Reading Time: < 1 minute
ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸಮೀಪದ ಬಂಗ್ಲೆ ಗುಡ್ಡೆ ಬಳಿಯಲ್ಲಿ ಇಂದು ಎಸ್.ಐ.ಟಿ ತಂಡ ನಡೆಸಿದ ಕಾರ್ಯಾಚರಣೆ ಯಲ್ಲಿ ಒಂಭತ್ತು ಸ್ಥಳಗಳಲ್ಲಿ ಮಾನವನ ಕಳೇಬರ ಪತ್ತೆಯಾಗಿದೆ ಎನ್ನಲಾಗಿದ್ದು ಅಧಿಕಾರಿಗಳು ಮಹಜರು ಪ್ರಕ್ರಿಯೆ ಮುಂದುವರಿಸಿದ್ದಾರೆ.

ಬಂಗ್ಲೆ ಗುಡ್ಡೆ ಅರಣ್ಯ ಪ್ರದೇಶದಲ್ಲಿ ಈ ಮೊದಲೇ ಗುರುತಿಸಿದ್ದ ಸ್ಥಳಗಳ ಅನತಿ ದೂರದಲ್ಲೇ ಇಂದು ಅಧಿಕಾರಿಗಳು ಶೋಧ ನಡೆಸಿದ ವೇಳೆ ಕೆಲವೊಂದು ಮೂಳೆಗಳು ಭೂಮಿಯ ಮೇಲ್ಭಾದಲ್ಲೇ ಪತ್ತೆಯಾಗಿದ್ದು,ಅಲ್ಲದೇ ಮಣ್ಣಿನ ಅಡಿಯಲ್ಲಿ ಹುದುಗಿಕೊಂಡಿದ್ದ ಬಟ್ಟೆ ಬರೆಗಳು ಕೂಡಾ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಮೂಳೆ ಪತ್ತೆಯಾದ ಭಾಗದ ಮಣ್ಣಿನ ಮಾದರಿಯನ್ನು ಸಹ ಸೋಕೋ ತಂಡ ಸಂರಕ್ಷಿಸಿದ್ದು, ಅಧಿಕಾರಿಗಳು ತನಿಖೆಗೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
