹುಮಾನ ಯಾವುದಿದೆ..! ದೆವ್ವವಾಗೋದು, ದೇವತೆಯಾಗೋದು ನಮ್ಮ ಕೈಯಲ್ಲಿಯೇ ಇದೆ..!
~ ಮೋನಾಲಿಸಾ
