New Delhi: ಇತ್ತೀಚೆಗೆ ಪಾಕ್ ಮತ್ತು ಭಾರತ ನಡುವೆ ನಡೆದ ‘ಆಪರೇಷನ್ ಸಿಂದೂರ್’ ನಂತರ ಉಂಟಾದ ಬಿಕ್ಕಟ್ಟು ಇನ್ನೂ ಸಂಪೂರ್ಣವಾಗಿ ಶಾಂತವಾಗಿಲ್ಲ. ಯುದ್ಧದ ವಾತಾವರಣ ಸ್ವಲ್ಪ ಶಾಂತವಾಗಿದ್ದರೂ, ಎರಡು ದೇಶಗಳ ನಡುವಿನ ಸಂಬಂಧ ಸೂಕ್ಷ್ಮವಾಗಿದೆ. ಈ ಸಂದರ್ಭದಲ್ಲೇ, ಭಾರತದ ಪ್ರಮುಖ ವ್ಯಾಪಾರ ಪಾಲುದಾರನಾಗಿರುವ ಸೌದಿ ಅರೇಬಿಯಾ, ಪಾಕಿಸ್ತಾನದ ಜೊತೆ ಹೊಸ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ(Defence Agreement). ಇದು ಭವಿಷ್ಯದಲ್ಲಿ ಭಾರತಕ್ಕೆ ಹೊಸ ಸವಾಲುಗಳನ್ನು ತರಬಹುದೇ ಎಂಬ ಚರ್ಚೆಗಳು ಇದೀಗ ಆರಂಭವಾಗಿವೆ.
ಪಾಕಿಸ್ತಾನದ ರಕ್ಷಣಾ ಸಚಿವ ಖ್ಯಾಜಾ ಆಸಿಫ್, ಸೌದಿ ಅರೇಬಿಯಾ ಈ ಒಪ್ಪಂದದ(Defence Agreement) ಭಾಗವಾಗಿ ತಮ್ಮ ದೇಶವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. ಸೌದಿ ಮತ್ತು ಪಾಕಿಸ್ತಾನ ಬುಧವಾರ ಸಹಿ ಹಾಕಿದ ಈ ಒಪ್ಪಂದವು ನ್ಯಾಟೋ ಮಾದರಿಯದ್ದು ಎಂದು ಅವರು ವಿವರಿಸಿದ್ದಾರೆ. ಈ ಒಪ್ಪಂದವು ಮುಸ್ಲಿಂ ರಾಷ್ಟ್ರಗಳು ತಮ್ಮನ್ನು ರಕ್ಷಿಸಿಕೊಳ್ಳಲು ಒಟ್ಟಾಗಿ ನಿಲ್ಲುವ ಅಗತ್ಯವಿದೆ ಎಂಬ ತತ್ತ್ವದ ಮೇಲೆ ಆಧಾರಿತವಾಗಿದೆ ಎಂದಿದ್ದಾರೆ. ಈ ಮೈತ್ರಿಕೂಟಕ್ಕೆ(Defence Agreement) ಇನ್ನೂ ಕೆಲವು ಅರಬ್ ದೇಶಗಳು ಸೇರುವ ಸಾಧ್ಯತೆಯೂ ಇದೆ ಎಂದು ಅವರು ಸುಳಿವು ನೀಡಿದ್ದಾರೆ.
ಇದನ್ನೂ ಓದಿ: Tumkur News: “ಸ್ವಚ್ಛತೆ” ಪ್ರತಿಯೊಬ್ಬರ ಜವಾಬ್ದಾರಿ : ಪಿ ಡಿ ಓ ತಿಪ್ಪೇಸ್ವಾಮಿ
ಈ ಬೆಳವಣಿಗೆಯ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದಾರೆ. ಭಾರತ ಮತ್ತು ಸೌದಿ ಅರೇಬಿಯಾ(Soudi Arabia) ನಡುವೆ ದಶಕಗಳಿಂದಲೂ ಉತ್ತಮ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳಿವೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯವಹಾರ ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ಭಾರತದ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಸೂಕ್ಷ್ಮವಾಗಿ ವರ್ತಿಸುತ್ತದೆ ಎಂಬ ವಿಶ್ವಾಸವನ್ನು ಭಾರತ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Love Story: “ನಿನ್ನ ರೀತಿ ಪ್ರೀತಿ”- ಭಾವನೆಗಳು ಅಳಿಸುವುದಿಲ್ಲ, ಅವು ಬದುಕಿನ ಭಾಗವಾಗುತ್ತವೆ
ಒಟ್ಟಾರೆಯಾಗಿ, ಈ ಹೊಸ ಒಪ್ಪಂದವು ಭದ್ರತಾ ವಿಷಯದಲ್ಲಿ ಪಾಕಿಸ್ತಾನಕ್ಕೆ ಬಲ ತುಂಬಿದರೂ, ಸೌದಿ ಅರೇಬಿಯಾ ಭಾರತದೊಂದಿಗಿನ ತನ್ನ ಆರ್ಥಿಕ ಮತ್ತು ರಾಜಕೀಯ ಸಂಬಂಧಗಳನ್ನು ಪರಿಗಣಿಸದ ಇರಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಒಪ್ಪಂದ ಭವಿಷ್ಯದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ.(Defence Agreement)
