
ಶಿರಾ: ಸಹಜ ಕೃಷಿಗೆ ಹೆಚ್ಚು ಪ್ರಾಶಸ್ತ್ಯ ಅವಶ್ಯವಿದೆ, ಕೃಷಿ ದೊಡ್ಡ ಉದ್ಯಮ, ಸುಸ್ಥಿರ ಕೃಷಿ ಪದ್ಧತಿ ಅವಲವಡಿಸಿಕೊಳ್ಳಬೇಕು, ಭೂಮಿ ಹಸಿರಾದಾಗ ಬದುಕು ಹಸನಾಗುತ್ತದೆ
ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಕೆ.ಟಿ. ತಿಪ್ಪೇಸ್ವಾಮಿ ಹೇಳಿದರು.
ಶಿರಾ ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ಬಜ್ ವುಮೆನ್ ಹಾಗೂ ಟ್ರೀಸ್ ಫಾರ್ ಆಲ್ ಸಂಸ್ಥೆಯ ಸಹಯೋಗದಿಂದ ಆಯೋಜಿಸಿದ್ದ ರೈತರ ಹಸಿರು ಹಬ್ಬ ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಹೊಲಕ್ಕೆ ವಿಷ ಹಾಕಿ, ಅದನ್ನೇ ಹೊಟ್ಟೆಗೆ ತೆಗೆದುಕೊಳ್ಳುತ್ತಿದ್ದೇವೆ, ಸ್ವಾಭಾವಿಕ ಕೃಷಿ ಮಾಡಬೇಕು, ಭೂಮಿ ತಾಯಿಗೆ ಬೇಕಿರುವುದು ಹಸಿರ ಹೊದಿಕೆ ಎಂದು ಮಾತಾನಾಡಿದರು.
ಇದನ್ನೂ ಓದಿ: ಕರುನಾಡಿನ ಸಾಹಸಸಿಂಹನಿಗೆ ಈ ಗತಿಯೇ? : ರಾತ್ರೋರಾತ್ರಿ ವಿಷ್ಣು ಸಮಾಧಿ ಧ್ವಂಸ, ಅಭಿಮಾನಿಗಳ ಕಣ್ಣೀರ ಕಟ್ಟೆಯೊಡೆದಿದೆ!
ಬಜ್ ವುಮೆನ್ ಮುಖ್ಯಸ್ಥೆ ಉತ್ತರ ನಾರಾಯಣ್ ಮಾತಾನಾಡಿ ಈ ಸಂಸ್ಥೆಯನ್ನು ಶುರು ಮಾಡಿದ್ದು ಮಹಿಳೆಯರಿಗೆ ಕೌಶಲ್ಯಗಳನ್ನು ಕಲಿಸಿ, ಮಹಿಳೆಯರನ್ನು ಸ್ವಾವಲಂಬಿ ಮಾಡಿ ಮುನ್ನೆಲೆಗೆ ತರಬೇಕೆಂದು, ಆ ನಿಟ್ಟಿನಲ್ಲಿ ನಮ್ಮ ಶ್ರಮ ಹಾಗೂ ಯೋಜನೆ ನಿರಂತರವಾಗಿ ಸಕ್ರಿಯವಾಗಿದೆ. ಈಗ ಯುವಕರನ್ನು ಕೃಷಿಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಸೀಬಿ ಪಂಚಾಯ್ತಿಯಲ್ಲಿ ಒಟ್ಟು 12,500 ಗಿಡಗಳನ್ನು ನಾವು ನೆಟ್ಟಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಲೋಗಾನಂದನ್, ಶಿರಾ ಉಪ ಅರಣ್ಯಾಧಿಕಾರಿ ಲಕ್ಷ್ಮೀ ನಾರಾಯಣ್ , ಸೀಬಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೊನ್ನೇಶ್, ಪ್ರಗತಿ ಪರ ರೈತೆ ಭವ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
