ನವದೆಹಲಿ: ಜನಪ್ರಿಯ ಇಂಟರ್ನೆಟ್ ಬ್ರೌಸರ್ಗಳಾದ ಗೂಗಲ್ ಕ್ರೋಮ್ (Google Chrome) ಮತ್ತು ಮೊಜಿಲ್ಲಾ ಫೈರ್ಫಾಕ್ಸ್ (Mozilla Firefox), ಫೈರ್ಫಾಕ್ಸ್ (firefox) ಬಳಸುತ್ತಿರುವ ಕೋಟ್ಯಂತರ ಬಳಕೆದಾರರಿಗೆ ಭಾರತ ಸರ್ಕಾರವು ಗಂಭೀರ ಎಚ್ಚರಿಕೆ ನೀಡಿದೆ. ಈ ಎರಡೂ ಬ್ರೌಸರ್ಗಳಲ್ಲಿ ಅಪಾಯಕಾರಿ ಭದ್ರತಾ ದೋಷಗಳು (Security Flaws) ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಸೈಬರ್ ದಾಳಿಯ ಅಪಾಯವಿದೆ ಎಂದು ಸರ್ಕಾರ ತಿಳಿಸಿದೆ. (Cyber Crime)
ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಬಿಡುಗಡೆ ಮಾಡಿದ ಸಲಹೆಯ ಪ್ರಕಾರ, ಈ ಬ್ರೌಸರ್ಗಳ ಹಳೆಯ ಆವೃತ್ತಿಗಳಲ್ಲಿ ಗಂಭೀರ ಭದ್ರತಾ ಲೋಪಗಳಿವೆ. ಸೈಬರ್ ಅಪರಾಧಿಗಳು ಈ ದೋಷಗಳನ್ನು ಬಳಸಿಕೊಂಡು ಬಳಕೆದಾರರ ಸಿಸ್ಟಮ್ ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ.
ಹ್ಯಾಕರ್ಗಳಿಂದ ಇರುವ ಪ್ರಮುಖ ಅಪಾಯಗಳೇನು?
CERT-In ನೀಡಿದ ಎಚ್ಚರಿಕೆಯ ಪ್ರಕಾರ, ಈ ಭದ್ರತಾ ದೋಷಗಳನ್ನು ಬಳಸಿಕೊಂಡು ಹ್ಯಾಕರ್ಗಳು ಕೆಳಗಿನ ಅಪಾಯಗಳನ್ನು ಉಂಟುಮಾಡಬಹುದು:
- ವೈಯಕ್ತಿಕ ಡೇಟಾ ಕಳ್ಳತನ: ನಿಮ್ಮ ಕಂಪ್ಯೂಟರ್ನಲ್ಲಿ ಸಂಗ್ರಹವಾಗಿರುವ ವೈಯಕ್ತಿಕ ಮಾಹಿತಿ, ಪಾಸ್ರ್ಡ್ಗಳು ಮತ್ತು ಹಣಕಾಸಿನ ವಿವರಗಳನ್ನು ಸುಲಭವಾಗಿ ಕದಿಯಬಹುದು.
- ರಿಮೋಟ್ ಪ್ರವೇಶ ಮತ್ತು ಮಾಲ್ವೇರ್ ಸ್ಥಾಪನೆ: ಹ್ಯಾಕರ್ಗಳು ನಿಮ್ಮ ಅನುಮತಿಯಿಲ್ಲದೆ ನಿಮ್ಮ ಸಿಸ್ಟಮ್ ಅನ್ನು ದೂರದಿಂದಲೇ (Remote Access) ನಿಯಂತ್ರಿಸಬಹುದು. ಅಲ್ಲದೆ, ಮಾಲ್ವೇರ್ ಅಥವಾ ದುರುದ್ದೇಶವೂರಿತ ಕೋಡ್ ಅನ್ನು ಸ್ಥಾಪಿಸಬಹುದು.
- ಸೇವೆ ನಿರಾಕರಣೆ ದಾಳಿ (DoS): ಸಿಸ್ಟಮ್ನ ಸೇವೆಗಳಿಗೆ ಅಡ್ಡಿಪಡಿಸಲು DoS ದಾಳಿಗಳನ್ನು ನಡೆಸುವ ಅಪಾಯವೂ ಇದೆ.
- ವಂಚನೆ: ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ವೆಬ್ಸೈಟ್ಗಳಿಗೆ ಭೇಟಿ ನೀಡುವಂತೆ ಬಳಕೆದಾರರನ್ನು ಮೋಸಗೊಳಿಸಿ, ಸಿಸ್ಟಮ್ನಲ್ಲಿ ಮಾಲ್ವೇರ್ ರನ್ ಮಾಡುವ ಸಾಧ್ಯತೆಯಿದೆ.
ಈ ಸೈಬರ್ ಬೆದರಿಕೆಯು ಮುಖ್ಯವಾಗಿ ಡೆಸ್ಕ್ಟಾಪ್ ಬಳಕೆದಾರರಿಗೆ (ವಿಂಡೋಸ್, ಮ್ಯಾಕೋಸ್, ಲಿನಕ್ಸ್) ಹೆಚ್ಚು ಅನ್ವಯಿಸುತ್ತದೆ.
ತಕ್ಷಣವೇ ನೀವು ಮಾಡಬೇಕಾದ ಕೆಲಸ
ಸೈಬರ್ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಬಳಕೆದಾರರು ತಕ್ಷಣವೇ ಮಾಡಬೇಕಾದ ಅತಿ ಮುಖ್ಯ ಕೆಲಸವೆಂದರೆ ತಮ್ಮ ಬ್ರೌಸರ್ಗಳನ್ನು ನವೀಕರಿಸುವುದು (Update).
ಗೂಗಲ್ ಮತ್ತು ಮೊಜಿಲ್ಲಾ ಕಂಪನಿಗಳು ಈಗಾಗಲೇ ಈ ಭದ್ರತಾ ದೋಷಗಳನ್ನು ಸರಿಪಡಿಸಲು ಅಗತ್ಯವಾದ ತಿದ್ದುಪಡಿಗಳನ್ನು (Patches) ಬಿಡುಗಡೆ ಮಾಡಿವೆ. ಆದ್ದರಿಂದ, ನಿಮ್ಮ ವೈಯಕ್ತಿಕ ಮತ್ತು ಆರ್ಥಿಕ ಡೇಟಾವನ್ನು ಸುರಕ್ಷಿತವಾಗಿಡಲು, ನಿಮ್ಮ ಬ್ರೌಸರ್ ಅನ್ನು ಯಾವುದೇ ವಿಳಂಬವಿಲ್ಲದೆ ಇತ್ತೀಚಿನ ಆವೃತ್ತಿಗೆ ನವೀಕರಿಸುವಂತೆ CERT-In ಸಂಸ್ಥೆ ಬಲವಾಗಿ ಶಿಫಾರಸು ಮಾಡಿದೆ.
