BPL Card Application: ಕರ್ನಾಟಕದ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಜೀವನಾಡಿಯಾಗಿರುವ ರೇಷನ್ ಕಾರ್ಡ್ಗಳ ಕುರಿತು ಒಂದು ಭಾರಿ ಅಪ್ಡೇಟ್ ಇಲ್ಲಿದೆ! ಬಡವರಿಗೆ ಸಬ್ಸಿಡಿ ದರದಲ್ಲಿ ಅಕ್ಕಿ, ಗೋಧಿ, ಸೀಮೆಎಣ್ಣೆ, ಮತ್ತು ಇತರೆ ಅಗತ್ಯ ವಸ್ತುಗಳನ್ನು ನೀಡುವ ಈ ಕಾರ್ಡ್ಗಾಗಿ ಕಾಯುತ್ತಿದ್ದವರಿಗೆ ಸರ್ಕಾರ ಈಗ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಕಳೆದ ಕೆಲವು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಅರ್ಜಿಗಳು ಸ್ಥಗಿತಗೊಂಡಿದ್ದವು. ಆದರೆ, ಇದೀಗ ನಮ್ಮ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೋಲಾರದಲ್ಲಿ ಈ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಅರ್ಜಿ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕಿದೆ.
ಹೊಸ ರೇಷನ್ ಕಾರ್ಡ್ ವಿತರಣೆ: ಇನ್ಮುಂದೆ ನಿಜವಾದ ಬಡವರಿಗಷ್ಟೇ!
ಹೌದು, ಸಚಿವ ಮುನಿಯಪ್ಪ ಅವರು ಸ್ಪಷ್ಟಪಡಿಸಿರುವಂತೆ, ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ಗಳ ಪರಿಶೀಲನೆ ಕಟ್ಟುನಿಟ್ಟಾಗಿ ನಡೆಯುತ್ತಿದೆ. ಇಷ್ಟು ದಿನ ಸುಳ್ಳು ದಾಖಲೆಗಳನ್ನು ಕೊಟ್ಟು ಬಿಪಿಎಲ್ ಕಾರ್ಡ್ ಪಡೆದ ‘ಅನರ್ಹ’ರ ಕಾರ್ಡ್ಗಳನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ಗಳಾಗಿ ಪರಿವರ್ತಿಸುವ ಕೆಲಸ ಭರದಿಂದ ಸಾಗುತ್ತಿದೆ. ಈ ಕಾರಣಕ್ಕಾಗಿಯೇ ವಿತರಣೆ ಸ್ಥಗಿತವಾಗಿತ್ತು.
ಈಗ, ಈ ತಪಾಸಣೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ನವೆಂಬರ್ 2025ರಿಂದ ಅರ್ಹ ಕುಟುಂಬಗಳಿಗೆ ಹೊಸ ರೇಷನ್ ಕಾರ್ಡ್ಗಳ ವಿತರಣೆ ಅಧಿಕೃತವಾಗಿ ಆರಂಭವಾಗಲಿದೆ.(BPL Card Application) ಇದರಿಂದ ನೈಜ ಬಡವರಿಗೆ ಸರ್ಕಾರದ ಸೌಲಭ್ಯಗಳು ತಲುಪಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆ ದಿನಾಂಕ ಫಿಕ್ಸ್! ಬೇಗ ಬೇಗ ಅರ್ಜಿ ಸಲ್ಲಿಸಿ!
ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದವರಿಗೆ ಇದು ನಿಜಕ್ಕೂ ಸುವರ್ಣಾವಕಾಶ. ಕರ್ನಾಟಕ ಸರ್ಕಾರವು ಅಕ್ಟೋಬರ್ 4, 2025 ರಿಂದ ಅಕ್ಟೋಬರ್ 31, ಅರ್ಜಿ 2025 ರವರೆಗೆ ಹೊಸ ರೇಷನ್ ಕಾರ್ಡ್ ಸಲ್ಲಿಸಲು ಅವಕಾಶ ಕಲ್ಪಿಸಿದೆ.(BPL Card New Application) ಅರ್ಹ ಕುಟುಂಬಗಳು ತಪ್ಪದೇ ಈ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು.
- ಆಫ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
ನಿಮಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕಷ್ಟವಾದರೆ ಚಿಂತಿಸಬೇಡಿ! ನಿಮ್ಮ ಹತ್ತಿರದ ಈ ಕೇಂದ್ರಗಳಿಗೆ ತೆರಳಿ:
ಸ್ಥಳ: ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು.
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00
ಪ್ರಕ್ರಿಯೆ ಸರಳ: ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೇರವಾಗಿ ಈ ಕೇಂದ್ರಗಳಿಗೆ ಭೇಟಿ ನೀಡಿ. ಅಲ್ಲಿ ಅರ್ಜಿ ಫಾರ್ಮ್ ಭರ್ತಿ ಮಾಡಿ, ದಾಖಲೆಗಳೊಂದಿಗೆ ಸಲ್ಲಿಸಿ. ರಸೀದಿ ಪಡೆಯಲು ಮರೆಯದಿರಿ, ಇದು ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಲು ಸಹಾಯ ಮಾಡುತ್ತದೆ.
- ಮನೆಯಲ್ಲೇ ಕುಳಿತು ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ, ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ (https://ahara.karnataka.gov.in/nrc/)
- ಅಲ್ಲಿರುವ “ಹೊಸ ರೇಷನ್ ಕಾರ್ಡ್ ಅರ್ಜಿ” ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಕುಟುಂಬದ ಸದಸ್ಯರ ಮಾಹಿತಿ, ಆಧಾರ್ ಸಂಖ್ಯೆ, ವಾರ್ಷಿಕ ಆದಾಯದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳ (ಉದಾ: ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ) ಸ್ಕ್ಯಾನ್ ಮಾಡಿದ ಪ್ರತಿಯನ್ನು PDF ಅಥವಾ JPG ಫಾರ್ಮ್ಯಾಟ್ನಲ್ಲಿ
ಅಪ್ಲೋಡ್ ಮಾಡಿ.
- ಕೊನೆಯಲ್ಲಿ, ಅರ್ಜಿಯನ್ನು ಸಲ್ಲಿಸಿ (Submit) ಮತ್ತು ಯಶಸ್ವಿ ಸಲ್ಲಿಕೆಯ ಸಂದೇಶಕ್ಕಾಗಿ ಕಾಯಿರಿ.
ಶ್ರಮ ಕಾರ್ಡ್ ಹೊಂದಿರುವವರಿಗೆ ಬಂಪರ್ ಆಫರ್!
ವಿ.ಸೂ: ನೀವು ‘ಶ್ರಮ ಕಾರ್ಡ್’ (Labour Card) ಹೊಂದಿರುವವರಾಗಿದ್ದರೆ, ನಿಮಗಿದು ವಿಶೇಷ ಅವಕಾಶ! ಅಂತಹ ಕುಟುಂಬಗಳು ಮಾರ್ಚ್ 31, 2026 ರವರೆಗೆ ಸಹ ಆದ್ಯತೆಯ BPL ರೇಷನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಬಹುದು. ಈ ಗೋಲ್ಡನ್ ಚಾನ್ಸ್ ಅನ್ನು ದಯವಿಟ್ಟು ಕಳೆದುಕೊಳ್ಳಬೇಡಿ!
