ಬೆಂಗಳೂರು: ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಅದಕ್ಕೆ ಸಹಕರಿಸದಿದ್ದಾಗ ಯುವತಿಗೆ ಚಾಕು ಇರಿದಿದ್ದ ಆರೋಪಿಯನ್ನು ವೈಟ್ಫೀಲ್ಡ್ ಪೊಲೀಸರು(Whitefield Police) ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಆಂಧ್ರಪ್ರದೇಶ ಮೂಲದ ಬಾಬು ಎಂದು ಗುರುತಿಸಲಾಗಿದೆ.
ಘಟನೆ ಸೆಪ್ಟೆಂಬರ್ 16ರಂದು ಮುಂಜಾನೆ 3 ಗಂಟೆ ಸುಮಾರಿಗೆ ವೈಟ್ ಫೀಲ್ಡ್(Whitefield) ನಲ್ಲಿನ ಕೋ-ಲಿವಿಂಗ್ ಪಿ.ಜಿ.ಯೊಂದರಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ 24 ವರ್ಷದ ಯುವತಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮೂರು ತಿಂಗಳ ಹಿಂದಷ್ಟೇ ಪಿ.ಜಿ.ಯಲ್ಲಿ ಬಾಬುವಿನ ಪರಿಚಯವಾಗಿತ್ತು.
ಇದನ್ನೂ ಓದಿ: Lokayukta Clean Chit: ಯಡಿಯೂರಪ್ಪ ಕುಟುಂಬಕ್ಕೆ ಕ್ಲೀನ್ಚಿಟ್: 12 ಕೋಟಿ ಕಿಕ್ಬ್ಯಾಕ್ ಪ್ರಕರಣ ಅಂತ್ಯ?
ಸೆಪ್ಟೆಂಬರ್ 16ರಂದು ಇದಕ್ಕಿದ್ದಂತೆ ಮುಂಜಾನೆ ಯುವತಿಯ ಕೊಠಡಿಗೆ ನುಗ್ಗಿದ ಬಾಬು, ಆಕೆಯ ಮೇಲೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾನೆ. ಯುವತಿ ಇದಕ್ಕೆ ನಿರಾಕರಿಸಿದಾಗ, ಕೋಪಗೊಂಡ ಆತ ಚಾಕುವಿನಿಂದ ಆಕೆಯ ಬೆನ್ನಿಗೆ ಇರಿದು ಗಾಯಗೊಳಿಸಿದ್ದಾನೆ.
ಅಷ್ಟೇ ಅಲ್ಲದೆ, ಯುವತಿಯ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್ನಲ್ಲಿ ಸೆರೆಹಿಡಿದು, ಆಕೆಯಿಂದ 70 ಸಾವಿರ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದ. ಆಕೆಯ ಬಳಿ ಅಷ್ಟು ಹಣ ಇಲ್ಲ ಎಂದು ಗೊತ್ತಾದಾಗ, ಯುವತಿಯ ಮೊಬೈಲ್ ಫೋನ್ ಕಿತ್ತುಕೊಂಡು ಅದರಿಂದ 14 ಸಾವಿರ ರೂ.ಗಳನ್ನು ಆನ್ಲೈನ್ ಮೂಲಕ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.(Bengaluru Crime)
ಇದನ್ನೂ ಓದಿ: Arecanut cultivation: ರೈತರೇ ಗಮನಿಸಿ! ಅಡಕೆ ಸಸಿ ಆಯ್ಕೆಯಲ್ಲಿ ಈ ತಪ್ಪು ಮಾಡಬೇಡಿ..!
ಗಾಯಗೊಂಡ ಯುವತಿ ತನ್ನ ಸ್ನೇಹಿತೆಗೆ ಕರೆ ಮಾಡಿ, ಆಕೆಯ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾಳೆ. ಆಸ್ಪತ್ರೆಯ ವರದಿ ಮತ್ತು ಯುವತಿಯ ದೂರಿನ ಆಧಾರದ ಮೇಲೆ ವೈಟ್ ಫೀಲ್ಡ್ ಪೊಲೀಸರು(Whitefield Police) ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ಆರಂಭಿಸಿದ್ದರು.
ಸದ್ಯ ಪೋಲಿಸರು ಆರೋಪಿ ಬಾಬುವನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಈ ಹಿಂದೆ ಇದೇ ರೀತಿಯ ಕೃತ್ಯಗಳನ್ನು ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ತನಿಖೆ ಮುಂದುವರೆದಿದೆ. ಎಂದು ಬೆಂಗಳೂರು ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ(Bengaluru Crime).
