ಬೆಂಗಳೂರು: ಖ್ಯಾತ ಉದ್ಯಮಿ ಮತ್ತು ಅಫ್ನಾನ್ ಕನ್ಸ್ಟ್ರಕ್ಷನ್ ಮುಖ್ಯಸ್ಥ ಕೆಜಿಎಫ್ ಬಾಬು, ತಮ್ಮ ವೈಯಕ್ತಿಕ ಸಂಪಾದನೆಯಿಂದ 400 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ವಿನಿಯೋಗಿಸಿ, ಚಿಕ್ಕಪೇಟೆ ಕ್ಷೇತ್ರದ 10,000 ನಿರ್ಗತಿಕ ಕುಟುಂಬಗಳಿಗೆ ಸೂರು ಕಲ್ಪಿಸುವ ಬೃಹತ್ ಲೋಕೋಪಕಾರಿ ಯೋಜನೆಗೆ ಮುಂದಾಗಿದ್ದಾರೆ.
ಈ ಯೋಜನೆ ಕೇವಲ ವಸತಿ ಯೋಜನೆಯಲ್ಲ, ಬದಲಿಗೆ ತಮ್ಮ ದಿವಂಗತ ತಾಯಿಯ ಕನಸಿನಂತೆ ಈ ಕಾರ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. “ಕಷ್ಟಪಟ್ಟು ಸಂಪಾದಿಸಿದ ಸಂಪತ್ತಿಗೆ ನಿಜವಾದ ಅರ್ಥ ಸಿಗುವುದು ಅದು ಸಮಾಜದ ಬಡವರ ಸೇವೆಗೆ ಬಳಕೆಯಾದಾಗ,” ಎಂಬ ದೃಢ ನಂಬಿಕೆ ನನಗಿದೆ. ಈ ಸಮಾಜ ಸೇವಾ ಯೋಜನೆಯ ಹಿಂದಿನ ಪ್ರೇರಣೆ ತಮ್ಮ ತಾಯಿಯವರೇ ಎಂದು ಕೆಜಿಎಫ್ ಬಾಬು ತಿಳಿಸಿದ್ದಾರೆ.
ಇದನ್ನೂ ಓದಿ: ಕರುನಾಡಿನ ಸಾಹಸಸಿಂಹನಿಗೆ ಈ ಗತಿಯೇ? ರಾತ್ರೋರಾತ್ರಿ ವಿಷ್ಣು ಸಮಾಧಿ ಧ್ವಂಸ, ಅಭಿಮಾನಿಗಳ ಕಣ್ಣೀರ ಕಟ್ಟೆಯೊಡೆದಿದೆ!
ನಿರ್ಗತಿಕರಿಗೆ ಸ್ವಂತ ಮನೆ ಕಟ್ಟಿಸಿಕೊಡಬೇಕೆಂಬುದು ಅವರ ತಾಯಿಯ ಬಹುದೊಡ್ಡ ಕನಸಾಗಿತ್ತು. ಆ ಕನಸನ್ನು ನನಸು ಮಾಡುವ ಪ್ರಾಮಾಣಿಕ ಸಂಕಲ್ಪದೊಂದಿಗೆ, ಯಾವುದೇ ರಾಜಕೀಯ ಲಾಭದ ಆಕಾಂಕ್ಷೆಯಿಲ್ಲದೆ, ಸಂಪೂರ್ಣ ಸಾಮಾಜಿಕ ಕಳಕಳಿಯಿಂದ ಈ ಮಹಾಯಜ್ಞಕ್ಕೆ ಅವರು ಕೈ ಹಾಕಿದ್ದಾರೆ..
ಪಾರದರ್ಶಕತೆಯೇ ಬುನಾದಿಯಾದ ಜನಸೇವೆ
ಈ ಬೃಹತ್ ಲೋಕೋಪಕಾರಿ ಯೋಜನೆಯಲ್ಲಿ ಪಾರದರ್ಶಕತೆಗೆ ಮೊದಲ ಆದ್ಯತೆ ನೀಡಲಾಗಿದೆ. ಯೋಜನೆಯ ಸಂಪೂರ್ಣ 400 ಕೋಟಿ ರೂಪಾಯಿ ವೆಚ್ಚವನ್ನು ತಮ್ಮ ಕಾನೂನುಬದ್ಧ, ತೆರಿಗೆ ಪಾವತಿಸಿದ ವೈಯಕ್ತಿಕ ಆದಾಯದಿಂದಲೇ ಭರಿಸುವುದಾಗಿ ಕೆಜಿಎಫ್ ಬಾಬು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮೋದಿಗೆ ಕುರ್ಚಿಯಲ್ಲಿ ಕೂರುವ ನೈತಿಕ ಹಕ್ಕಿಲ್ಲ, ತಕ್ಷಣ ರಾಜೀನಾಮೆ ನೀಡಲಿ! – ಸಿಎಂ ಸಿದ್ದರಾಮಯ್ಯ ಆಗ್ರಹ
ಈ ಸೇವೆಗೆ ಸರ್ಕಾರದ ಸಹಕಾರದ ನಿರೀಕ್ಷೆ ಇದೆ.
ಈ ಮಹತ್ಕಾರ್ಯವನ್ನು ಸಾಕಾರಗೊಳಿಸಲು ಸರ್ಕಾರದ ಬೆಂಬಲ ಅತ್ಯಗತ್ಯ. ಆದ್ದರಿಂದ, ಸೂಕ್ತ ಜಾಗದ ಗುರುತಿಸುವಿಕೆಯಿಂದ ಹಿಡಿದು, ಮನೆಗಳಿಗೆ ನೀರು, ವಿದ್ಯುತ್ ಸಂಪರ್ಕ ಕಲ್ಪಿಸುವವರೆಗೆ ವಿವಿಧ ಸರ್ಕಾರಿ ಇಲಾಖೆಗಳ ಸಹಕಾರವನ್ನು ಕೋರಿ ಕೆಜಿಎಫ್ ಬಾಬು ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ.
ಸರ್ಕಾರದ ಅನುಮೋದನೆ ದೊರೆತರೆ, ಬೆಂಗಳೂರಿನ ಇತಿಹಾಸದಲ್ಲಿ ವ್ಯಕ್ತಿಯೊಬ್ಬರು ಕೈಗೊಳ್ಳುತ್ತಿರುವ ಅತಿದೊಡ್ಡ ವಸತಿ ದಾನ ಯೋಜನೆ ಇದಾಗಲಿದೆ.
