Arecanut cultivation: ಇತ್ತೀಚಿನ ದಿನಗಳಲ್ಲಿ ನಮ್ಮ ಅನ್ನದಾತರು ವಾಣಿಜ್ಯ ಬೆಳೆಗಳಿಗೆ(Comercial Crops) ಹೆಚ್ಚಿನ ಒಲವು ತೋರುತ್ತಿರುವಂತೆ ಕಾಣುತ್ತಿದೆ. ಹೆಚ್ಚಾಗಿ ಅಡಕೆ ಮತ್ತು ತೆಂಗು ನೆಡುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ(Arecanut cultivation). ಆದರೂ ಸಹ ಕೆಲ ರೈತರಲ್ಲಿ ಒಂದು ಗೊಂದಲ ಸೃಷ್ಟಿಯಾಗಿದೆ. ಅಡಕೆ ಸಸಿಯ ಆಯ್ಕೆ ಸಮಯದಲ್ಲಿ ಯಾವ ಸಸಿಗಳನ್ನು ಆಯ್ಕೆ ಮಾಡಬೇಕು? ಪ್ಯಾಕೆಟ್ ಸಸಿಗಳ ಅಥವಾ ತೆಂಡೆ ಸಸಿಗಳ (ತೇವಡೆ) ಎಂಬ ಗೊಂದಲ ಉಂಟಾಗುತ್ತದೆ.
ಅಡಕೆ ಸಸಿಯನ್ನು(Arecanut cultivation) ಎರಡು ಪದ್ಧತಿಯನ್ನು ಅನುಸರಿಸಿ ಬೆಳೆಸುತ್ತಾರೆ. ಒಂದು ಭೂಮಿಯ ಮೇಲ್ಪದರದಲ್ಲಿ ಸಸಿಗಳನ್ನು ನಾಟಿ ಮಾಡಿ ಬೆಳೆಸುವುದು, (ತೆಂಡೆ ಸಸಿ ಅಥವಾ ತೇವಡೆ ಸಸಿ ) ಮತ್ತೊಂದು ಅಡಿಕೆ ಸಸಿಗಳನ್ನು ಪಾಕೆಟ್ ಅಥವಾ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ನಾಟಿ ಮಾಡಿ ಬೆಳೆಸುವುದು (ಪ್ಯಾಕೆಟ್ ಸಸಿಗಳು). ಆದರೆ ಎರಡು ಪದ್ದತಿಯಲ್ಲಿ ಬೆಳೆಯುವ ಸಸಿಗಳನ್ನು ಕೆಲವರು ಒಪ್ಪುತ್ತಾರೆ, ಕೆಲವರು ಒಪ್ಪುವುದಿಲ್ಲ.
ಗಿಡಗಳಿಗೆ ಪ್ಲಾಸ್ಟಿಕ್ ಚೀಲವೆ ಪ್ರಪಂಚ
ಪ್ಯಾಕೆಟ್ ಅಥವಾ ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ನೆಟ್ಟು ಬೆಳೆಸುವ ಸಸಿಗಳನ್ನು ಪ್ಯಾಕೆಟ್ ಸಸಿಗಳು ಎನ್ನುವರು. ಒಂದು ಕೆಜಿ, ಒಂದುವರೆ ಕೆಜಿ, ಎರಡು ಕೆಜಿ, ಬ್ಯಾಗ್ ಗಳಲ್ಲಿ ಮರಳು, ಕಾಂಪೋಸ್ಟ್ ಗೊಬ್ಬರ, ಕೆಂಪುಮಣ್ಣು, ಮಿಶ್ರಣ ಮಾಡಿ ಹಂತಹಂತವಾಗಿ ಪ್ಲಾಸ್ಟಿಕ್ ಬ್ಯಾಗಿನಲ್ಲಿ ತುಂಬಿ ನಂತರ ಮೇಲ್ಬಾಗದಲ್ಲಿ ಸಸಿಯನ್ನು ನಾಟಿ ಮಾಡುತ್ತಾರೆ.
ಇವುಗಳಿಗೆ ವಾರಕ್ಕೆ ಎರಡು ಅಥವಾ ಮೂರು ಬಾರಿ ನೀರನ್ನು ನೀಡುತ್ತಾರೆ. ಸಾಮಾನ್ಯವಾಗಿ ಪಾಕೆಟ್ ಸಸಿಗಳ ಆಯ್ಕೆ ಒಳ್ಳೆಯದು. ಎಂದರೆ, ಭೂಮಿಯಲ್ಲಿ ನಾಟಿ ಮಾಡಿದ ಸಸಿಗಳಿಗೆ ಹೋಲಿಸಿದರೆ, ಇವು ಸಾಕಷ್ಟು ಭಿನ್ನವಾಗಿರುತ್ತವೆ. ಪ್ಯಾಕೆಟ್ ಸಸಿಗಳಿಗೆ ತನ್ನ ಪ್ಲಾಸ್ಟಿಕ್ ಚೀಲವೇ ಪ್ರಪಂಚವಾಗಿರುತ್ತದೆ. ಅವುಗಳಿಗೆ ಮಣ್ಣಿನ ಗುಣಧರ್ಮ, ವಿನ್ಯಾಸ ಇವುಗಳ ಬಗ್ಗೆ ತಿಳಿದಿರುವುದಿಲ್ಲ. ಬೇರುಗಳು ಹೊಸದನ್ನು ಹುಡುಕಲು ಪ್ರಯತ್ನಿಸುವುದಿಲ್ಲ. ಕೇವಲ ನಾವು ನೀಡಿದ ಗೊಬ್ಬರ ನೀರನ್ನು ತೆಗೆದುಕೊಂಡು ಬೆಳೆಯುತ್ತಿರುತ್ತವೆ.
ಆದರೆ ಅವುಗಳಿಗೆ ಮಣ್ಣಿನ ಸ್ವಾರಸ್ಯದ ಅರಿವಿರುವುದಿಲ್ಲ. ಇವುಗಳನ್ನು ಸುಲಭವಾಗಿ ಸ್ಥಳಾಂತರಿಸ ಬಹುದು. ನಾವು ಭೂಮಿ ನೆಟ್ಟಾಗ ಅವುಗಳ ಪಾಡು ದೇವರಿಗೆ ಮುಟ್ಟುತ್ತದೆ. ಭೂಮಿಯ ತಾಪ ಜೊತೆಗೆ ಸೂರ್ಯನ ತಾಪ ಇವುಗಳ ಮಧ್ಯೆ ಅವು ಸಮರ್ಪಕವಾಗಿ ಬೆಳೆಯಲು ವಿಫಲವಾಗಬಹುದು. ಒಣಗುವ ಸಾಧ್ಯತೆ ಇರುತ್ತದೆ. ಬೆಳವಣಿಗೆ ಕುಂಠಿತ ವಾಗುವ ಹೆಚ್ಚಾಗಿರುತ್ತದೆ. ಮೇಲ್ಪದರದಲ್ಲಿ ನಾಟಿ ಮಾಡಲಾದ ಸಸಿಗಳು ಇವು ಮೊಳಕೆ ಹೊಡೆಯುವ ದಿನದಿಂದ ಭೂಮಿಯ ವಾತಾವರಣ ದೊಂದಿಗೆ ಹೊಂದಿ ಕೊಂಡು ಬೆಳೆದಿರುತ್ತವೆ. ಭೂಮಿಯಲ್ಲಿ ಸಿಗುವ ಕೆಲವು ಲವಣಾಂಶ ಗಳನ್ನು ಹೀರಿಕೊಂಡು ಬೆಳೆದಿರುತ್ತವೆ.
ಬೇರುಗಳು ವಿಶಾಲವಾಗಿ ಹರಡಿಕೊಂಡು ಹೊಸದನ್ನು ಹುಡುಕುತ್ತಾ ಹೋಗುತ್ತಿರುತ್ತವೆ. ಒಟ್ಟಾರೆ ಹೇಳುವು ದಾದರೆ, ತೆಂಡೆ ಸಸಿಗಳು ಭೂಮಿಯ ಸಂಪೂರ್ಣ ವಾತಾವರಣಕ್ಕೆ ಹೊಂದಿಕೊಂಡಿ ರುತ್ತವೆ. ಬಿಸಿಲು, ಭೂಮಿಯ ತಾಪ ಇತರ ಸಮಸ್ಯೆಗಳನ್ನು ಎದುರಿಸಿ ಅನುಭವವಿ ರುತ್ತದೆ. ಆದರೆ ಇವುಗಳನ್ನು ಭೂಮಿಯಿಂದ ಚೌಕಾಕಾರದಲ್ಲಿ ಹಗೆದು ತೆಗೆಯ ಬೇಕಾಗುತ್ತದೆ.
ಈ ಕೆಲಸ ಸ್ವಲ್ಪ ಕಷ್ಟಕರವಾದದ್ದು ನಿಜ. ಸ್ವಲ್ಪ ಯಾಮಾರಿದರೂ ಅಡಿಕೆ ಸಸಿಗಳು(Arecanut cultivation) ನಾಶವಾಗಿಬಿಡುತ್ತವೆ. ಚೌಕ ಕಾರದ ತೆಂಡೆ ಹೊಡೆಯದಂತೆ ಸಸಿಗಳನ್ನು ಕಿತ್ತು ಗುಂಡಿಯೊಳಗೆ ನಾಟಿ ಮಾಡಬೇಕಾಗುತ್ತದೆ. ಇದು ಕೆಲವರಿಗೆ ಸ್ವಲ್ಪ ಕಷ್ಟಕರ ಎನಿಸುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಪ್ಯಾಕೆಟ್ ಸಸಿ ಅಥವಾ ತಂಡ ಸಸಿ ಯಾವುದೇ ಆಗಿರಲಿ ಸಸಿಗಳ ತಳಿ, ಗುಣಗಳು ಮತ್ತು ಬೇಸಾಯ ಕ್ರಮಗಳು ಮುಖ್ಯವಾಗಿರುತ್ತದೆ. ಪ್ಯಾಕೆಟ್ ಸಸಿಗಳು ತಂಡೆ ಸಸಿಗಳಿಗೆ ಎಂದು ಸಮನಾಗದೂ. ಅವುಗಳ ಗರಿಮೆ, ಜನಪ್ರಿಯತೆ ಅವಕ್ಕೆ ಅವೇ ಸಾಟಿ.
