School: ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಅನುದಾನವನ್ನು ಮಕ್ಕಳ ಆರೋಗ್ಯ (health) ರಕ್ಷಣೆಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಅಂತೆಯೇ ಕರ್ನಾಟಕ (karnataka) ಗಣಿ ಪರಿಸರ ಪುನಶ್ಚೇತನ ನಿಗಮದ ಅನುದಾನದಲ್ಲಿ ದಸರಾ ರಜೆ ಮುಗಿದ ನಂತರ ಸಂಜೆ ವೇಳೆ ಶಾಲಾ (school) ಮಕ್ಕಳಿಗೆ ವಿಶೇಷ ಪೌಷ್ಟಿಕಾಂಶ ಸ್ನ್ಯಾಕ್ಸ್ ನೀಡಲಾಗುವುದು. ಬಳ್ಳಾರಿ, ಚಿತ್ರದುರ್ಗ, ವಿಜಯನಗರ, ತುಮಕೂರು ಜಿಲ್ಲೆಗಳ ಸರ್ಕಾರಿ ಶಾಲಾ(government school) ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ.
ಈ ಹಿನ್ನಲೆ ಗಣಿ ಬಾಧಿತ ನಾಲ್ಕು ಜಿಲ್ಲೆಗಳು ಹತ್ತು ತಾಲೂಕುಗಳ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಸಂಜೆ ವೇಳೆ ಸ್ನ್ಯಾಕ್ಸ್ ನೀಡಲಾಗುವುದು. ಪ್ರತಿ ಮಗುವಿಗೆ ವಾರದಲ್ಲಿ ಒಂದು ದಿನ ಕೆಎಂಎಫ್ (KMF) ನಂದಿನಿ ಪೇಡ ಅಥವಾ ಮೈಸೂರು ಪಾಕ್, ವಾರದಲ್ಲಿ ನಾಲ್ಕು ದಿನ ಹಣ್ಣು, ಎರಡು ದಿನ ಬೇಯಿಸಿದ ತರಕಾರಿ ನೀಡಲು ವಿತರಿಸಲಾಗಿದೆ. ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗಿದೆ. ಶಿಕ್ಷಕರು (teachers) ಸಮೀಕ್ಷೆ ಕಾರ್ಯದಲ್ಲಿ ನಿಯೋಜಿತರಾಗಿದ್ದು ದಸರಾ(dasara) ಮುಗಿದ ನಂತರ ಶಾಲೆಗಳಲ್ಲಿ ಸಂಜೆ ಲಘು ಉಪಾಹಾರ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.
