Menstrual Health in Adolescent Girls: ಹೆಣ್ಣು ಮಕ್ಕಳು ವಯಸ್ಸಿಗೆ ಬರೋ ಸಮಯದಲ್ಲಿ ದೇಹದಲ್ಲಿ ತುಂಬಾ ಬದಲಾವಣೆಗಳು ಆಗ್ತವೆ. ಅದರಲ್ಲಿ ಮುಖ್ಯವಾದದ್ದು ಋತುಶಕ್ರ ಆರಂಭವಾಗೋದು.(Menstrual Health) ಇದು ಪ್ರತಿ ಹುಡುಗಿಯ ಜೀವನದಲ್ಲಿ ಹೊಸ ಹಂತದ ಆರಂಭ. ದೈಹಿಕವಾಗಿ ಬದಲಾವಣೆಗಳ ಜೊತೆಗೆ ಮನಸ್ಸಿನಲ್ಲೂ ಹಲವಾರು ವಿಚಾರಗಳು ಮೂಡುತ್ತವೆ. ಆರಂಭದಲ್ಲಿ ಶರೀರದ ಬದಲಾವಣೆಗಳ ಬಗ್ಗೆ ನಾಚಿಕೆ ಅಥವಾ ಗೊಂದಲ ಉಂಟಾಗಬಹುದು. ಕೆಲವರಿಗೆ ಅಸಹನೆ, ಚಿಡಿಚಿಡಿ, ಅಥವಾ ದುಃಖ ಕೂಡ ಆಗಬಹುದು. ಇದು ಸರ್ವಸಾಧಾರಣ — ಹಾರ್ಮೋನ್ ಬದಲಾವಣೆಗಳಿಂದ ಆಗೋ ಪ್ರಕ್ರಿಯೆ ಅಷ್ಟೇ.
ಇದನ್ನೂ ಓದಿ: Tumkur News: ಮಾಧ್ಯಮಗಳ ಆದ್ಯತೆ ಆಕ್ರೋಶವಲ್ಲ, ಜಾಗೃತಿ: ಪ್ರೊ. ಕೆ.ವಿ. ನಾಗರಾಜ್
ಈ ಸಮಯದಲ್ಲಿ ಮಾನಸಿಕ ಬದಲಾವಣೆಗಳು ಮತ್ತು ಬೆಳವಣಿಗೆ
ಹೆಣ್ಣು ಮಕ್ಕಳ ವಯಸ್ಸು ಹೆಚ್ಚಾದಂತೆ ಮನಸ್ಸಿನಲ್ಲಿ ಹಲವಾರು ಬದಲಾವಣೆಗಳು ಆಗ್ತಾ ಹೋಗುತ್ತವೆ. ಅದು ನಮ್ಮ ಬೆಳವಣಿಗೆಯ ಸಹಜ ಭಾಗ. ನಾವು ಹೇಗೆ ಯೋಚಿಸ್ತೀವಿ, ಹೇಗೆ ಪ್ರತಿಕ್ರಿಯಿಸುತ್ತೀವಿ ಎನ್ನುವುದನ್ನೂ ಇದು ಬದಲಾಯಿಸುತ್ತದೆ.
- ತನ್ನ ದೇಹದ ಬಗ್ಗೆ ಕಾಳಜಿ ಬರೋದು
ಈ ಸಮಯದಲ್ಲಿ ಹೆಣ್ಣು ಮಕ್ಕಳು ತಮ್ಮ ದೇಹದ ಬದಲಾವಣೆಗಳನ್ನು ಗಮನಿಸ್ತಾರೆ.
“ನಾನು ಬದಲಾಗ್ತಾ ಇದ್ದೇನೆ”, “ನನ್ನ ದೇಹ ಹೇಗೆ ಕಾಣ್ತಿದೆ?” ಅನ್ನೋ ವಿಚಾರಗಳು ಬರುತ್ತವೆ.
ಇದರಿಂದ ಸ್ವಚ್ಛತೆ, ಆಹಾರ, ನಿದ್ರೆ ಮತ್ತು ಆರೋಗ್ಯದ ಕಡೆ ಗಮನ ಕೊಡೋ ಅಭ್ಯಾಸ ಬರುತ್ತದೆ.
ತಮ್ಮ ದೇಹವನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನೋ ಅರಿವು ನಿಧಾನವಾಗಿ ಬೆಳೆಯುತ್ತದೆ. - ಆತ್ಮವಿಶ್ವಾಸ ಮತ್ತು ಆತ್ಮಸಮ್ಮಾನ:
ಈ ಹಂತದಲ್ಲಿ ತಮ್ಮ ಮೇಲೆ ನಂಬಿಕೆ (confidence) ಬೆಳೆಸಿಕೊಳ್ಳೋದು ಪ್ರಾರಂಭವಾಗುತ್ತದೆ.
ಕೆಲವೊಮ್ಮೆ ಗೊಂದಲ ಅಥವಾ ನಾಚಿಕೆ ಉಂಟಾದರೂ, ಅದನ್ನು ಸ್ವೀಕರಿಸೋದು ಮುಖ್ಯ.
“ನಾನು ಹೇಗಿದ್ದರೂ ನಾನು ಚೆನ್ನಾಗಿದ್ದೇನೆ” ಅನ್ನೋ ಭಾವನೆ ಬೆಳೆಸಿಕೊಳ್ಳಬೇಕು. - ಭಾವನಾತ್ಮಕ ಬದಲಾವಣೆಗಳು:
ಇನ್ನು ಕೆಲವೊಮ್ಮೆ ಚಿಡಿಚಿಡಿ, ಬೇಸರ ಅಥವಾ ಅಳುವಂತೆ ಅನಿಸಬಹುದು. ಇದು ಹಾರ್ಮೋನಲ್ ಬದಲಾವಣೆಗಳಿಂದ ಆಗೋ ಸಹಜ ಪ್ರಕ್ರಿಯೆ.
ಇಂತಹ ಸಮಯದಲ್ಲಿ ಶಾಂತವಾಗಿರೋದು, ಆಳವಾದ ಉಸಿರಾಟ, ಅಥವಾ ತಮಗೆ ಇಷ್ಟವಾದ ಕೆಲಸ ಮಾಡುವುದರಿಂದ ಒತ್ತಡ ಕಡಿಮೆ ಆಗುತ್ತದೆ. - ಸಹಾಯ ಮತ್ತು ಬೆಂಬಲ:
ತಾಯಿ, ಶಿಕ್ಷಕ ಅಥವಾ ಸ್ನೇಹಿತರ ಜೊತೆ ಮಾತನಾಡಿದರೆ ಮನಸ್ಸು ಹಗುರವಾಗುತ್ತದೆ.
ತಮ್ಮ ಭಾವನೆಗಳನ್ನು ಒಳಗೆ ಇಟ್ಟುಕೊಳ್ಳದೆ ಹಂಚಿಕೊಳ್ಳವುದು ಒಳ್ಳೆಯದು.
ಇಂತಹ ಸಮಯದಲ್ಲಿ ಕೌನ್ಸೆಲರ್ಗಳು ಅಥವಾ ನಂಬಿಕೆಯ ವ್ಯಕ್ತಿಗಳ ಸಹಾಯ ಪಡೆದುಕೊಳ್ಳಬಹುದು. - ಸಮತೋಲನದಲ್ಲಿರುವುದು:
ಯೋಗ, ಧ್ಯಾನ, ಸಂಗೀತ, ಓದು ಅಥವಾ ಚಿತ್ರಕಲೆ ಮನಸ್ಸಿಗೆ ಶಾಂತಿ ಕೊಡುತ್ತದೆ.
ಸರಿಯಾದ ಆಹಾರ ಮತ್ತು ವಿಶ್ರಾಂತಿ ತುಂಬಾ ಮುಖ್ಯ.
ತಮಗೇ ತಾವು ಪ್ರೀತಿಯಿಂದ ವರ್ತಿಸೋದು — “ನಾನು ಬೆಳೆದು ಬದಲಾಗುತ್ತಿದ್ದೀನಿ, ಇದು ಸಹಜ” ಅನ್ನೋ ಮನೋಭಾವ ಬೆಳೆಸಿಕೊಳ್ಳಬೇಕು.
ಹೆಣ್ಣುಮಕ್ಕಳಿಗೆ ವಯೋಸಹಜ ಬದಲಾವಣೆಯ ಸಮಯದಲ್ಲಿ ನೀಡುವ ಮಾನಸಿಕ ಬೆಂಬಲವು ಅವರ ಭವಿಷ್ಯ ನಿರ್ಮಾಣಕ್ಕೆ ಆಧಾರವಾಗುತ್ತದೆ. ಅರ್ಥಮಾಡಿಕೊಳ್ಳುವ ಮನಸ್ಸು, ಪ್ರೋತ್ಸಾಹದ ಮಾತುಗಳು ಮತ್ತು ಪ್ರೀತಿಯ ಸ್ಪರ್ಶದಿಂದ ಅವರು ಆತ್ಮವಿಶ್ವಾಸ, ಧೈರ್ಯ ಮತ್ತು ಮಾನಸಿಕ ಸ್ಥಿರತೆ ಪಡೆಯುತ್ತಾರೆ. ಇವು ಅವರ ಬೆಳವಣಿಗೆಯನ್ನು ಆರೋಗ್ಯಕರ ಮತ್ತು ಸಮತೋಲನಯುತವಾಗಿಸುತ್ತದೆ.(Menstrual Health)
