Asia Cup: ಯುಎಇ(UAE) ನಲ್ಲಿ ಬಹುನಿರೀಕ್ಷಿತ ಏಷ್ಯಾ ಕಪ್ ಟಿ20(Asia Cup T20 cricket) ಸಮೇಪಿಸುತ್ತಿದೆ ಈಗಾಗಲೇ ಟೀಮ್ ಇಂಡಿಯಾ( Team India) ತಂಡಪ್ರಕಟಗೊಂಡಿದ್ದು ಸ್ಟಾರ್ ಆಟಗಾರರ ದಂಡು ಎದುರಾಳಿಗಳನ್ನು ಕಾಡಲು ಸಿದ್ಧವಾಗಿದೆ ಇದೆ ಸಮಯದಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ಆರಂಭಿಕ ಆಟಗಾರ ಸಂಜು ಸ್ಯಾಮ್ಸಂನ್(Sanju Samson) ದೇಶಿಯಲಿಗ್ನಲ್ಲಿ ಅಬ್ಬರದ ಶತಕ ತಿಳಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಸಂಪೂರ್ಣ ಸಿದ್ದ ಎಂಬುದರ ಸ್ಪಷ್ಟ ಸೂಚನೆಯಾಗಿದೆ.
ಏಷ್ಯಾಕಪ್ ತಂಡದಲ್ಲಿ ಮೂವರು ಆರಂಭಿಕ ಆಟಗಾರರು ಇರುವುದರಿಂದ ಸಂಜು ಸ್ಯಾಮ್ಸಂನ್ ಅವರ ಸ್ಥಾನದ ಮೇಲೆ ತೂಗುವತಿ ನೇತಾಡುತ್ತಿದೆ ಈ ನಡುವೆ ಅವರು ಕೇರಳ ಕ್ರಿಕೆಟ್ ಲೀಗ್ ನಲ್ಲಿ ಮಿಂಚಿದ್ದಾರೆ ಏರಿಸ್ ಕೊಲ್ಲಂ ಸೈಲೆರ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಶತಕ ಬಾರಿಸುವ ಮೂಲಕ ತಂಡದಲ್ಲಿ ತಮ್ಮನ್ನು ಪ್ರಮುಖರ ಸಾಲಿನಲ್ಲಿ ಪರಿಗಣಿಸುವಂತೆ ಪರೋಕ್ಷವಾಗಿ ಆಯ್ಕೆಸಂಸ್ಥೆಗೆ ಸೂಚನೆ ನೀಡಿದ್ದಾರೆ.
ಸಂಜು ಸಿಡಿಸಿದ ಶತಕ, ಆಯ್ಕೆದಾರರಿಗೆ ಕಡಕ್ ಸಂದೇಶ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಏರಿಸ್ ಕೊಲ್ಲಂ ಸೈಲೆರ್ಸ್, ವಿಷ್ಣು ವಿನೋದ್(94) ಮತ್ತು ನಾಯಕ ಸಚಿನ್ ಬೇಬಿ(91) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್ ಗೆ 236 ರನ್ ಗಳ ಬೃಹತ್ ಮತ ಕೊಲೆ ಹಾಕಿತು.
ಇದನ್ನೂ ಓದಿ: Teenage Pregnancy: ರಾಜ್ಯದಲ್ಲಿ ಹೆಚ್ಚಿದ ಬಾಲ ಗರ್ಭಿಣಿಯರ ಸಂಖ್ಯೆ: ಎಚ್ಚೆತ್ತುಕೊಳ್ಳದಿದ್ದರೆ ಅಪಾಯ!
ಸಂಜು ಸ್ಯಾಂಸನ್ ಅವರ ಸ್ಫೋಟಕ ಶತಕ
237 ರನ್ಗಳ ಕಠಿಣ ಗುರಿ ಬೆನ್ನತ್ತಿದ್ದ ಕೊಚ್ಚಿ ತಂಡಕ್ಕೆ ಸಂಜು ಸ್ಯಾಮ್ಸಂನ್ ಮತ್ತು ವಿನೋದ್ ಉತ್ತಮ ಆರಂಭ ನೀಡಿದರು. ಆರಂಭದಿಂದಲೇ ಸ್ಪೋಟಕ ಆಟಕ್ಕಿಳಿದ ಸಂಜು ಕೇವಲ 16 ಎಸೆತಗಳಲ್ಲಿ ಅರ್ಧ ಶತಕಾ ಪೂರೈಸಿದರು. ತಮ್ಮ ಸ್ಫೋಟಕ ಆಟವನ್ನು ಮುಂದುವರಿಸಿದ ಅವರು, ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿ ಅಬ್ಬರಿಸಿದರು.
ಇದನ್ನೂ ಓದಿ: India America Trade: ಅಮೇರಿಕಾದ ಸುಂಕದ ಬಿಸಿಗೂ ಮಣಿಯಾದ ಭಾರತ: ಎಲ್ಲಿ ಲಾಭವೂ ಅಲ್ಲೇ ವ್ಯವಹಾರ
ಶತಕದ ನಂತರವೂ ಅವರ ಆಟ ನೀಲ್ಲಲಿಲ್ಲ. ಅಂತಿಮವಾಗಿ 14 ಬೌಂಡರಿ ಮತ್ತು ಏಳು ಸಿಕ್ಸರ್ ಗಳ ಸಹಾಯದಿಂದ 121ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಧ್ಯಮ ಕ್ರಮಾಂಕದ ಮಹಮದ್ ಅಶೀಕ್ ಅಜೇಯ್ಯ 45 ರನ್ ಗಳಿಸಿ ಗೆಲುವಿಗೆ ಭರ್ಜರಿ ಸಾತ್ ನೀಡಿದರು. ಸಂಜು ಅವರ ಈ ಅಮೋಘ ಪ್ರದರ್ಶನ ಟೀಮ್ ಇಂಡಿಯಾಗೆ ಹೊಸ ಭರವಸೆ ಮೂಡಿಸಿದ್ದು ಏಷ್ಯಾಕಪ್ ನಲ್ಲಿ ಅವರ ಪಾತ್ರ ಮಹತ್ವದ್ದಾಗಿರಲಿದೆ.
