Emotional Emptiness: ಪ್ರೀತಿ ಎಂದರೆ ಕೇವಲ ಆಕರ್ಷಣೆ ಅಲ್ಲ, ಅದು ಮನಸ್ಸಿನ ಆಳದಿಂದ ಬರುವ ಬಾಂಧವ್ಯ. ಆದರೆ ಕೆಲವೊಮ್ಮೆ ಈ ಪ್ರೀತಿ ಮಹಿಳೆಯ ಹೃದಯದಲ್ಲಿ ಸಂತೋಷಕ್ಕಿಂತಲೂ ಹೆಚ್ಚು ನೋವನ್ನು ಮೂಡಿಸುತ್ತದೆ. ಅವರು ಹೆಚ್ಚು ಹೃದಯಪೂರ್ವಕವಾಗಿ ಸಂಬಂಧವನ್ನು ಕಟ್ಟಿಕೊಳ್ಳುತ್ತಾರೆ, ಆದರೆ ಅದೇ ಬಾಂಧವ್ಯದಲ್ಲಿ ನಿರಾಶೆ, ಅತಿಯಾದ ನಿರೀಕ್ಷೆ ಅಥವಾ ಒಂಟಿತನ ಎದುರಾದಾಗ, ಮನಸ್ಸು ತೀವ್ರವಾಗಿ ನೋವು ಅನುಭವಿಸುತ್ತದೆ.
ಮಹಿಳೆಯರು ತಾವು ಪ್ರೀತಿಸುತ್ತಿರುವವನನ್ನು ಮಾತ್ರ ತಮ್ಮ ಜೀವನದಂತೆಯೇ ಕಾಣುತ್ತಾರೆ.
ಅವನಿಂದ ದೂರವಾಗುವ ಕಲ್ಪನೆಯೇ ಅವರಿಗೆ ಅಸಾಧ್ಯ. ಅವರ ಹೃದಯದಲ್ಲಿ ಒಂದು ಅಚ್ಚೆಯಿಚ್ಚೆ ಇರುತ್ತದೆ “ಅವನು ನನ್ನವನೇ ಆಗಿರಬೇಕು” ಎಂಬ ಆಳವಾದ ಭಾವನೆ. ಆದರೆ ಪ್ರೀತಿಯಲಿ ಆಗುವ ಬದಲಾವಣೆಗಳು, ನಿರೀಕ್ಷೆ ಪೂರಣವಾಗದ ಕ್ಷಣಗಳು ಅವರಿಗೆ ತಡೆಯಲಾಗದ ನೋವನ್ನೂ ತರಿಸುತ್ತವೆ. ಅವರ ಮನಸ್ಸಿನಲ್ಲಿ ಹುಟ್ಟುವ ಆಸೆ, ಆಸಕ್ತಿ, ಆ ವ್ಯಕ್ತಿಯ ಕಾಳಜಿಯ ಬೇಡಿಕೆ ಇವು ಪೂರ್ತಿಯಾಗದಾಗ ಅವರು ತಮ್ಮೊಳಗೇ ಕುಗ್ಗಿ ಹೋಗುತ್ತಾರೆ.(Emotional Emptiness)
ಮಹಿಳೆಯರು ಪ್ರೀತಿಯಲ್ಲಿ ಕೇವಲ ಸಂಬಂಧವನ್ನಷ್ಟೇ ಬಯಸುವುದಿಲ್ಲ, ಅದರ ಜೊತೆಗೆ ಹೃದಯದ ಭದ್ರತೆ, ಪ್ರಾಮಾಣಿಕತೆ ಮತ್ತು ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ಬಯಸುತ್ತಾರೆ. ಇವು ದೊರಕದೆ ಇದ್ದಾಗ, ಅವರ ಭಾವನೆಗಳು ತೀವ್ರ ನೋವಿನ ರೂಪದಲ್ಲಿ ವ್ಯಕ್ತವಾಗುತ್ತವೆ. ಪ್ರೀತಿಗಾಗಿ ಅವರು ತಮ್ಮ ಸಂಪೂರ್ಣ ಹೃದಯವನ್ನೇ ನೀಡುತ್ತಾರೆ, ಆದರೆ ಅದೇ ಪ್ರೀತಿ ಅವರ ಮನಸ್ಸಿನ ಶಕ್ತಿಯನ್ನು ಪರೀಕ್ಷಿಸುತ್ತದೆ. ಅವರು ಬಲಿಷ್ಠರಾಗಿದ್ದರೂ, ಪ್ರೀತಿಯ ನೋವು ಅವರಿಗೆ ಅತಿಯಾದ ಭಾವನಾತ್ಮಕ ನೋವನ್ನು ನೀಡುತ್ತದೆ.
1. ಭಾವನಾತ್ಮಕ ವಿನಿಯೋಗ ಮತ್ತು ಬಂಧನ (Emotional Investment & Attachment
ಮಹಿಳೆಯರು ಪ್ರೀತಿಯಲ್ಲಿ ಮನಸ್ಸಿನ ಎಲ್ಲ ಭಾಗವನ್ನೂ ನೀಡುತ್ತಾರೆ. ಅವರು ಪ್ರೀತಿಸಿದವನು ತಮ್ಮ ಜೀವನದ ಕೇಂದ್ರವಾಗುತ್ತಾನೆ. ಇದು Attachment Theory ಪ್ರಕಾರ ಮನುಷ್ಯನು ತನ್ನ ಆತ್ಮಭದ್ರತೆಯನ್ನು ಸಂಬಂಧಗಳ ಮೂಲಕ ಕಟ್ಟಿಕೊಳ್ಳುತ್ತಾನೆ.
ಮಹಿಳೆಯರು ಹೆಚ್ಚು secure attachment style ಹೊಂದಿರುತ್ತಾರೆ.
ಅವರು ತಮ್ಮ ಪ್ರೀತಿಯ ವ್ಯಕ್ತಿಯಿಂದ ಶಾಂತಿ ಮತ್ತು ಸುರಕ್ಷತೆ ಬಯಸುತ್ತಾರೆ.ಆದರೆ ಎದುರು ವ್ಯಕ್ತಿಯಿಂದ ಅಸ್ಪಷ್ಟತೆ, ನಿರ್ಲಕ್ಷ್ಯ ಅಥವಾ ದೂರವಾಗುವ ವರ್ತನೆ ಕಂಡಾಗ ಅವರು ತಮ್ಮ ಮನಸ್ಸಿನೊಳಗೇ ಕಳವಳ ಅನುಭವಿಸುತ್ತಾರೆ. ಈಗ ಅವರ ಒಳಮನಸ್ಸು ಹೇಳುತ್ತದೆ, “ಅವನು ನನ್ನಿಂದ ದೂರವಾಗುತ್ತಿದ್ದಾನೆ… ನಾನು ಅವನಿಗೆ ಸಾಕಾಗಿದ್ದೇನಾ?” ಎಂಬ ಆತಂಕ, ಅಸುರಕ್ಷತೆ ಮತ್ತು ಖಾಲಿತನ ಉಂಟಾಗುತ್ತದೆ.
2. ನಿರೀಕ್ಷೆ ಮತ್ತು ನಿರಾಶೆ (Expectation & Disappointment)
ಪ್ರೀತಿಯಲ್ಲಿ ಮಹಿಳೆಯರು ನಿಷ್ಠೆ, ಕಾಳಜಿ, ಅರ್ಥಮಾಡಿಕೊಳ್ಳುವಿಕೆಯ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ.
ಅವರು ಎಂದಿಗೂ ಪ್ರೀತಿಯನ್ನು ಅಳೆಯುವುದಿಲ್ಲ, ಅದರಲ್ಲಿಯೇ ಜೀವಿಸುತ್ತಾರೆ.
ಆದರೆ ಎದುರು ವ್ಯಕ್ತಿ ಆಕೆಯ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಇದ್ದಾಗ
ಅವರು ತೀವ್ರ ನಿರಾಶೆ ಅನುಭವಿಸುತ್ತಾರೆ.
Expectation Theory ಪ್ರಕಾರ,
ನಿರೀಕ್ಷೆ ಪೂರಣವಾಗದಾಗ ಮನಸ್ಸು ಅಸಮಾಧಾನ ಮತ್ತು ನೋವಿನ ಸ್ಥಿತಿಗೆ ತಲುಪುತ್ತದೆ.
ಅವರು “ನಾನು ಕೊಟ್ಟಷ್ಟು ಪ್ರೀತಿ ನನಗೆ ಮರಳಿ ಸಿಗಲಿಲ್ಲ” ಎಂದು ಭಾವಿಸುತ್ತಾರೆ.
ಇದರಿಂದ ಸ್ವಲ್ಪ-ಸ್ವಲ್ಪವಾಗಿ ಆತ್ಮವಿಶ್ವಾಸ ಕುಸಿಯುತ್ತದೆ.
3. ಆತ್ಮಗೌರವ ಮತ್ತು ಸ್ವಅಸ್ತಿತ್ವದ ಪ್ರಶ್ನೆ (Self-worth & Identity Conflict)
ಪ್ರೀತಿಯಲ್ಲಿ ಕೆಲವೊಮ್ಮೆ ಮಹಿಳೆಯರು ತಮ್ಮ ಸ್ವಅಸ್ತಿತ್ವವನ್ನು ಮರೆಯುತ್ತಾರೆ. ಅವರು ಆ ವ್ಯಕ್ತಿಯ ಜೀವನದಲ್ಲಿ ಬೆರೆತು ಹೋಗುತ್ತಾರೆ. ಆದರೆ ಒಂದು ದಿನ ಅವರು ಅಲ್ಲಿ ತಮ್ಮ ಸ್ಥಾನ ಕಳೆದುಕೊಂಡಂತೆ ಭಾಸವಾದಾಗ ಅವರ ಆತ್ಮಗೌರವಕ್ಕೆ ಪೆಟ್ಟು ಬೀಳುತ್ತದೆ.
Self-concept Theory ಪ್ರಕಾರ,
ನಾವು ನಮಗೆ ಹೇಗೆ ಕಾಣುತ್ತೇವೋ ಅದೇ ನಮ್ಮ ಮನೋಸ್ಥಿತಿಯನ್ನು ನಿಗದಿಪಡಿಸುತ್ತದೆ.
ಅವರು ತಾವು ಪ್ರೀತಿಗೆ ಅರ್ಹರಲ್ಲ ಎಂಬ ಭಾವನೆ ಬೆಳೆಸಿಕೊಂಡರೆ, ಅದು ಅವರ ಮನಸ್ಸಿನ ಶಕ್ತಿಯನ್ನು ಕುಗ್ಗಿಸುತ್ತದೆ.
4. ಹಾರ್ಮೋನಲ್ ಮತ್ತು ದೈಹಿಕ ಪ್ರಭಾವ (Hormonal & Physiological Factors)
ಮಹಿಳೆಯರ ಮನೋಭಾವಕ್ಕೆ ಹಾರ್ಮೋನ್ಗಳ ಪ್ರಭಾವ ಬಹಳ ದೊಡ್ಡದು. ಪ್ರೀತಿಯ ಸಂಬಂಧದಲ್ಲಿ ಉಂಟಾಗುವ ಒತ್ತಡ, ಭಯ, ಖಿನ್ನತೆ, ವಿದಾಯ —
ಇವು oxytocin ಮತ್ತು dopamine ಹಾರ್ಮೋನ್ಗಳ ಮಟ್ಟವನ್ನು ಬದಲಾಯಿಸುತ್ತವೆ. ಇದರಿಂದ ಅವರು ಹೆಚ್ಚು ಭಾವನಾತ್ಮಕರಾಗುತ್ತಾರೆ, ಅಲ್ಪ ವಿಷಯಕ್ಕೂ ಅಳಲು ಬರುತ್ತದೆ. ಅವರ ದೇಹ ಮತ್ತು ಮನಸ್ಸು ಪರಸ್ಪರ ಸಂಪರ್ಕದಲ್ಲಿರುವುದರಿಂದ,
ಮನಸ್ಸಿನ ನೋವು ದೈಹಿಕ ಅಸಹನೆಗೂ ಕಾರಣವಾಗುತ್ತದೆ. ಉದಾಹರಣೆಗೆ ನಿದ್ರೆ ಕೊರತೆ, ಆಹಾರ ತ್ಯಾಗ, ಶ್ರಮದ ಅಭಾವ ಇತ್ಯಾದಿ.
5. ಸಮಾಜ ಮತ್ತು ಸಂಸ್ಕೃತಿಯ ಪ್ರಭಾವ (Social & Cultural Conditioning)
ನಮ್ಮ ಸಮಾಜ ಮಹಿಳೆಯರಿಗೆ “ಪ್ರೀತಿಯಲ್ಲಿ ತ್ಯಾಗ ಮಾಡು, ಸಹಿಸು” ಎಂದು ಕಲಿಸುತ್ತದೆ.
ಹೀಗಾಗಿ ಅವರು ತಮ್ಮ ಭಾವನೆಗಳನ್ನು ಒಳಗೆ ಅಡಗಿಸಿಕೊಂಡು, ತಾವು ನೋವು ಅನುಭವಿಸುತ್ತಿದ್ದರೂ ಸಹ “ಸರಿ ಇದೆ” ಎಂದು ಹೇಳುತ್ತಾರೆ. ಆದರೆ ಒಳಗೆ ಅವರ ಮನಸ್ಸು ಕೂಗುತ್ತದೆ “ನಾನು ಪ್ರೀತಿಸಿದ್ದೆ ನನ್ನ ತಪ್ಪಾ?”
ಈ ಸಂಸ್ಕೃತಿಪರ ಒತ್ತಡಗಳು ಅವರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುವುದಿಲ್ಲ. ಇದರಿಂದ ಅವರು ಒಳಗೊಳಗೆ ಮುರಿದು ಬೀಳುತ್ತಾರೆ.
6. ಮನೋವೈಜ್ಞಾನಿಕ ಪರಿಣಾಮಗಳು (Psychological Effects)
ಪ್ರೀತಿಯಲ್ಲಿನ ನಿರಾಶೆಯಿಂದ ಮಹಿಳೆಯರಲ್ಲಿ ಕೆಳಗಿನ ಪರಿಣಾಮಗಳು ಕಾಣಬಹುದು:
ಆತಂಕ ಮತ್ತು ಕಳವಳ (Anxiety)
ಖಿನ್ನತೆ (Depression)
ಆತ್ಮವಿಶ್ವಾಸ ಕುಸಿತ
ಸಾಮಾಜಿಕ ಹಿಂದೆ ಸರಿಯುವ ಪ್ರವೃತ್ತಿ
ಅತಿಯಾದ ಭಾವನಾತ್ಮಕ ಸ್ಪಂದನೆ
ಈ ಸ್ಥಿತಿಯಲ್ಲಿ ಅರಿವಿನ ಪುನರ್ನಿರ್ಮಾಣ (cognitive restructuring),
ಮಾನಸಿಕ ಸಾವಧಾನತೆ (mindfulness) ಮತ್ತು ಸ್ವ ದೃಡೀಕರಣ (self-affirmation) ತಂತ್ರಗಳು ಸಹಕಾರಿ.
ನೋವು ತಾತ್ಕಾಲಿಕ, ಆದರೆ ಪ್ರೀತಿ ಶಾಶ್ವತ
ಮಹಿಳೆಯರು ಪ್ರೀತಿಯಲ್ಲಿ ಮುರಿದು ಬೀಳಬಾರದು, ಬದಲಿಗೆ ಬಲವಾಗಬೇಕು. ಪ್ರೀತಿ ಎಂದರೆ ಕಳೆದುಕೊಳ್ಳುವುದು ಅಲ್ಲ, ಆದರೆ ಸ್ವತಃ ತನನ್ನು ಮತ್ತೊಮ್ಮೆ ಕಂಡುಕೊಳ್ಳುವ ಅವಕಾಶ.
“ಪ್ರೀತಿ ನೀಡು, ಆದರೆ ನಿನ್ನ ಆತ್ಮವಿಶ್ವಾಸ ಕಳೆದುಕೊಳ್ಳಬೇಡ.” “ನಿಮ್ಮ ಹೃದಯ ನಾಜೂಕಾದರೂ, ನಿಮ್ಮ ಮನಸ್ಸು ಬಲಿಷ್ಠವಾಗಿರಲಿ.(Emotional Emptiness)
