Love story: ಸಮುದ್ರದ ತೀರದಲ್ಲಿ ನಿಂತು ಕಣ್ಣೆದುರು ಅಲೆಗಳು ಹೊಕ್ಕು ಹೊಕ್ಕು ಮರಳಿಗೆ ಬೀಳುತ್ತಿದ್ದವು. ಆ ಹೊಡೆತಗಳಲ್ಲಿ, ಅವನ ಹೃದಯದ ಗೀತೆ ಪ್ರತಿಧ್ವನಿಸುತ್ತಿತ್ತು(Love story) ಅವನು ಆರ್ಯನ್, ಒಂದು ಕಥೆಗಾರ. ಬರಹಗಾರನ ಹೃದಯದಲ್ಲಿ ಸದಾ ಶಬ್ದಗಳು, ಆದರೆ ಇವತ್ತು ಅವನ ಮೌನವೇ ತುಂಬಿ ಹರಿಯುತ್ತಿತ್ತು. ಆ ಮೌನದಲ್ಲಿ ಅವಳು ಮಾತ್ರ ಆರಾಧ್ಯಾ.
ಅವರ ಮೊದಲ ಭೇಟಿಯೂ ಇದೇ ತೀರದಲ್ಲಿ. ಆ ದಿನ ಮಳೆ ಬಂದು ನಿಂತಿತ್ತು. ಮೋಡದೊಳಗಿಂದ ಹೊರಹೊಮ್ಮಿದ ಸೂರ್ಯಕಿರಣದಲ್ಲಿ ಸಮುದ್ರವು ಬೆಳ್ಳಿ ಹಾರ ಹಾಕಿಕೊಂಡಂತೆ ಹೊಳೆಯುತ್ತಿತ್ತು. ಆರಾಧ್ಯಾ ಪುಸ್ತಕ ಹಿಡಿದು ಕುಳಿತಿದ್ದಳು. ಗಾಳಿಯು ಅವಳ ಕೂದಲನ್ನು ಅಲೆಮಾಡಿಸುತ್ತಿತ್ತು. ಅವಳ ಕಣ್ಣುಗಳು ಸಮುದ್ರದ ಆಳದಂತೆ ತೋರುತ್ತಿದ್ದವು.
ಆರ್ಯನ್ ಹತ್ತಿರ ಹೋಗಿ ಹಾಸ್ಯವಾಗಿ ಕೇಳಿದ
“ಈ ಶಬ್ದದಲ್ಲಿ ಪುಸ್ತಕ ಓದಲು ಆಗುತ್ತಾ?”
ಅವಳು ತಲೆತ್ತಿ ನೋಡಿದಳು. ನಗು ಬಂತು.
ಇದನ್ನೂ ಓದಿ: Letters to Daughter: ಮಗಳೇ, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಅಂದ ಮಾತ್ರಕ್ಕೆ ಹೇಗಾದರೂ ಇರಬಹುದು ಅಂತ ಅರ್ಥವಲ್ಲ
ಲೆಗಳ ಶಬ್ದದಲ್ಲಿ ಓದಲು ಕಲಿತರೆ, ಜೀವನದ ಪ್ರತಿಯೊಂದು ನೋವನ್ನೂ ಓದಲು ಕಲಿಯಬಹುದು,” ಎಂದಳು. ಆ ಕ್ಷಣದಿಂದ ಅವನ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ದಿನಗಳು ಹರಿದವು. ಇಬ್ಬರಿಗೂ ತೀರವೇ ಸೇತುವೆಯಾಯಿತು. ಪ್ರತಿ ಸಂಜೆಯೂ ಅವರು ಅಲ್ಲಿ ಭೇಟಿಯಾಗುತ್ತಿದ್ದರು. ಅವನು ಅವಳ ಕನಸುಗಳನ್ನು ಕೇಳುತ್ತಿದ್ದ. ಅವಳ ಕನಸು ಸರಳ — ಮಕ್ಕಳಿಗೆ ಶಾಲೆ ಕಟ್ಟಬೇಕು, ಬಡ ಮಕ್ಕಳು ಓದಬೇಕು. ಅವನು ಬರಹದಲ್ಲಿ ಕನಸು ಕಟ್ಟುತ್ತಿದ್ದ, ಅವಳು ಬದುಕಿನಲ್ಲಿ.
ಒಮ್ಮೆ ಅವನು ಕೇಳಿದ “ಆರಾಧ್ಯಾ, ನಿನ್ನ ಕಣ್ಣಲ್ಲಿ ಸದಾ ಅಲೆಗಳಂತೆ ತೇಲೋ ಕನಸುಗಳು ಇವೆ… ಆದರೆ ನಿನ್ನ ಹೃದಯದಲ್ಲಿ ನಾನು ಎಲ್ಲಿ?” ಅವಳು ನಗುತ “ಅಲೆಗಳೊಳಗೆ ಚಂದ್ರನ ಪ್ರತಿಬಿಂಬ ಹೇಗೆ ತೇಲುತ್ತದೋ ಹಾಗೆ,” ಎಂದಳು. ಅವನು ಮೌನವಾಗಿ ಕಣ್ಣು ಮುಚ್ಚಿಕೊಂಡ. ಅವನ ಹೃದಯದಲ್ಲಿ ಆ ಮಾತು ಶಾಶ್ವತವಾಗಿ ಅಚ್ಚುಬಿದ್ದಿತು.
ಆದರೆ ಪ್ರೇಮದ ಹಾದಿ ಸರಳವಾಗಿರಲಿಲ್ಲ.(Love story) ಒಂದು ದಿನ ಅವಳು ಬಂದು “ನಾನು ಹಳ್ಳಿಗೆ ಹಿಂತಿರುಗಬೇಕು. ಅಲ್ಲಿ ಮಕ್ಕಳು ನನ್ನನ್ನು ಕಾಯುತ್ತಿದ್ದಾರೆ. ಇಲ್ಲಿ ಉಳಿದು ನಿನ್ನ ಕನಸುಗಳಲ್ಲಿ ನಾನು ನಿನ್ನ ಜೊತೆಯಾಗಲಾರೆ,” ಎಂದಳು. ಆರ್ಯನ್ ನಿಶ್ಶಬ್ದ. ಅವನ ಕಣ್ಣ ಮುಂದೆ ಸಮುದ್ರವೂ ಗಾಢವಾದುದಾಗಿ ತೋರುತ್ತಿತ್ತು. ಅವನು ಹೇಳಿದ “ಹೋಗು ಆರಾಧ್ಯಾ… ಆದರೆ ನೆನಪು ಬಿಟ್ಟು ಹೋಗಬೇಡ. ಈ ಅಲೆಗಳ ಶಬ್ದ ನಿನ್ನ ಹೆಸರೇ ಆಗಲಿ.”
ಸಾಲು ವರ್ಷಗಳು ಕಳೆದವು. ಅವನು ಪ್ರಸಿದ್ಧ ಕಥೆಗಾರನಾದ. ಅವನ ಪ್ರತಿಯೊಂದು ಕಥೆಯೂ ಸಮುದ್ರದ ತೀರದಲ್ಲಿ ಹುಟ್ಟಿತು. ಓದುಗರು ಅವನ ಬರಹದಲ್ಲಿ ಅನಿರ್ವಚನೀಯ ಪ್ರೀತಿಯ ಸುಗಂಧವನ್ನು ಕಂಡರು. ಆದರೆ ಅವನಿಗೆ ತಿಳಿದಿತ್ತು ಅದು ಆರಾಧ್ಯೆಯ ಸುವಾಸನೆ.ಒಂದು ಸಂಜೆ, ಅವನು ಮತ್ತೆ ಸಮುದ್ರ ತೀರದಲ್ಲಿ ಕುಳಿತಿದ್ದ. ಅಲೆಗಳು ಹೊಡೆದು ಬಂದು ಮರಳಿಗೆ ಮುತ್ತಿಡುತ್ತಿದವು. ಆಗ ಒಂದು ಪರಿಚಿತ ಧ್ವನಿ ಕೇಳಿಸಿತು “ಅಲೆಗಳ ಕಥೆಯಲ್ಲಿ ನಾನು ನಿನ್ನ ಪಾತ್ರವಾಗಿರಲು ಬಂದಿದ್ದೇನೆ.”
ಅವನು ತಿರುಗಿ ನೋಡಿದ ಅವಳು ಆರಾಧ್ಯಾ.
ಅವಳ ಕಣ್ಣುಗಳಲ್ಲಿ ಹಿಂದಿನ ನಗು, ಆದರೆ ಇವತ್ತು ಇನ್ನೂ ಆಳ. ಅವಳು ಹೇಳಿದಳು “ಮಕ್ಕಳ ಕನಸುಗಳನ್ನು ಕಟ್ಟಿದೆ. ಈಗ ನಿನ್ನ ಕನಸಿನಲ್ಲಿ ನನ್ನನ್ನು ಕಟ್ಟಲು ಬಂದಿದ್ದೇನೆ.” ಸಮುದ್ರದ ಅಲೆಗಳು ಅದೇ ಕ್ಷಣದಲ್ಲಿ ಪ್ರೇಮಗೀತೆ(Love story) ಹಾಡಿದವು.
ಆ ದಿನದಿಂದ, ತೀರವು ಕೇವಲ ಅಲೆಗಳ ಸೇತುವೆಯಲ್ಲ. ಇಬ್ಬರ ಹೃದಯಗಳ ಒಡಂಬಡಿಕೆಯಾಗಿತ್ತು. ಅವರ ಪ್ರೇಮಕಥೆ ಕಾಗದದಲ್ಲಲ್ಲ. ಅಲೆಗಳಲ್ಲಿ ಬರೆದಿತ್ತು.
-ಲಿಖಿತ್ ಹೊನ್ನಾಪುರ
