ಇರಲಿ ದಿಗಂತದತ್ತ ನಿನ್ನ ನೋಟ
ಕಾರ್ಮೋಡ ಮತ್ತು ಬಿಳಲುಗಳೊಂದಿಗೆ ಅದರ ಓಟ
ಪರ್ಯಟನೆಯಲ್ಲೂ ತಟಸ್ಥವಾಗಿವೆ ಹೊರಟ ಮೋಡಗಳು
ಏನೆಂದು ನೋಡಿದರೆ ಅಲ್ಲಿ ಕಂಡಿವೆ ನಿನ್ನ ಮನೆಯ ಬಣ್ಣಗಳು…
ನಿಲ್ಲಲೂ ಆಗದ ಮುಂದೆ ಸಾಗಲೂ ಆಗದ ಚಂಚಲ
ನಿನ್ನ ಮುಗುಳುನಗೆಯ ನೋಡಿ ನಾಚಿ ಮೋಡಗಳಿಗೂ ಮುದ್ದೆಯಾಗುವ ಹಂಬಲ..
ಇದನ್ನೂ ಓದಿ: ಯಾರಿವನು?: ನಿಂದಿಸಿದರೂ ನಗುವವನು, ಮುಟ್ಟಲೋದರೆ ಸಿಗದವನು
ಬೆಳಕೂ ಇರದ ಕತ್ತಲೂ ಕವಿಯದ ನಡುವಣ ಘಳಿಗೆಯದು
ಆ ಘಳಿಗೆಯಲ್ಲೂ ಮೋಡಗಳು ನಿನ್ನ ನೋಡುವ ಕೌತುಕದ ರೀತಿಯದು
ಮಳೆ ಬಂದುಹೋದರೇ ಸಾಕೆನ್ನುವ ಧರೆಗೆ
ಹನಿಯೊಡೆಯಲು ಮೋಡಗಳಿಗೆ ಅಡ್ಡಿಯಾಗಿದೆ ನಿನ್ನ ಕಿರುನಗುವಿನ ಸಂಕೋಲೆ
ಇದನ್ನೂ ಓದಿ: ಗೀತಾಸಾರ: ಒತ್ತಡ ರಹಿತ ಬದುಕು, ಯಶಸ್ವಿ ವೃತ್ತಿ ಜೀವನಕ್ಕೆ ದಾರಿ
ಇನ್ನೆಷ್ಟು ಹೊತ್ತು ಮುಗುಳ್ನಗುತ್ತಲೇ ಇರುವೆ
ಜೋರಾಗಿ ನಕ್ಕುಬಿಡುವೊಮ್ಮೆ
ಮೋಡಗಳು ಕತ್ತರಿಸಿ ಹನಿಯೊಡೆದು ಬರಲಿ
ಈ ಭುವನವ ತಂಪೆರೆಯಲಿ
ಈ ಮನಸ್ಸು ಮಂಥಿಸಲಿ ನಿನ್ನದೇ ಧ್ಯಾನದಲಿ
ನಿನ್ನ ನಗುವಿನ ಚಿತ್ರ ನನ್ನ ಧ್ಯಾನದ ಚಿತ್ತವ ಘರ್ಷಿಸಲಿ!
ಆಕರ್ಷಿಸಲಿ(Clouds and Smile)…
