Suprem Court Justice Vikram Nath: ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ವಿಕ್ರಮ್ ನಾಥ್(Suprem Court Justice Vikram Nath) ಅವರು ಇತ್ತೀಚೆಗೆ ಒಂದು ಆಸಕ್ತಿಕರ ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬೀದಿ ನಾಯಿಗಳ(Street dogs) ಬಗ್ಗೆ ಇರುವ ಪ್ರಕರಣಗಳಿಂದಾಗಿ ತಮಗೆ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಕೂಡ ಅಪಾರ ಜನಪ್ರಿಯತೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಉಡುಪಿಯ ದೀಕ್ಷಾ ಸಾಧನೆಗೆ ಸಲಾಂ: 9 ದಿನಗಳ ನಿರಂತರ ಭರತನಾಟ್ಯ, ವಿಶ್ವ ದಾಖಲೆ!
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಮತ್ತು ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA) ಜಂಟಿಯಾಗಿ ಆಯೋಜಿಸಿದ್ದ “ಮಾನವರು ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹಾಗೂ ಸಹಬಾಳ್ವೆಯ” ಕುರಿತು ಆಯೋಜಿಸಲಾಗಿದ್ದ ಪ್ರಾದೇಶಿಕ ಸಮ್ಮೇಳನವೊಂದರಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಕಳೆದ ವಾರ, ಜಸ್ಟೀಸ್ ನಾಥ್(Suprem Court Justice Vikram Nath) ಅವರ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು(Bench) ಒಂದು ಮಹತ್ವದ ತೀರ್ಪು ನೀಡಿತ್ತು. ದೆಹಲಿ-ಎನ್ಸಿಆರ್ ಪ್ರದೇಶದ ಬೀದಿ ನಾಯಿಗಳನ್ನು ಸಂತಾನಹರಣ ಮಾಡಿದ ನಂತರ ಅವುಗಳನ್ನು ಶೆಲ್ಟರ್ಗಳಲ್ಲಿಯೇ ಇಡಬೇಕು ಎಂಬ ಹಳೆಯ ತೀರ್ಪನ್ನು ಈ ಪೀಠವು ರದ್ದುಗೊಳಿಸಿತು. ಬದಲಾಗಿ, ನಾಯಿಗಳಿಗೆ ಲಸಿಕೆ(Vaccine) ಮತ್ತು ಸಂತಾನಹರಣದ(Sterilization) ನಂತರ ಅವುಗಳನ್ನು ಹಿಡಿದ ಸ್ಥಳದಲ್ಲೇ ವಾವಸ್ ಬಿಡಬೇಕು ಎಂದು ಹೊಸ ಆದೇಶವನ್ನು ಹೊರಡಿಸಿತು.
ಸಮ್ಮೇಳನದಲ್ಲಿ ತಮ್ಮ ಭಾಷಣವನ್ನು ನಗೆಯೊಂದಿಗೆ ಆರಂಭಿಸಿದ ಜಸ್ಮಿಸ್ ನಾಥ್(Justice Nath), “ಇಲ್ಲಿಯವರೆಗೂ ನಾನು ಕಾನೂನು ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದ ನನಗೆ ಅಷ್ಟೇನೂ ಹೆಸರು ಬಂದಿರಲಿಲ್ಲ. ಆದರೆ, ಈ ಬೀದಿ ನಾಯಿಗಳ ಪ್ರಕರಣದಿಂದಾಗಿ(Street dogs Case) ನನಗೆ ದೇಶಾದ್ಯಂತ ಮಾತ್ರವಲ್ಲ, ವಿದೇಶಗಳಲ್ಲಿನ ನಾಗರಿಕ ಸಮುದಾಯದಲ್ಲಿಯೂ ಒಂದು ವಿಶೇಷ ಸ್ಥಾನ ಸಿಕ್ಕಿದೆ. ಈ ಪ್ರಕರಣವನ್ನು ನನಗೆ ಹಂಚಿಕೊಟ್ಟ ನನ್ನ ಮುಖ್ಯ ನ್ಯಾಯಮೂರ್ತಿಗಳಿಗೆ ನಾನು ತುಂಬು ಹೃದಯದ ಧನ್ಯವಾದಗಳನ್ನು ಹೇಳುತ್ತೇನೆ” ಎಂದರು.
ಇದನ್ನೂ ಓದಿ: UDYAM ನೊಂದಣಿ ಮಾಡಿಸಿದ್ದೀರಾ?: ಕಡಿಮೆ ಬಡ್ಡಿಗೆ ಸಾಲ, ಸರ್ಕಾರಿ ಟೆಂಡರ್ ಗಳು ನಿಮ್ಮ ಪಾಲಾಗುತ್ತೆ!
ಒಂದು ವಿದೇಶಿ ಸಮ್ಮೇಳನದ ಬಗ್ಗೆ ನೆನಪಿಸಿಕೊಳ್ಳುತ್ತಾ ಅವರು, “ಆ ಸಭೆಯಲ್ಲಿ ಬೇರೆ ದೇಶಗಳ ವಕೀಲರು ಹಾಗೂ ಅವರ ಸಂಘಗಳ ಮುಖ್ಯಸ್ಥರೂ ಇದ್ದರು. ಅವರೆಲ್ಲರೂ ನನ್ನನ್ನು ನೋಡಿದ ತಕ್ಷಣ ಬೀದಿ ನಾಯಿಗಳ ಪ್ರಕರಣದ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದರು. ಆಗಲೇ ನನಗೆ, ಭಾರತದ ಹೊರಗೂ ಜನರು ನನ್ನನ್ನು ಗುರುತಿಸುತ್ತಿದ್ದಾರೆ ಎಂದು ತಿಳಿದು ತುಂಬಾ ಸಂತೋಷವಾಯಿತು” ಎಂದು ಹೇಳಿದ್ದಾರೆ.
“ಅದಕ್ಕಾಗಿಯೇ ನನಗೆ ಈ ಪ್ರಸಿದ್ಧಿಯನ್ನು ತಂದುಕೊಟ್ಟ ಬೀದಿ ನಾಯಿಗಳಿಗೆ ನಾನು ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಮನುಷ್ಯರು ಆಶೀರ್ವಾದ ಮಾಡುವ ಜೊತೆಗೆ, ನಾಯಿಗಳು ಕೂಡ ನನಗೆ ಶುಭ ಕೋರುತ್ತಿವೆ ಎಂದು ಮೆಸೇಜ್ಗಳು ಬರುತ್ತಿವೆ. ಹೀಗಾಗಿ, ಮನುಷ್ಯರ ಆಶೀರ್ವಾದದ ಜೊತೆಗೆ ಅವುಗಳ ಆಶೀರ್ವಾದವೂ ನನಗೆ ಇದೆ” ಎಂದು ನಗುತ್ತಾ ಹೇಳಿದರು.
ಮಾನವರು ಮತ್ತು ವನ್ಯಜೀವಿಗಳ ನಡುವಿನ (Co-Existence) ಸಹಬಾಳ್ವೆ ಎಷ್ಟು ಮುಖ್ಯ ಎಂಬುದನ್ನು ವಿವರಿಸುತ್ತಾ, ಮನುಷ್ಯರು ಶತಮಾನಗಳಿಂದ ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಒಟ್ಟಾಗಿ ಬದುಕುತ್ತಿದ್ದಾರೆ ಎಂದು ಜಸ್ಟಿಸ್ ನಾಥ್ ನೆನಪಿಸಿದರು. ಆದರೆ, ಕಳೆದ ಕೆಲವು ದಶಕಗಳಿಂದ ನಾವು ಈ ಸಂಸ್ಕೃತಿಯಿಂದ ದೂರವಾಗಿದ್ದೇವೆ. ಅದರ ಪರಿಣಾಮವೇ ಇಂದು ನಾವು ಕಾಣುತ್ತಿರುವ ಸಂಘರ್ಷ ಎಂದು ವಿವರಿಸಿದರು. ಈ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ಸಂವಿಧಾನವು ಮಾರ್ಗದರ್ಶನ ನೀಡುತ್ತದೆ ಎಂದು ಅವರು ಹೇಳಿದರು(Justice Nath)
ಸದ್ಯ, ಜಸ್ಟಿಸ್ ನಾಥ್ ಅವರ ಈ ಮನಮುಟ್ಟುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
