Lokayukta Clean Chit: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊನೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಸಮುಚ್ಚಯ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳಿಂದ ಲೋಕಾಯುಕ್ತ ಪೊಲೀಸರು ಕ್ಲೀನ್ಚೀಟ್(Lokayukta Clean Chit) ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಕುಟುಂಬದ ಸದಸ್ಯರು, ಉಚ್ಚಾಟಿತ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕೂಡ ಇದ್ದರು.
ಈ ಪ್ರಕರಣವು 2020ರಲ್ಲಿ ಕೋನದಾಸಪುರದಲ್ಲಿ 116 ಕೋಟಿ ರೂಪಾಯಿ ವೆಚ್ಚದ ವಸತಿ ಸಮುಚ್ಚಯ ನಿರ್ಮಾಣ ಯೋಜನೆಯ ಗುತ್ತಿಗೆಗೆ ಸಂಬಂಧಿಸಿದ್ದು. ರಾಮಲಿಂಗಂ ಕಂಪನಿಗೆ ಕಾಮಗಾರಿ ನೀಡುವಾಗ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿತ್ತು. ಅಂದು ಬಿಡಿಎ ಆಯುಕ್ತರಾಗಿದ್ದ ಜೆ.ಸಿ.ಪ್ರಕಾಶ್ ಮೂಲಕ ಯಡಿಯೂರಪ್ಪ ಅವರ ಕುಟುಂಬಕ್ಕೆ 12 ಕೋಟಿರೂಪಾಯಿ ಕಿಕ್ ಬ್ಯಾಕ್ ನೀಡಲಾಗಿದೆ ಎಂಬ ದೂರು ದಾಖಲಾಗಿತ್ತು. ಇದರ ಜೊತೆಗೆ, ಸರ್ಕಾರದ ಇತರ ಯೋಜನೆಗಳ ಗುತ್ತಿಗೆಯನ್ನೂ ರಾಮಲಿಂಗಂ ಕಂಪನಿಗೆ ನೀಡಲು ಯಡಿಯೂರಪ್ಪ ಅವರ ಕುಟುಂಬ ಪ್ರಭಾವ ಬೀರಿತ್ತು ಎಂಬ ಆರೋಪವೂ ಕೇಳಿಬಂದಿತ್ತು.
ಇದನ್ನೂ ಓದಿ: Arecanut cultivation: ರೈತರೇ ಗಮನಿಸಿ! ಅಡಕೆ ಸಸಿ ಆಯ್ಕೆಯಲ್ಲಿ ಈ ತಪ್ಪು ಮಾಡಬೇಡಿ..!
ಈ ಆರೋಪಗಳ ಬಗ್ಗೆ ತನಿಖೆ ನಡೆಸಿದ ಲೋಕಾಯುಕ್ತದ ಡಿವೈಎಸ್ಪಿ ಎಂ.ಎಚ್.ಸತೀಶ್ ನೇತೃತ್ವದ ತಂಡಕ್ಕೆ ಯಾವುದೇ ದೃಢವಾದ ಸಾಕ್ಷ್ಯಗಳು ಸಿಕ್ಕಿಲ್ಲ. ಸುಮಾರು ಒಂದು ವರ್ಷದ ದೀರ್ಘ ತನಿಖೆಯ ನಂತರವೂ ಕಿಕ್ ಬ್ಯಾಕ್ ಆರೋಪಕ್ಕೆ ಪುಷ್ಟಿ ನೀಡುವಂತಹ ದಾಖಲೆಗಳು ಸಿಗದ ಕಾರಣ, ನ್ಯಾಯಾಲಯಕ್ಕೆ ‘ಬಿ’ ವರದಿ (ಬಿ-ರಿಪೋರ್ಟ್) ಸಲ್ಲಿಸಲಾಗಿದೆ(Lokayukta Clean Chit).
ಈ ವರದಿಯಿಂದ ಪ್ರಕರಣದ ಎಲ್ಲಾ ಒಂಬತ್ತು ಆರೋಪಿಗಳು ಕ್ಲೀನ್ಚೀಟ್ ಪಡೆದಿದ್ದಾರೆ.
ಕ್ಲೀನ್ ಚಿಟ್ ಪಡೆದ ಆರೋಪಿಗಳ ಪಟ್ಟಿ ಹೀಗಿದೆ:
ಎ1: ಬಿ.ಎಸ್. ಯಡಿಯೂರಪ್ಪ, ಎ2: ಬಿ.ವೈ. ವಿಜಯೇಂದ್ರ, ಎ3: ಶಶಿಧರ್ ಮರಡಿ (ಯಡಿಯೂರಪ್ಪ ಅವರ ಮೊಮ್ಮಗ), ಎ4: ಸಂಜಯ್ ಶ್ರೀ (ಯಡಿಯೂರಪ್ಪ ಅವರ ಸಂಬಂಧಿ), ಎ5: ಚಂದ್ರಕಾಂತ್ ರಾಮಲಿಂಗಂ (ಗುತ್ತಿಗೆದಾರ), ಎ6: ಎಸ್.ಟಿ. ಸೋಮಶೇಖರ್, ಎ7: ಜೆ.ಸಿ. ಪ್ರಕಾಶ್ (ನಿವೃತ್ತ ಬಿಡಿಎ ಆಯುಕ್ತ), ಎ8: ಕ್ರೆಸೆಂಟ್ ರವಿ (ಮಧ್ಯವರ್ತಿ), ಎ9: ವಿರೂಪಾಕ್ಷ ಮರಡಿ (ಯಡಿಯೂರಪ್ಪ ಅವರ ಅಳಿಯ)
