ಮಡಿಕೇರಿ: ತಾನು (ಒನ್ಸೈಡ್ ಲವ್) ಪ್ರೀತಿಸಿದ ಯುವತಿಯ ಮದುವೆಯ ಲಗ್ನಪತ್ರಿಕೆ ನೋಡಿದ ದುಃಖ ತಡೆದುಕೊಳ್ಳಲಾಗದೆ, ಮನನೊಂದ ಯುವಕ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಹೆಗ್ಗರಿಕಾಡ್ ಗ್ರಾಮದಲ್ಲಿ ನಡೆದಿದೆ.(Love Tragedy End)
ಮೃತ ಯುವಕನನ್ನು ಬಿಟ್ಟಂಗಾಲ ಗ್ರಾಪಂ ವ್ಯಾಪ್ತಿಯ ಹೆಗ್ಗರಿಕಾಡ್ ನಿವಾಸಿ ಹಾಗೂ ಜಿಪಂ ಮಾಜಿ ಸದಸ್ಯ ದಿ. ಹೆಚ್.ಎಂ. ಕಾಳಯ್ಯ ಅವರ ಪುತ್ರ ಹೆಚ್.ಕೆ. ಸುಮಂತ್ (28) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Tragedy Love Story: ಪ್ರೀತಿಯ ಮದುವೆಗೆ ದುರಂತ ಅಂತ್ಯ; ಮಗಳ ಸಾವಿಗೆ ಪತಿಯೇ ಕಾರಣ, ನಂಬಿ ಬಂದಾಕೆಗೆ ಚಟ್ಟ ಕಟ್ಟಿದ್ನಾ ಪತಿ?
ಪ್ರೇಮ ವೈಫಲ್ಯವೇ ಕಾರಣ?
ಸುಮಂತ್ಗೆ ಕೆಲವು ವರ್ಷಗಳ ಹಿಂದೆ ಯುವತಿಯೊಬ್ಬಳ ಪರಿಚಯವಾಗಿತ್ತು. ಆದರೆ ಆ ಯುವತಿಯ ಕಡೆಯಿಂದ ಯಾವುದೇ ಸ್ಪಂದನೆ ಇರಲಿಲ್ಲ. ಸುಮಂತ್ ಕಡೆಯಿಂದ ಏಕಮುಖ ಪ್ರೀತಿಯಿದ್ದ ಕಾರಣ, ಯುವತಿಯು ಈತ ತನ್ನನ್ನು ಬಲವಂತ ಮಾಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು ಎನ್ನಲಾಗಿದೆ.(Love Tragedy End) ಈ ಪ್ರಕರಣದ ನಂತರ ಸುಮಂತ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೂ, ಆರು ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಗೆ ಮರಳಿ, ಇಲ್ಲಿ ಖಾಸಗಿ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ.
ಲಗ್ನಪತ್ರಿಕೆ ನೋಡಿ ಮನನೊಂದು ವಿಷ ಸೇವನೆ:
ಇತ್ತೀಚೆಗೆ ಸುಮಂತ್ ಪ್ರೀತಿಸುತ್ತಿದ್ದ ಯುವತಿಯ ವಿವಾಹ ನಿಶ್ಚಯವಾಗಿ, ಆಕೆಯ ಲಗ್ನ ಪತ್ರಿಕೆ ಈತನ ಕೈ ಸೇರಿತ್ತು. ಇದನ್ನು ನೋಡಿದ ಸುಮಂತ್ ತೀವ್ರವಾಗಿ ನೊಂದಿದ್ದ.
ಅಕ್ಟೋಬರ್ 18ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುಮಂತ್ ಕಳೆನಾಶಕ (Poison) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಂಜೆ ಮನೆಗೆ ಮರಳಿದ ತಾಯಿ ಇದನ್ನು ಗಮನಿಸಿ ಕೂಡಲೇ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆ ಮತ್ತು ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸುಮಂತ್ ನೆನ್ನೆ ತನ್ನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾನೆ.(Love Tragedy End)
ಮೃತನ ಅಕ್ಕ ಪೂರ್ಣಿಮಾ ಅವರು ನೀಡಿರುವ ದೂರಿನ ಅನ್ವಯ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 194 ರ ಅಡಿಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
