ಚಿಕ್ಕನಾಯಕನಹಳ್ಳಿ: ಸ್ವಚ್ಛವಾದ ಪರಿಸರದಿಂದ ಮಾತ್ರ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸಾಧ್ಯ . ಅದೇ ರೀತಿ ಈ ಆಂದೋಲನ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ ಪ್ರತಿದಿನವೂ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಪ್ಪೇಸ್ವಾಮಿ ತಿಳಿಸಿದರು.
ಹೊಯ್ಸಳಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳಾರ ಗ್ರಾಮದಲ್ಲಿ “ಸ್ವಚ್ಛತಾ ಹೀ ಸೇವಾ” ಪ್ರಾಕ್ಷಿಕದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಪ್ಪೇಸ್ವಾಮಿ, “ಸ್ವಚ್ಛತೆ ಕೇವಲ ಸರ್ಕಾರಿ ಯೋಜನೆ ಅಲ್ಲ, ಇದು ಪ್ರತಿಯೊಬ್ಬರ ಜೀವನ ಶೈಲಿ ಆಗಬೇಕು. ದೇವಾಲಯ, ಶಾಲೆ, ಬೀದಿ, ಮನೆ ಎಲ್ಲೆಡೆ ಸ್ವಚ್ಛತೆ ಕಾಪಾಡಿದಾಗ ಮಾತ್ರ ಗ್ರಾಮ ಸುಂದರವಾಗುತ್ತದೆ. ಸ್ವಚ್ಛತೆಗೆ ಮಕ್ಕಳಿಂದ ಹಿರಿಯರ ತನಕ ಎಲ್ಲರೂ ಕೈಜೋಡಿಸಬೇಕು. ನಮ್ಮ ಆರೋಗ್ಯ ಮತ್ತು ಅಭಿವೃದ್ದಿ ಎರಡೂ ಸ್ವಚ್ಛತೆಯ ಮೇಲೆಯೇ ಅವಲಂಬಿತವಾಗಿವೆ” ಎಂದು ಹೇಳಿದರು(Tumkur News).
ಗ್ರಾಮ ಪಂಚಾಯತಿ ಕಾರ್ಯದರ್ಶಿ ಭಾಸ್ಕರ್ ರಾಜು ಮಾತನಾಡಿ, “ಸ್ವಚ್ಛತೆ ಕೇವಲ ಗ್ರಾಮ ಪಂಚಾಯತಿ ಸಿಬ್ಬಂದಿಯ ಹೊಣೆಗಾರಿಕೆಯಲ್ಲ. ಪ್ರತಿಯೊಬ್ಬ ನಾಗರೀಕನ ಕರ್ತವ್ಯವೂ ಹೌದು ತನ್ನ ಮನೆ, ಬೀದಿ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ನಿಜವಾದ ಅರ್ಥದಲ್ಲಿ ಸ್ವಚ್ಛ ಗ್ರಾಮ ನಿರ್ಮಾಣ ಸಾಧ್ಯ. ಶಾಲಾ ಮಕ್ಕಳಲ್ಲಿ ಸ್ವಚ್ಛತಾ ಸಂಸ್ಕಾರ ಬೆಳೆಸುವುದು ನಮ್ಮ ಜವಾಬ್ದಾರಿ. ಅವರು ಸ್ವಚ್ಛತೆಗೆ ಮಹತ್ವ ಕೊಟ್ಟರೆ ಭವಿಷ್ಯದ ಪೀಳಿಗೆಯೂ ಆರೋಗ್ಯಕರ ಜೀವನ ನಡೆಸಬಹುದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಲೋಕಮ್ಮ ಭೂತರಾಜು, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ತಿಪ್ಪೇಸ್ವಾಮಿ, ಕಾರ್ಯದರ್ಶಿ ಭಾಸ್ಕರ್ ರಾಜು, ಬಿಲ್ ಕಲೆಕ್ಟರ್ ಕಾಂತರಾಜು, ನೀರುವಿತರಕರಾದ ಲೋಕೇಶ್, ಶಿವಣ್ಣ, ವಸಂತಪ್ಪ, ಭೂತಣ್ಣ, ದಾಸಪ್ಪ, ಸದಾಶಿವ ಮತ್ತು ಗ್ರಾಮಸ್ಥರು ಸೇರಿದಂತೆ ಪ್ರಮುಖರು ಇದ್ದರು.(Tumkur News)
