ಮಂಗಳೂರು:ಟ್ರಕ್ಕಿಂಗ್ ತೆರಳಿದ್ದ ವೇಳೆ ಗುಡ್ಡದಿಂದ ಜಾರಿ ಬಿದ್ದು ಗಂಭೀರ ಗಾಯಗೊಂಡ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರು ಮೂಡುಬಿದ್ರೆ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ.
ಮೃತರನ್ನು ಮಂಗಳೂರಿನಲ್ಲಿ ಅಂತಿಮ ವರ್ಷದ ಸಿ.ಎ ವಿದ್ಯಾರ್ಥಿಯಾದ ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಟ್ಟಂಪಾಡಿ ನಿವಾಸಿ ಗೋಪಾಲಕೃಷ್ಣ ಭಟ್ ಎಂಬವರ ಪುತ್ರ ಮನೋಜ್ (22ವ.)ಎಂದು ಗುರುತಿಸಲಾಗಿದೆ.
ಮನೋಜ್ ಹಾಗೂ ಆತನ ಸ್ನೇಹಿತ ಮೂಡುಬಿದ್ರೆ ಸಮೀಪದ ಪುರಾತನ ಐತಿಹಾಸಿಕ ಕೊಣಾಜೆಕಲ್ಲು ದೇವಸ್ಥಾನಕ್ಕೆ ತೆರಳಿದ್ದು, ಬಳಿಕ ಅಲ್ಲಿನ ಪ್ರಕೃತಿ ಸೌಂದರ್ಯ ವೀಕ್ಷಿಸಲು ಗುಡ್ಡಕ್ಕೆ ಹತ್ತಿದ್ದರು ಎನ್ನಲಾಗಿದೆ. ಈ ವೇಳೆ ಆಯತಪ್ಪಿ ಜಾರಿ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮೂಡುಬಿದ್ರೆ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
