Dry Fish Benefits: ಅಂದಿನಿಂದ ಇಂದಿನವರೆಗೆ ಮೀನು ಜನರ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮೀನು ಕರಾವಳಿ ಭಾಗದಲ್ಲಿನ ಜನರ ಪ್ರತಿದಿನದ ಆಹಾರ. ಆದರೆ ತಾಜಾ ಮೀನು ಸದಾ ಲಭ್ಯವಿಲ್ಲದ ಪ್ರದೇಶಗಳಲ್ಲಿ ವಿಶೇಷವಾಗಿ ಒಳನಾಡು ಮತ್ತು ಹಳ್ಳಿಗಳಲ್ಲಿ ಒಣಗಿದ ಮೀನು (Dry Fish) ಮುಖ್ಯ ಆಹಾರವಾಗಿದೆ. ವಿಶೇಷವಾಗಿ ಈ ಚಿಕ್ಕದಾದಾ, ಬಿಸಿಲಲ್ಲಿ ಒಣಗಿಸಲಾದ ಮೀನುಗಳು ನಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶ ದೊರೆಯುವಂತೆ ಮಾಡುತ್ತದೆ(Dry Fish Benefits). ಪ್ರೋಟೀನ್ನಿಂದ ಹಿಡಿದು ಓಮೆಗಾ-3 ಆಸಿಡ್, ಕ್ಯಾಲ್ಸಿಯಂ, ವಿಟಮಿನ್ ಡಿ, ಮತ್ತು ಬಹುಮಟ್ಟಿನ ಖನಿಜಾಂಶಗಳನ್ನು ಒಳಗೊಂಡಿರುವ ಈ ಆಹಾರ ಪದಾರ್ಥ ಆರೋಗ್ಯಕ್ಕೆ ಅತ್ಯಮೂಲ್ಯವಾದದ್ದು.
ಈ ಒಣ ಮೀನುಗಳು(Dry Fish) ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಹಾಗೆಯೇ ದೀರ್ಘಕಾಲ ಉಳಿಯುತ್ತವೆ, ಮತ್ತು ನೂರಾರು ವಿಧಗಳಲ್ಲಿ ಅಡುಗೆಯಾಗುತ್ತದೆ. ಆದರೆ ಬಹುತೇಕ ಮಂದಿ ಒಣ ಮೀನು ಆರೋಗ್ಯಕ್ಕೆ ಅಷ್ಟು ಸರಿಯಲ್ಲ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ನಿಯಮಿತವಾಗಿ ಮತ್ತು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಒಣ ಮೀನು ಕೂಡ ಶಕ್ತಿವರ್ಧಕ ಆಹಾರವಾಗುತ್ತದೆ. ಇಂತಹ ಒಣಮೀನನ್ನು ನಿತ್ಯ ಆಹಾರದಲ್ಲಿ ಸೇವಿಸುವುದರಿಂದ ಆಗುವ ಆರೋಗ್ಯ ಲಾಭಗಳೇನು? ಎಂಬುದನ್ನು ಲೇಖನದಲ್ಲಿ ತಿಳಿಯೋಣ.
ಇದನ್ನೂ ಓದಿ: How to Identify Fresh Fish: ಮೀನು ಖರೀದಿಸುವಾಗ ತಾಜಾ ಮೀನುಗಳನ್ನು ಗುರುತಿಸುವುದು ಹೇಗೆ?, ಈ ಟಿಪ್ಗಳನ್ನು ಫಾಲೋ ಮಾಡಿ

- ಪ್ರೋಟೀನ್ನ ಅತ್ಯುತ್ತಮ ಮೂಲ
ಒಣಮೀನು (Dry Fish) ಸಾಕಷ್ಟು ಪ್ರೋಟೀನ್(protein) ನಿಂದ ತುಂಬಿರುತ್ತದೆ. ಶರೀರದ ಪೋಷಣೆ, ಸ್ನಾಯುಗಳ ಬೆಳವಣಿಗೆ, ಚರ್ಮದ ಕಾಂತಿಗೆ ಪ್ರೋಟೀನ್ ಅತ್ಯುಪಯುಕ್ತ. ಶಾಕಾಹಾರಿ ಆಹಾರದಿಂದ ಬೇಕಾದಷ್ಟು ಪ್ರೋಟೀನ್ ದೊರೆಯದವರಿಗಾಗಿ ಒಣಮೀನು ಉತ್ತಮ ಆಯ್ಕೆಯಾಗಿದೆ.
- ಓಮೆಗಾ-3 ಫ್ಯಾಟಿ ಆಸಿಡ್ನ ಶ್ರೇಷ್ಠ ಮೂಲ
ಒಣಮೀನಿನಲ್ಲಿ (Dry Fish) ಓಮೆಗಾ-3 ಫ್ಯಾಟಿ ಆಸಿಡ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಇದು ಹೃದಯದ ಆರೋಗ್ಯವನ್ನು ರಕ್ಷಿಸಿ, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೆ, ಮೆದುಳಿನ ಬೆಳವಣಿಗೆಗೂ ಸಹಕಾರಿಯಾಗುತ್ತದೆ.
- ಹೆಚ್ಚಿನ ಕ್ಯಾಲ್ಸಿಯಂ ಮತ್ತು ಫಾಸ್ಫರಸ್
ಒಣಮೀನಿನಲ್ಲಿ (Dry Fish) ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಇರುತ್ತದೆ. ಈ ಅಂಶಗಳು ಎಲುಬುಗಳು ಮತ್ತು ಹಲ್ಲುಗಳ ಆರೋಗ್ಯಕ್ಕಾಗಿ ಅತ್ಯಂತ ಅಗತ್ಯವಿದೆ. ಮಕ್ಕಳು ಮತ್ತು ತೀರಾ ವಯಸ್ಸಾದವರು ಇದನ್ನು ಸೇವಿಸಿದರೆ ಎಲುಬು ದುರ್ಬಲತೆ ತಡೆಯಬಹುದು.
- ಹೆಚ್ಚಿನ ಐರನ್ ಮತ್ತು ದೆಹದಲ್ಲಿ ಹೀಮೋಗ್ಲೋಬಿನ್ ಹೆಚ್ಚಳ
ಒಣಮೀನಿನಲ್ಲಿ (Dry Fish) ಐರನ್ ಅಧಿಕ ಪ್ರಮಾಣದಲ್ಲಿದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ರಕ್ತದ ಹಿಮೋಗ್ಲೋಬಿನ್ ಮಟ್ಟ ಸುಧಾರಣೆಯಾಗುತ್ತದೆ. ವಿಶೇಷವಾಗಿ ಅನಿಮಿಯಾ ಸಮಸ್ಯೆ ಇರುವವರಿಗೆ ಇದು ಪ್ರಯೋಜನಕಾರಿ.
- ಕಡಿಮೆ ಕೊಬ್ಬು, ಹೆಚ್ಚು ಪೌಷ್ಟಿಕಾಂಶ
ಒಣಮೀನು (Dry Fish) ಸಾಮಾನ್ಯವಾಗಿ ಕಡಿಮೆ ಕೊಬ್ಬು ಹೊಂದಿರುತ್ತದೆ. ಇದರ ಅರ್ಥವೆಂದರೆ, ನೀವು ಅಧಿಕ ಕ್ಯಾಲೊರಿಯೆಂದು ಆತಂಕಪಡದೇ ಇದನ್ನು ಸೇವಿಸಬಹುದು. ಜೊತೆಗೆ, ಇದು ಮಸಾಲೆ ಅಥವಾ ಎಣ್ಣೆ ಬಳಕೆಯಿಲ್ಲದೆ ಕೂಡ ರುಚಿಕರವಾಗಿರುತ್ತದೆ.
- ಶೀತ, ಮೂಳೆ ನೋವುಗಳ ನಿವಾರಣೆ
ಹಿರಿಯ ವಯಸ್ಕರು ಅಥವಾ ಸಂಧಿವಾತ, ಗಾಯದ ನೋವು ಅನುಭವಿಸುವವರು ಒಣಮೀನನ್ನು ಸೇವಿಸುವುದರಿಂದ ಬೇಗ ಗುಣಮುಖರಾಗುತ್ತಾರೆ. ಹಾಗೆಯೇ ಶೀತ ಸಮಸ್ಯೆ ಇರುವವರು ಇದನ್ನು ಸೇವಿಸಬಹುದು. ಇದರಲ್ಲಿರುವ ನೈಸರ್ಗಿಕ ತಾಪವರ್ಧಕ ಗುಣ ನರಗಳಲ್ಲಿನ ರಕ್ತ ಸಂಚಾರ ಹತೋಟಿಯಲ್ಲಿ ಇಡುತ್ತದೆ.
- ಉಪ್ಪು ಮತ್ತು ಸಂರಕ್ಷಣಾ ಪ್ರಮಾಣ
ಒಣಮೀನನ್ನು ಉಪ್ಪಿನೊಂದಿಗೆ ಇಟ್ಟು ಶೇಖರಿಸಲಾಗುತ್ತದೆ. ಇದರಿಂದಾಗಿ ಇವುಗಳಲ್ಲಿ ಉಪ್ಪಿನ ಪ್ರಮಾಣ ಹೆಚ್ಚು ಇರುತ್ತದೆ. ಇದರಿಂದ ಉಪ್ಪಿನಿಂದ ಜ್ಞಾನದ ಶಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಪ್ರಾಚೀನ ಕಾಲದಿಂದಲೂ ಇದೆ. ಆದರೆ ಅಧಿಕ ಸೇವನೆಯಿಂದ ರಕ್ತದೊತ್ತಡಕ್ಕೆ ಅಪಾಯವಾಗಬಹುದು, ಇದಕ್ಕಾಗಿ ನಿಯಮಿತ ಪ್ರಮಾಣದಲ್ಲಿಯೇ ಸೇವಿಸಬೇಕು.
ಇದನ್ನೂ ಓದಿ: Blood Pressure: ರಕ್ತದೊತ್ತಡವನ್ನು ಹಗುರವಾಗಿ ಪರಿಗಣಿಸಬೇಡಿ, ನಿಮ್ಮ ಜೀವವೇ ಹೋಗುತ್ತೆ
ಎಚ್ಚರಿಕೆಗಳು:
- ಒಣಮೀನಿನಲ್ಲಿ ಉಪ್ಪಿನ ಪ್ರಮಾಣ ಹೆಚ್ಚು ಇರುತ್ತದೆ, ಅದನ್ನು ಮಿತವಾಗಿ ಸೇವಿಸುವುದು ಉತ್ತಮ.
- ಉತ್ತಮವಾಗಿ ಒಣಗಿಸಿದ, ಗಾಳಿಯಾಡುವ ಸ್ಥಳದಲ್ಲಿ ಶೇಖರಿಸಲಾದ ಒಣಮೀನು ಮಾತ್ರ ಸೇವಿಸಲು ಆಯ್ಕೆಮಾಡಬೇಕು.
- ಮಾರುಕಟ್ಟೆಯಲ್ಲಿ ಕೆಟ್ಟ ಗುಣಮಟ್ಟದ ಒಣಮೀನು ಅಥವಾ ಕೀಟನಾಶಕಗಳಿಂದ ವಾಯುಮಾಲಿನ್ಯದಿಂದ ಹಾನಿಯಾಗಿರುವ ಮೀನುಗಳು ಇರುತ್ತವೆ. ಆದ್ದರಿಂದ ವಿಶ್ವಾಸಾರ್ಹ ಅಂಗಡಿಯಿಂದ ಮಾತ್ರ ಖರೀದಿ ಮಾಡಬೇಕು.
ಒಣಮೀನು ಕಡಿಮೆ ಬೆಲೆಯಲ್ಲಿಯೇ ಹೆಚ್ಚಿನ ಪೋಷಕಾಂಶ ದೊರೆಯುವ ಆಹಾರವಾಗಿದೆ. ಇದು ಆರೋಗ್ಯಕರ ಹೃದಯ, ಎಲುಬುಗಳು, ರಕ್ತದ ಶುದ್ಧತೆ, ಚರ್ಮದ ರಕ್ಷಣೆ ಮತ್ತು ಮೆದುಳಿನ ಕಾರ್ಯಕ್ಷಮತೆಗೆ ಸಹಾಯಕವಾಗಿದೆ. ನಿಮ್ಮ ಆಹಾರದಲ್ಲಿ ನಿಯಮಿತವಾಗಿ ವಾರಕ್ಕೆ ಒಂದು ಬಾರಿಯಾದರೂ ಒಣಮೀನನ್ನು ಸೇವಿಸಿದರೆ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಕಾಣಬಹುದು.
