Islamabad: ಸದಾ ಭಾರತದ ಮೇಲೆ ಉಗ್ರ ದಾಳಿ ನಡೆಸಲು ಸಂಚುರೂಪಿಸುವ ಪಾಕಿಸ್ತಾನದಲ್ಲಿ(Pakistan) ಇದೀಗ ಭಯೋತ್ಪಾದಕರು ಪಾಕ್ ಅರೆಸೇನಾಪಡೆ (Paramilitary)ಯ ಪ್ರಧಾನ ಕಚೇರಿ ಮೇಲೆ ಸಶಸ್ತ್ರ ಉಗ್ರರು ಆತ್ಮಾಹುತಿ ಬಾಂಬ್ಗಳನ್ನು ಬಳಸಿ ದಾಳಿ ನಡೆಸಿದರು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಭೀಕರ ದಾಳಿಯಲ್ಲಿ ಕನಿಷ್ಠ ಮೂವರು ಫೆಡರಲ್ ಕಾನ್ಸ್ಟ್ರಾಬುಲರಿ (FC) ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಪ್ರಾಣ ಹಾನಿ ಮತ್ತು ಗಾಯಾಳುಗಳ ಸಂಪೂರ್ಣ ಮಾಹಿತಿ
ದಾಳಿಯ ಕುರಿತು ಮಾಹಿತಿ ನೀಡಿರುವ ಪೇಶಾವರ ಪೊಲೀಸ್ ಮುಖ್ಯಸ್ಥ ಮಿನ್ನಾ ಸಯೀದ್, ಸಾವನ್ನಪ್ಪಿದ ಮೂವರು ಸಿಬ್ಬಂದಿ ಎಫ್ಸಿ ಕಚೇರಿಯ ಪ್ರವೇಶ ದ್ವಾರದಲ್ಲಿ ನಿಯೋಜನೆಗೊಂಡಿದ್ದರು ಎಂದು ಖಚಿತಪಡಿಸಿದ್ದಾರೆ. ಅವರಲ್ಲದೇ, ಈ ಘಟನೆಯಲ್ಲಿ ಒಟ್ಟು ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: 53rd Chief Justice India: ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಪ್ರಮಾಣ ವಚನ ಸ್ವೀಕಾರ
ದಾಳಿಯ ಕಾರ್ಯತಂತ್ರ:
ದಾಳಿಕೋರರ ಪೈಕಿ ಒಬ್ಬ ಉಗ್ರನು ತನ್ನ ದೇಹಕ್ಕೆ ಕಟ್ಟಿದ್ದ ಸ್ಫೋಟಕಗಳನ್ನು ಮುಖ್ಯ ಗೇಟ್ ಬಳಿಯೇ ಸಿಡಿಸಿಕೊಂಡು ಆತ್ಮಾಹುತಿ ಮಾಡಿಕೊಂಡಿದ್ದಾನೆ. ಉಳಿದ ಇಬ್ಬರು ದಾಳಿಕೋರರು ಕಟ್ಟಡದೊಳಗೆ ನುಗ್ಗಲು ಪ್ರಯತ್ನಿಸಿದ್ದು, ಅವರನ್ನು ಭದ್ರತಾ ದಳಗಳು ತಕ್ಷಣದ ಪ್ರತಿಕ್ರಿಯೆಯಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಚೇರಿ ಸಂಕೀರ್ಣದ ಒಳಗೆ ಮತ್ತೊಬ್ಬ ಆತ್ಮಾಹುತಿ ಬಾಂಬರ್ ಪ್ರವೇಶಿಸಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮತ್ತು ಬಾಂಬ್ ಸ್ಪೋಟದ ಶಬ್ದ
ದಾಳಿ ಆರಂಭವಾದ ಕೂಡಲೇ, ಪೇಶಾವರದ ನಿವಾಸಿಗಳು ತೀವು ಆತಂಕಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಎಫ್ಸಿ ಪ್ರಧಾನ ಕಚೇರಿ ಇರುವ ದಿಕ್ಕಿನಿಂದ ಸರಣಿ ಸ್ಪೋಟಗಳು ಮತ್ತು ಗುಂಡಿನ ಸದ್ದು ಕೇಳಿಬಂದ ಬಗ್ಗೆ ಹಲವು ಜನರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಉಗ್ರರು ಎಸಗಿದ ಈ ಎರಡು ಪ್ರಮುಖ ಸ್ಫೋಟಗಳು ಸ್ಥಳೀಯರಲ್ಲಿ ಭೀತಿಯನ್ನು ಹುಟ್ಟಿಸಿವೆ.
ಇದನ್ನೂ ಓದಿ: Tumkur News: ಪ್ರೇಕ್ಷಕರನ್ನು ರಂಜಿಸಿದ ಎಸ್ಐಟಿ ವಿದ್ಯಾರ್ಥಿಗಳ ಯಕ್ಷಗಾನ
ಫ್ರಾಂಟಿಯರ್ ಕಾರ್ಪ್ಸ್ (FC) ಪ್ರಧಾನ ಕಚೇರಿಯ ಕಾರ್ಯತಂತ್ರದ ಮಹತ್ವ
ಫ್ರಾಂಟಿಯರ್ ಕಾರ್ಡ್ಸ್ ಪ್ರಧಾನ ಕಚೇರಿಯು ಪೇಶಾವರದ(Peshavara) ಕಾರ್ಯತಂತ್ರವಾಗಿ ಪ್ರಮುಖ ಸ್ಥಳದಲ್ಲಿದೆ. ಈ ಪ್ರದೇಶವು ಅಫ್ಘಾನಿಸ್ತಾನದ(Afganistan) ಗಡಿಗೆ ಮತ್ತು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಿಗೆ ಸಮೀಪದಲ್ಲಿರುವುದರಿಂದ, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿದೆ. ಇಂತಹ ಪ್ರಮುಖ ಭದ್ರತಾ ನೆಲೆಯ ಮೇಲೆ ದಾಳಿ ನಡೆದಿರುವುದು ಈ ಪ್ರದೇಶದ ಭದ್ರತಾ ವ್ಯವಸ್ಥೆಯಲ್ಲಿನ ದುರ್ಬಲತೆಯನ್ನು ತೋರಿಸುತ್ತದೆ.
