ನವದೆಹಲಿ: ಈ ಬಾರಿ ಸ್ವಾತಂತ್ರ್ಯ ದಿನಾಚರಣೆ(indipendens day) ಮತ್ತು ಕೃಷ್ಣ ಜನ್ಮಾಷ್ಟಮಿ(Krishna Janmashtmi) ಹಬ್ಬದ ಹಿನ್ನೆಲೆಯಲ್ಲಿ ದೇಶದ ಹಲವು ನಗರಗಳಲ್ಲಿ ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.(Independence Day meat sale ban) ಆದರೆ, ಈ ನಿರ್ಧಾರವು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದು ಕೇವಲ ಆಹಾರದ ವಿಷಯವಲ್ಲ, ಬದಲಿಗೆ ಜನರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಎಂದು ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ದಾರೆ.
ಇದನ್ನು ಓದಿ: ಬಾದಾಮಿ ಗೆಲುವಿಗೆ ಸಿದ್ದರಾಮಯ್ಯ ಹಣ ಕೊಟ್ಟರು: ಸಿ.ಎಂ.ಇಬ್ರಾಹಿಂ ಆರೋಪ, ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಪತ್ರ
ಓವೈಸಿ ಕಿಡಿ: “ಇದು ಅಸಾಂವಿಧಾನಿಕ, ಆಹಾರದ ಹಕ್ಕಿನ ಉಲ್ಲಂಘನೆ”
ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆದೇಶವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಸ್ವಾತಂತ್ರ್ಯ ದಿನಕ್ಕೂ ಮಾಂಸಾಹಾರ ಸೇವನೆಗೂ ಏನು ಸಂಬಂಧ? ತೆಲಂಗಾಣದಲ್ಲಿ ಶೇ.99ರಷ್ಟು ಜನ ಮಾಂಸ ತಿನ್ನುತ್ತಾರೆ. ಈ ನಿಷೇಧವು ಅವರ ಸ್ವಾತಂತ್ರ್ಯ, ಗೌಪ್ಯತೆ, ಜೀವನೋಪಾಯ, ಸಂಸ್ಕೃತಿ ಮತ್ತು ಆಹಾರದ ಹಕ್ಕನ್ನು ಉಲ್ಲಂಘಿಸುತ್ತದೆ. ಇದು ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಅನೈತಿಕ” ಎಂದು ಓವೈಸಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಜಟಾಪಟಿ: ಪವಾರ್, ಠಾಕ್ರೆ, ಶಿಂಧೆ ಪ್ರತಿಕ್ರಿಯೆ
ಮಹಾರಾಷ್ಟ್ರದಲ್ಲೂ ಇದೇ ಪರಿಸ್ಥಿತಿ. ಛತ್ರಪತಿ ಸಾಂಬಾಜಿನಗರದಲ್ಲಿ ಹೊರಡಿಸಿದ ಆದೇಶದ ಕುರಿತು ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಂತಹ ನಿಷೇಧ ಹೇರುವುದು ಸರಿಯಲ್ಲ. ಒಂದು ದಿನದ ಮಟ್ಟಿಗೆ ಭಾವನಾತ್ಮಕ ಕಾರಣಕ್ಕೆ ಜನರು ಇದನ್ನು ಒಪ್ಪಿಕೊಳ್ಳಬಹುದು. ಆದರೆ, ರಾಜ್ಯ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂದು ಇಂತಹ ನಿರ್ಬಂಧಗಳನ್ನು ಹೇರುವುದು ಕಷ್ಟಕರ” ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: Namma Mettro: ಖಾಸಗಿ ಲಾಭಕ್ಕಾಗಿ ಮೆಟ್ರೋ ಬೇಡಿಕೆ: ಮುನಿರತ್ನ ಮೇಲೆ ಡಿಕೆಶಿ ಆರೋಪ
ಥಾಣೆಯ ಕಲ್ಯಾಣ್-ಡಾಂಬಿವಾಲಿ ಮುನ್ಸಿಪಲ್ ಕಾರ್ಪೋರೇಷನ್ನ ಆದೇಶವನ್ನು ಶಿವಸೇನೆ ನಾಯಕ ಆದಿತ್ಯ ಠಾಕ್ರೆ(Adithya Takrre) ತೀವ್ರವಾಗಿ ವಿರೋಧಿಸಿದ್ದಾರೆ. “ಯಾರು ಏನನ್ನು ತಿನ್ನಬೇಕು ಎಂದು ನಿರ್ಧರಿಸುವುದು ಸರ್ಕಾರದ ಕೆಲಸವಲ್ಲ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು” ಎಂದು ಅವರು ಆಗ್ರಹಿಸಿದ್ದಾರೆ. ಆದರೆ, ಏಕನಾಥ್ ಶಿಂಧೆ(yeknath Shinde) ಬಣದ ವಕ್ತಾರರು, “ಬಿಜೆಪಿ-ಶಿವಸೇನೆ-ಎನ್ಸಿಪಿ ಸರ್ಕಾರ ಈ ರೀತಿಯ ಯಾವುದೇ ಆದೇಶಕ್ಕೆ ಅನುಮೋದನೆ ನೀಡಿಲ್ಲ. ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲು ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ, ದೇಶ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ, ಜನರ ಆಹಾರದ ಹಕ್ಕಿನ ಮೇಲೆ ನಿರ್ಬಂಧ ಹೇರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ನಿಮ್ಮ ಅನಿಸಿಕೆ ಏನು?
