Nachiketa and Yama: “ನೀನು ಯಾರು, ಯಾತಕ್ಕಾಗಿ ಬಂದದ್ದು?” ಎಂದು ಯಮಧರ್ಮನು ಕೇಳುತ್ತಾನೆ. ಆಗ ನಡೆದ ಕಥೆಯನ್ನೆಲ್ಲ ಹೇಳಿದ ನಚಿಕೇತ,ನನ್ನ ತಂದೆ ಯಜ್ಞದ ಸಮಯದಲ್ಲಿ ನನ್ನನ್ನು ನಿಮಗೆ ದಾನವಾಗಿ ಕೊಟ್ಟಿದ್ದಾರೆ. ನಾನು ಈಗ ನಿಮ್ಮ ಸೇವಕ.ಎಂದು ಹೇಳುತ್ತಾನೆ. ಯಮಧರ್ಮನು ‘ಮಗೂ,ನಿನಿನ್ನೂ ಚಿಕ್ಕವನು,ಹಟ ತರವಲ್ಲ, ಮನೆಗೆ ಹೋಗು, ‘ಮೂರು ದಿನ ಕಾಯಿಸಿದ್ದಕ್ಕಾಗಿ ನಿನಗೆ ಮೂರು ವರಗಳನ್ನು ಕೊಡುತ್ತೇನೆ’. ಎಂದು ಹೇಳುವನು.
ಆಗ ನಚಿಕೇತನು(Nachiketa and Yama) ಮೊದಲನೆಯ ವರವನ್ನು ಕೇಳುತ್ತಾನೆ “ನನ್ನ ತಂದೆಗೆ ಕೋಪಶಮನಮಾಡಿ ಶಾಂತಿ ಮತ್ತು ಪ್ರಸನ್ನತೆಯನ್ನು ಕರುಣಿಸು” ಎಂದು. ಆಗ ಯಮನು ಬಾಲಕನ ಪ್ರೌಢಿಮೆಯನ್ನು ಮೆಚ್ಚಿ ಸಂತೋಷಗೊಳ್ಳುತ್ತಾನೆ.ಕೂಡಲೇ “ತಥಾಸ್ತು” ಎಂದು ಹರಸುತ್ತಾನೆ.
ನಚಿಕೇತ(Nachiketa and Yama) ಎರಡನೇ ವರವನ್ನು ಕೇಳುತ್ತಾನೆ: “ಸ್ವರ್ಗದಲ್ಲಿ ದೇವತೆಗಳು ಹುಟ್ಟು ಸಾವುಗಳಿಲ್ಲದೆ,ಮುಪ್ಪು ಮತ್ತು ರೋಗಗಳಿಲ್ಲದೆ ದುಃಖದಿಂದ ಮುಕ್ತರಾಗಿರುತ್ತಾರೆ; ಅಂಥಹ ಸ್ವರ್ಗವನ್ನು ಪ್ರವೇಶಿಸುವ ಅಗ್ನಿದೇವನ ಆರಾಧನೆಯ ಮಂತ್ರವನ್ನು ಹೇಳಿಕೊಡಿ”
ಬಾಲಕನ ಸತ್ಯದೆಡೆಗಿನ ಜಿಜ್ಞಾಸೆಯನ್ನು ಮನದಲ್ಲೇ ಮೆಚ್ಚಿ ತಥಾಸ್ತು ಎಂದು ಅಗ್ನಿ ದೇವನ ಆರಾಧನೆಯ ಮಂತ್ರವನ್ನು ನಚಿಕೇತನಿಗೆ ಯಮ ಧರ್ಮನು ಹೇಳಿಕೊಡುತ್ತಾನೆ.
ಮೂರನೆಯ ಪ್ರಶ್ನೆಯನ್ನು ಕೇಳುತ್ತಾನೆ ನಚಿಕೇತ, , “ಸಾವಿನ ನಂತರ ಮನುಷ್ಯನ ಮುಂದಿನ ಹಾದಿ ಯಾವುದು? ಅದು ಅಂತ್ಯವಾ ಅಥವಾ ಸಾವಿನ ಆಚೆಗೂ ಜೀವನ ಇದೆಯಾ?” ದೇಹ ನಾಶವಾದರೂ ಆತ್ಮ ಅವಿನಾಶ ಎನ್ನುತ್ತದೆ ಶಾಸ್ತ್ರ.ಮಾನವ ತನ್ನ ಕರ್ಮಾನುಸಾರ ಪಾಪ-ಪುಣ್ಯಗಳ ಪ್ರಕಾರ ಮತ್ತೆ ಮತ್ತೆ ಹುಟ್ಟುತ್ತಲೂ ಸಾಯುತ್ತಲೂ ಇರುತ್ತಾನೆ ಆದರೆ ಈ ಜನನ ಮರಣಗಳ ಸಂಕೋಲೆಯಿಂದ ಮುಕ್ತನಾಗಲು ಏನು ಮಾಡಬೇಕೆಂದು ನಚಿಕೇತ ಕೇಳುತ್ತಾನೆ.
ಆಗ ಯಮ(Nachiketa and Yama) ಹೇಳುತ್ತಾನೆ, “ಬಾಲಕ, ದೇವತೆಗಳಿಗೂ ಅರ್ಥವಾಗದ ಜಿಜ್ಞಾಸೆಯ ಪ್ರಶ್ನೆಯನ್ನು ಕೇಳಿದ್ದೀಯಾ. ನೀನು ಇನ್ನೂ ಚಿಕ್ಕವನು, ಆದ್ದರಿಂದ ಆ ಪ್ರಶ್ನೆಗೆ ಉತ್ತರದ ಬದಲು ನಿನಗೆ ಧನ, ಸಂಪತ್ತು, ಆಯುಷ್ಯ, ಅಧಿಕಾರ, ಏನೇ ಕೇಳಿದರೂ ಕರುಣಿಸುತ್ತೇನೆ. ಆ ಒಂದು ಪ್ರಶ್ನೆಯನ್ನು ಬಿಟ್ಟು ನಿನಗೆ ಏನು ಬೇಕು ಕೇಳು, ಕೊಡುತ್ತೇನೆ”.
ಆದರೆ ನಚಿಕೇತ ಹೇಳುತ್ತಾನೆ, “ಇವೆಲ್ಲವೂ ಶಾಶ್ವತವಲ್ಲ. ಧನ ಇವತ್ತು ಇರಬಹುದು, ನಾಳೆ ಹೋಗಬಹುದು. ಸುಖ ಮತ್ತು ಸಿರಿ, ಅಧಿಕಾರ, ಇವುಗಳ ಆಸೆ, ಲಾಲಸೆ ನನ್ನಲ್ಲಿ ಇಲ್ಲ. ನನಗೆ ತಿಳಿದುಕೊಳ್ಳಬೇಕಾದ ಒಂದು ಮುಖ್ಯ ವಿಷಯ-ಪ್ರಶ್ನೆ ಮತ್ತೂ ಅದಕ್ಕೆ ಪರಿಹಾರ ಬೇಕಾಗಿದ್ದು, ದಯಮಾಡಿ ಅದನ್ನು ತಿಳಿಸಿಕೊಡಿ ” ಎಂದು.
ಆಗ ಯಮನು ನಚಿಕೇತನ(Nachiketa and Yama) ಭಕ್ತಿಯನ್ನು ಮತ್ತು ಆತನ ಧರ್ಮಶ್ರದ್ಧೆಯನ್ನು ಮೆಚ್ಚಿ “ಸಾವಿನ ನಂತರವೂ ಮನುಷ್ಯನಿಗೆ ಜೀವನವಿದೆ. ಯಾಕೆಂದರೆ ಸಾವು ದೇಹಕ್ಕೆ, ಆತ್ಮಕ್ಕಲ್ಲ. ಆತ್ಮ ಎನ್ನುವುದು ಶಾಶ್ವತವಾದ ಸಂಗತಿ.(soul is an eternal thing). ದೇಹವು ಬಟ್ಟೆಯಂತೆ ಕಳಚುತ್ತದೆ, ಪಂಚಭೂತಗಳಲ್ಲಿ ವಿಲೀನವಾಗುತ್ತದೆ, ಆದರೆ ಆತ್ಮ ಎಂದರೆ ಆಂತರ್ಯದೊಳಗೆ ಮತ್ತು ನಮ್ಮೊಳಗೆ ಇರುವಂತಹ ಅರಿವು, ಪ್ರಜ್ಞೆ. ಇದು ಶಾಶ್ವತ. ಇದನ್ನು ಗೆದ್ದರೆ ಸಾವನ್ನು ಗೆದ್ದಂತೆ, ಹುಟ್ಟು ಸಾವುಗಳನ್ನು ಗೆಲ್ಲಬೇಕಾದರೆ, ಕರ್ಮಗಳಿಂದ ಮುಕ್ತಿ ಹೊಂದಬೇಕಾದರೆ ಮೋಕ್ಷವನ್ನು ಪಡೆಯಬೇಕು.ಮೋಕ್ಷವನ್ನು ಪಡೆದರೆ ಕರ್ಮಗಳನ್ನು ಜಯಿಸುತ್ತೇವೆ.ಸನ್ನಡತೆ ಸದ್ವಿಚಾರ,ಭಕ್ತಿ ಹಾಗೂ ಧ್ಯಾನಗಳ ಅನುಷ್ಠಾನದಿಂದ ಮೋಕ್ಷ ಹೊಂದುವುದು ಸಾಧ್ಯ” ಎಂದು ಧರ್ಮದೇವತೆ ಹೇಳುತ್ತಾನೆ.
ಯಮಧರ್ಮನಿಂದ ವರಪಡೆದು ಬಂದ ನಚಿಕೇತನನ್ನು ಕಂಡು ಜನ ಹರ್ಷಿಸುತ್ತಾರೆ.
ಈ ಕಥೆಯ ತಾತ್ಪರ್ಯವಿಷ್ಟೆ!
ಓಂ ಅಸತೋ ಮಾ ಸದ್-ಗಮಯ |
ತಮಸೋ ಮಾ ಜ್ಯೋತಿರ್-ಗಮಯ |
ಮೃತ್ಯೋರ್-ಮಾ ಅಮೃತಂ ಗಮಯ |
ಓಂ ಶಾಂತಿಃ ಶಾಂತಿಃ ಶಾಂತಿಃ ||
ಕತ್ತಲೆಯೆಂಬ ಅಜ್ಞಾನದಿಂದ ಬೆಳಕೆಂಬ ಜ್ಞಾನದೆಡೆಗೆ ನನ್ನನ್ನು ಮುನ್ನಡೆಸು, ಸಾವಿನಿಂದ ನನ್ನನ್ನು ಅಮರತ್ವದೆಡೆ ಕರೆದೊಯ್ಯು ‘ ಎಂದು ದೇವರಲ್ಲಿ ಪ್ರಾರ್ಥಿಸುವುದು.
