ಉಡುಪಿ: ನಿಚ್ಚಳವಾದ ಗುರಿ, ಕಠಿಣ ಪರಿಶ್ರಮ, ಏಕಾಗ್ರತೆ ಮತ್ತು ಕನಸುಗಳಿಗೆ ಬದ್ದತೆಯಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉಡುಪಿಯ ಪ್ರತಿಭಾವಂತ ಯುವತಿ ದೀಕ್ಷಾ(Vidushi Deeksha) ಒಂದು ಉತ್ತಮ ಉದಾಹರಣೆ. ಇತ್ತೀಚೆಗೆ ಮಂಗಳೂರಿನ ರಮೋನಾ ಪಿರೇರಾ ಎಂಬುವವರು ಏಳು ದಿನಗಳ ಕಾಲ ನಿರಂತರ ಭರತನಾಟ್ಯ ಮಾಡಿ ವಿಶ್ವ ದಾಖಲೆ ಮಾಡಿದ್ದ ಸುದ್ದಿ ವೈರಲ್ ಆಗಿತ್ತು. ಆದರೆ ಈಗ ದೀಕ್ಷಾ ಅದನ್ನೂ ಮೀರಿಸಿ 216 ಗಂಟೆ ಸತತ ಒಂಭತ್ತು ನಿರಂತರ ಭರತನಾಟ್ಯ ಪ್ರದರ್ಶನ(Continuous BhatNatyam Performance) ಮಾಡುವ ಮೂಲಕ ಒಂದು ಹೊಸ ಮೈಲಿಗಲ್ಲು ತಲುಪಿದ್ದಾರೆ.
ಇದನ್ನೂ ಓದಿ: UDYAM ನೊಂದಣಿ ಮಾಡಿಸಿದ್ದೀರಾ?: ಕಡಿಮೆ ಬಡ್ಡಿಗೆ ಸಾಲ, ಸರ್ಕಾರಿ ಟೆಂಡರ್ ಗಳು ನಿಮ್ಮ ಪಾಲಾಗುತ್ತೆ!
ಹೌದು, ಉಡುಪಿಯ ವಿದುಷಿ ದೀಕ್ಷಾ(Vidushi Deeksha) ಅವರು ಬರೋಬ್ಬರಿ 216 ಗಂಟೆಗಳ ಕಾಲ, ಅಂದರೆ ಸತತ 9 ದಿನಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶನ ನೀಡಿ “ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್”ನಲ್ಲಿ(Golden Book Of World Record) ಸ್ಥಾನ ಪಡೆದುಕೊಂಡಿದ್ದಾರೆ. ಅವರ ಈ ಸಾಧನೆ ನಿಜಕ್ಕೂ ಅದ್ಭುತ.
ಉಡುಪಿ ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಪದವಿ ಕಾಲೇಜಿನಲ್ಲಿ ಆಗಸ್ಟ್ 21ರಂದು ಮಧ್ಯಾಹ್ನ 3.30ಕ್ಕೆ ತಮ್ಮ ನೃತ್ಯ ಪ್ರದರ್ಶನವನ್ನು ಆರಂಭಿಸಿದ ದೀಕ್ಷಾ, ಆಗಸ್ಟ್ 30ರ ಮಧ್ಯಾಹ್ನ 3.30ಕ್ಕೆ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. 9 ದಿನಗಳ ಕಾಲ ಯಾವುದೇ ವಿರಾಮವಿಲ್ಲದೆ, ರಾತ್ರಿ-ಹಗಲು ಭರತನಾಟ್ಯದ ವಿವಿಧ ಹಂತಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್: ಗಣೇಶ ವಿಸರ್ಜನೆ ಹಿನ್ನೆಲೆ ಕೆಲವು ಪ್ರದೇಶಗಳಲ್ಲಿ ಬಾರ್ ಬಂದ್
ಒಬ್ಬ ಯುವತಿಯ ನಿರ್ಧಾರ, ಕಠಿಣ ಪರಿಶ್ರಮ ಮತ್ತು ಆಕೆಯ ಕಲೆಯ ಮೇಲಿನ ಪ್ರೀತಿ ಎಷ್ಟರ ಮಟ್ಟಿಗೆ ಇರಬಹುದು ಎಂಬುದಕ್ಕೆ ಇದು ಒಂದು ಪುರಾವೆ. ದೀಕ್ಷಾ ಅವರ ಈ ಸಾಧನೆ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದೆ. ಇಂತಹ ಇನ್ನೂ ಅನೇಕ ಪ್ರತಿಭೆಗಳು ನಮ್ಮ ನಾಡಿನಲ್ಲಿವೆ ಎಂಬುದೇ ನಮ್ಮ ಹೆಮ್ಮೆ. ಅವರ ಈ ಯಶಸ್ಸು ಅನೇಕ ಯುವ ಕಲಾವಿದರಿಗೆ ಸ್ಫೂರ್ತಿ ನೀಡಲಿ ಎಂದು ಹಾರೈಸೋಣ.
