ನವದೆಹಲಿ: ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ, ಯಾವುದೇ ಉತ್ತಮ ಒಪ್ಪಂದ ಸಿಗುವ ಕಡೆಗಳಿಂದ ತೈಲವನ್ನು ಖರೀದಿಸುವುದನ್ನು ಮುಂದುವರಿಸಲಿದೆ ಎಂದು ಅಮೆರಿಕಾಗೆ(America) ಭಾರತ(India) ಖಡಕ್ ಉತ್ತರ ನೀಡಿದೆ. ಈ ಮಾತುಗಳನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯ್ ಕುಮಾರ್ ಅವರು ಟಿಎಎಸ್ಎಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಮೆರಿಕಾ, ಭಾರತವು ರಷ್ಯಾದಿಂದ(Russia) ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದಕ್ಕೆ ಹೆಚ್ಚುವರಿ ಸುಂಕವನ್ನು ವಿಧಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ
ಈ ನಿರ್ಧಾರವನ್ನು ಕುಮಾರ್ ಅವರು “ಅನ್ಯಾಯ, ಅಸಮಂಜಸ ಮತ್ತು ನ್ಯಾಯಸಮ್ಮತವಲ್ಲ” ಎಂದು ಬಲವಾಗಿ ಟೀಕಿಸಿದ್ದಾರೆ. “ನಮ್ಮ ಮೊದಲ ಮತ್ತು ಪ್ರಮುಖ ಉದ್ದೇಶ 140 ಕೋಟಿ ಜನರ ಇಂಧನ ಭದ್ರತೆಯನ್ನು ಖಚಿತಪಡಿಸುವುದು” ಎಂದು ಕುಮಾರ್ ಸ್ಪಷ್ಟಪಡಿಸಿದರು. ರಷ್ಯಾದೊಂದಿಗೆ ಭಾರತದ ಸಹಕಾರವು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ತರಲು ಸಹಾಯ ಮಾಡಿದೆ ಎಂದೂ ಅವರು ಹೇಳಿದರು.
ಇದನ್ನೂ ಓದಿ: Teenage Pregnancy: ರಾಜ್ಯದಲ್ಲಿ ಹೆಚ್ಚಿದ ಬಾಲ ಗರ್ಭಿಣಿಯರ ಸಂಖ್ಯೆ: ಎಚ್ಚೆತ್ತುಕೊಳ್ಳದಿದ್ದರೆ ಅಪಾಯ!
ವಾಣಿಜ್ಯ ಹಿತಾಸಕ್ತಿಗಳೇ ಪ್ರಮುಖ:
ವಿನಯ್ ಕುಮಾರ್(Vinay Kumar) ಅವರು ವ್ಯಾಪಾರದ ನಿರ್ಧಾರಗಳು ವಾಣಿಜ್ಯ ಅಂಶಗಳಿಂದ ಮಾತ್ರ ಮಾರ್ಗದರ್ಶಿಸಲ್ಪಡುತ್ತವೆ ಹೊರತು ರಾಜಕೀಯ ಒತ್ತಡದಿಂದಲ್ಲ ಎಂದು ಒತ್ತಿ ಹೇಳಿದರು. “ಒಂದು ವೇಳೆ ವ್ಯಾಪಾರದ ಆಧಾರ ಸರಿಯಾಗಿದ್ದರೆ, ಭಾರತೀಯ ಕಂಪನಿಗಳು ಎಲ್ಲಿ ಉತ್ತಮ ಒಪ್ಪಂದ ಸಿಗುತ್ತದೆಯೋ ಅಲ್ಲಿಂದಲೇ ಖರೀದಿಯನ್ನು ಮುಂದುವರಿಸುತ್ತವೆ. ಪ್ರಸ್ತುತ ಪರಿಸ್ಥಿತಿ ಕೂಡ ಹೀಗಿದೆ” ಎಂದು ತಿಳಿಸಿದರು. ಅಮೆರಿಕಾ(America) ಸೇರಿದಂತೆ ಯುರೋಪ್ನ ಇತರೆ ದೇಶಗಳು ಕೂಡ ರಷ್ಯಾದೊಂದಿಗೆ(Russia) ವ್ಯಾಪಾರ ಮಾಡುತ್ತಿವೆ ಎಂಬ ವಿಪರ್ಯಾಸವನ್ನು ಕೂಡ ಅವರು ನೆನಪಿಸಿದರು.
ಜೈಶಂಕರ್ ಅವರ ಖಡಕ್ ಮಾತುಗಳು:
ರಾಯಭಾರಿ ಕುಮಾರ್ ಅವರ ಮಾತುಗಳನ್ನು ವಿದೇಶಾಂಗ ಸಚಿವ ಎಸ್. ಜೈ ಶಂಕರ್(S Jayshankar) ಅವರು ಕೂಡ ಬೆಂಬಲಿಸಿದ್ದಾರೆ. “ನಮ್ಮ ದೇಶದ ರೈತರು ಮತ್ತು ಸಣ್ಣ ಉತ್ಪಾದಕರ ಹಿತಾಸಕ್ತಿಗಳನ್ನು ನಾವು ಯಾವುದೇ ಕಾರಣಕ್ಕೂ ರಾಜೀಮಾಡಿಕೊಳ್ಳುವುದಿಲ್ಲ” ಎಂದು ಜೈಶಂಕರ್(S Jayshankar) ಹೇಳಿದ್ದಾರೆ. ಹಾಗೆಯೇ, ಅಮೆರಿಕಾ ವಿಧಿಸಿದ ಸುಂಕಗಳನ್ನು ಅವರು “ಅನ್ಯಾಯ ಮತ್ತು ಅಸಮಂಜಸ” ಎಂದು ಬಣ್ಣಿಸಿದ್ದಾರೆ. ಭಾರತದ ವ್ಯಾಪಾರ ನೀತಿಯು(Indian Trading policy) ದೇಶೀಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಬೇರೂರಿದೆ ಎಂದೂ ಅವರು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ ಟೆಸ್ಟ್ ಸ್ಪೆಷಲಿಸ್ಟ್ Cheteshwar Pujara
ವ್ಯಾಪಾರ ಮತ್ತು ಆರ್ಥಿಕತೆ:
ರಷ್ಯಾದೊಂದಿಗಿನ(Rassia) ಪಾವತಿಯಲ್ಲಿ ಭಾರತಕ್ಕೆ(India) ಯಾವುದೇ ಸಮಸ್ಯೆಗಳಿಲ್ಲ ಎಂದು ಕುಮಾರ್ ಹೇಳಿದರು. ಎರಡೂ ದೇಶಗಳು ತಮ್ಮ ರಾಷ್ಟ್ರೀಯ ಕರೆನ್ಸಿಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿವೆ. ಕಚ್ಚಾ ತೈಲವಲ್ಲದ, ಎಲೆಕ್ಟ್ರಾನಿಕ್ಸ್, ವಾಹನಗಳು, ಬಟ್ಟೆ ಮತ್ತು ನಿರ್ಮಾಣ ಸಾಮಗ್ರಿಗಳಂತಹ ಇತರ ಕ್ಷೇತ್ರಗಳಲ್ಲಿ ರಷ್ಯಾಕ್ಕೆ ಭಾರತದ ರಫ್ತುಗಳನ್ನು(Indian Export) ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ ಎಂದರು. ಈ ಮೂಲಕ ಭಾರತ(india), ತನ್ನ ಪ್ರಮುಖ ಆರ್ಥಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಯಾವುದೇ ಒತ್ತಡಕ್ಕೆ ಮಣಿಯದ ಸ್ವತಂತ್ರ ವಿದೇಶಾಂಗ ನೀತಿಯನ್ನು(Foreign policy) ಮುಂದುವರಿಸಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
