
Elderly Lover: ಲೋಕದ ಕಣ್ಣಿಗೆ ಮರೆಯಾಗಿ ಬದುಕುವವರ ಕಥೆಗಳು ಕೆಲವೊಮ್ಮೆ ನಿರೀಕ್ಷಿಸದ ತಿರುವುಗಳನ್ನು ಪಡೆದು, ದೊಡ್ಡ ನಾಟಕೀಯತೆಗೆ ಕಾರಣವಾಗುತ್ತವೆ. ಇದು ಚೀನಾದ ಅಂತಹದ್ದೇ ಒಂದು ಮರೆಯಲಾಗದ ಘಟನೆ. 66 ವರ್ಷ ವಯಸ್ಸಿನ, ಈಗಾಗಲೇ ದಾಂಪತ್ಯ ಜೀವನದಲ್ಲಿದ್ದ ಒಬ್ಬ ವ್ಯಕ್ತಿ, ಯಾರಿಗೂ ತಿಳಿಯದಂತೆ ಮತ್ತೊಬ್ಬ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಬೆಳೆಸಿದ್ದ. ಗೌಪ್ಯವಾಗಿ ಶುರುವಾದ ಈ ಪ್ರೇಮಕಥೆ, ಅಂತಿಮವಾಗಿ ಇಬ್ಬರ ಜೀವನಕ್ಕೂ ಒಂದು ಕರಾಳ ಅಧ್ಯಾಯವನ್ನೇ ಬರೆದಿದೆ. (Elderly Lover)
ಪ್ರೀತಿಯ ಕಳ್ಳಾಟ ಮತ್ತು ದುರಂತದ ರಾತ್ರಿ
ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿಗಳ ಪ್ರಕಾರ, ಆ ಹಿರಿಯ ವ್ಯಕ್ತಿ ತಮ್ಮ ಸೀಕ್ರೆಟ್ ಪ್ರೇಯಸಿಯೊಂದಿಗೆ ಒಂದು ಹೋಟೆಲ್ಗೆ ಹೋಗಿ ತಂಗಿದ್ದರು.(Elderly Lover) ಆದರೆ, ಆ ರಾತ್ರಿ ನಡೆದ ಘಟನೆಯು ಕೇವಲ ಆ ಇಬ್ಬರ ಜೀವನವನ್ನಷ್ಟೇ ಅಲ್ಲ, ಹೋಟೆಲ್ ಸಿಬ್ಬಂದಿಯನ್ನೂ ನಡುಗಿಸಿತ್ತು. ಮನೆಯವರಿಗೆಲ್ಲ ಏನೂ ತಿಳಿಯದಂತೆ ನಡೆದ ಈ ಘಟನೆ, ಆತನ ಸಾವಿನ ಮೂಲಕ ಎಲ್ಲ ಸತ್ಯವನ್ನೂ ಹೊರಗೆ ತಂದಿತು. ಒಂದು ಮುಚ್ಚಿಟ್ಟ ಸಂಬಂಧ ಹೇಗೆ ಇಡೀ ಜೀವನದ ಮೇಲೆ ಅನಿರೀಕ್ಷಿತ ದುರಂತದ ನೆರಳು ಬೀರುತ್ತದೆ ಎಂಬುದಕ್ಕೆ ಇದೊಂದು ಜೀವಂತ ಉದಾಹರಣೆ.
ಮಾಧ್ಯಮ ವರದಿಗಳ ಪ್ರಕಾರ, 1980ರ ದಶಕದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ಇಬ್ಬರು, 2023ರ ಒಂದು ಪಾರ್ಟಿಯಲ್ಲಿ ಮತ್ತೆ ಭೇಟಿಯಾದರು. ಬಹುಶಃ ಹಳೆಯ ನೆನಪುಗಳು ಮತ್ತೆ ಚಿಗುರಿ, ಅದು ನಿಯಮಿತ ಭೇಟಿಗಳಿಗೆ ಮತ್ತು ಕೊನೆಗೆ ಈ ರಹಸ್ಯ ಸಂಬಂಧಕ್ಕೆ ತಿರುಗಿತು.
ಜುಲೈ 24ರಂದು ಅವರು ಹೋಟೆಲ್ ರೂಮ್ಗೆ ಬಂದರು. ಆ ರಾತ್ರಿ ಕಳೆಯಿತು. ಆದರೆ ಮಾರನೇ ದಿನ ಬೆಳಿಗ್ಗೆ ಆಕೆ ಕಣ್ಣುಬಿಟ್ಟಾಗ, ಆಕೆಯ ಪಕ್ಕದಲ್ಲಿ ಮಲಗಿದ್ದ ಆಕೆಯ ಪ್ರೇಮಿ ಆ 66 ವರ್ಷದ ವ್ಯಕ್ತಿ- ಮರಳಿ ಬಾರದ ಲೋಕಕ್ಕೆ ಹೋಗಿದ್ದ. ಅವರ ದೇಹದಲ್ಲಿ ಜೀವದ ಲವಲೇಶವೂ ಇರಲಿಲ್ಲ.
ಕೋರ್ಟಿನಲ್ಲಿ ನಡೆದ ಇಕ್ಕಟ್ಟಿನ ತೀರ್ಮಾನ:
ಪಕ್ಕದಲ್ಲಿದ್ದವನು ಬದುಕಿಲ್ಲ ಎಂದು ತಿಳಿದು, ಆ ಮಹಿಳೆ ಭಯದಿಂದ ಮೊದಲು ರೂಮಿನಿಂದ ಹೊರಬಂದಳು. ನಂತರ ಧೈರ್ಯ ಮಾಡಿ ಮತ್ತೆ ಬಂದು ನೋಡಿದಾಗ ಡೋರ್ ಲಾಕ್ ಆಗಿತ್ತು. ಸಿಬ್ಬಂದಿ ಮತ್ತು ತುರ್ತು ಸೇವೆಗಳಿಗೆ ಕರೆ ಬಂದ ನಂತರ ಮರಣ ಖಚಿತವಾಯಿತು.
ಅವರ ಕೌಟುಂಬಿಕ ಗೌರವ ಮತ್ತು ಭಾವನೆಗಳಿಗೆ ದೊಡ್ಡ ಪೆಟ್ಟು ಬಿದ್ದ ನಂತರ, ಮೃತರ ಕುಟುಂಬದವರು ಆ ಮಹಿಳೆಯ ವಿರುದ್ಧ ನ್ಯಾಯಾಲಯದ ಮೊರೆ ಹೋದರು.ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದ್ದೇನು ಗೊತ್ತೇ?
“ಈ ವ್ಯಕ್ತಿಯ ಸಾವಿಗೆ ಅವರ ವಯಸ್ಸು ಮತ್ತು ಆರೋಗ್ಯ ಸಮಸ್ಯೆಗಳೇ ಮುಖ್ಯ ಕಾರಣ. ಹೀಗಾಗಿ ಅವರದೇ ಪ್ರಧಾನ ಹೊಣೆಗಾರಿಕೆ ಇದೆ.” ಆದರೆ, “ಆದರೇ, ಮಹಿಳೆ ತಕ್ಷಣಕ್ಕೆ ಹಿಂದಿರುಗಿ ಸರಿಯಾದ ಸಮಯದಲ್ಲಿ ಸಹಾಯಕ್ಕೆ ಕರೆ ಮಾಡಿದ್ದರೆ ಆತನ ಜೀವ ಉಳಿಯುವ ಸಾಧ್ಯತೆ ಇತ್ತು. ಜೊತೆಗೆ, ಅವರ ಈ ಅನೈತಿಕ ನಡವಳಿಕೆಯನ್ನು (Extramarital Affair) ಪರಿಗಣಿಸಿ, ಅವಳೂ ಸ್ವಲ್ಪ ಮಟ್ಟಿಗೆ ಜವಾಬ್ದಾರಳಾಗುತ್ತಾಳೆ.”
ಈ ಮಾನವೀಯ ಹಾಗೂ ನೈತಿಕ ದೃಷ್ಟಿಕೋನದಿಂದ ₹7.5 ಲಕ್ಷ ಪರಿಹಾರ ನೀಡಲು ಕೋರ್ಟ್ ಆದೇಶಿಸಿತು.ಒಂದು ಕಡೆ ಪ್ರೀತಿ, ಇನ್ನೊಂದು ಕಡೆ ನೈತಿಕತೆ ಮತ್ತು ಕಾನೂನು. ಇದರ ಮಧ್ಯೆ ಬಲಿಯಾದವರು ಇಬ್ಬರು-ಒಬ್ಬ ವ್ಯಕ್ತಿ ಜೀವ ಕಳೆದುಕೊಂಡರೆ, ಇನ್ನೊಬ್ಬ ಮಹಿಳೆ ಭಾರೀ ದಂಡ ತೆರುವಂತಾಯಿತು.
