ಬೆಂಗಳೂರು: ಕರ್ನಾಟಕದ ಅಡಿಕೆ ಮಾರುಕಟ್ಟೆಯಲ್ಲಿ ಐತಿಹಾಸಿಕ ದರ ಏರಿಕೆ ದಾಖಲಾಗಿದೆ.(Areca Nut Rate) ಶಿವಮೊಗ್ಗ, ಚನ್ನಗಿರಿ, ಮತ್ತು ಶಿರಸಿಯಂತಹ ಪ್ರಮುಖ ಮಾರುಕಟ್ಟೆ ಕೇಂದ್ರಗಳಲ್ಲಿ ಹೊಸ ಅಡಿಕೆಯ (ಸರಕು) ದರವು ಕ್ವಿಂಟಾಲ್ಗೆ ₹1 ಲಕ್ಷ ರೂಪಾಯಿಗಳನ್ನು ಮೀರುವ ಮೂಲಕ ಕಳೆದ ಒಂದು ದಶಕದಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ.
ಇತರೆ ಅಡಿಕೆ ವಿಧಗಳಾದ ರಾಶಿ ಅಡಿಕೆ ಕ್ವಿಂಟಾಲ್ಗೆ ₹66,000-₹68,000, ಚಾಲಿ ಅಡಿಕೆ ₹46,000-₹49,000, ಮತ್ತು ಗೊರಬಲು ₹37,000 ದರದಲ್ಲಿ ವಹಿವಾಟು ನಡೆಸುತ್ತಿವೆ.(Areca Nut Rate) ಈ ಅನಿರೀಕ್ಷಿತ ಬೆಲೆ ಏರಿಕೆಯು ಬೆಳೆಗಾರರಿಗೆ ಹೆಚ್ಚಿನ ಆದಾಯ ತಂದಿದ್ದರೂ, ಮಾರುಕಟ್ಟೆಯಲ್ಲಿ ದಾಸ್ತಾನು ಕೊರತೆಯ ತೀವ್ರತೆ ಹೆಚ್ಚಿಸಿದೆ.
ಇದನ್ನೂ ಓದಿ: BPL Card Application: ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ!; ತಿದ್ದುಪಡಿಗೆ ಕೊನೆಯ ದಿನಾಂಕ ವಿಸ್ತರಣೆ!
ದರ ಏರಿಕೆಗೆ ಪ್ರಮುಖ ಕಾರಣಗಳು
ಅಡಿಕೆ ಬೆಲೆ ಗಗನಕ್ಕೇರಲು ಮುಖ್ಯವಾಗಿ ಮೂರು ಅಂಶಗಳು ಕಾರಣವಾಗಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ:
- ದಾಸ್ತಾನು ಕೊರತೆ: ಬಯಲುಸೀಮೆಯ (ದಾವಣಗೆರೆ, ಚಿತ್ರದುರ್ಗ) ಹೊಸ ಅಡಿಕೆಯ ಫಸಲು ಇನ್ನೂ ಮಾರುಕಟ್ಟೆಗೆ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ.
- ಮಳೆಯಿಂದ ಸಂಸ್ಕರಣೆ ವಿಳಂಬ: ಮಳೆಯಿಂದಾಗಿ ಅಡಿಕೆ ಸಂಸ್ಕರಣಾ ಪ್ರಕ್ರಿಯೆ (ಒಣಗಿಸುವುದು) ವಿಳಂಬವಾಗಿದೆ. ಇದರಿಂದ ಬಯಲುಸೀಮೆಯ ಅಡಿಕೆ ಲಭ್ಯತೆ ಸೀಮಿತವಾಗಿದೆ.
- ಕೊಳೆ ರೋಗದ ಪರಿಣಾಮ: ಮಲೆನಾಡಿನ ಅಡಿಕೆ ಫಸಲು ಕೊಳೆ ರೋಗ ಮತ್ತು ಎಲೆ ಚುಕ್ಕಿ ರೋಗದಿಂದ ತೀವ್ರವಾಗಿ ಕಡಿಮೆಯಾಗಿದ್ದು, ಒಟ್ಟಾರೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಉತ್ತರ ಭಾರತದ ಪಾನ್ ಮಸಾಲಾ ಬೇಡಿಕೆ ಹೆಚ್ಚಳ
ದೀಪಾವಳಿ ಹಬ್ಬದ ಸನಿಹದಲ್ಲಿ ಉತ್ತರ ಭಾರತದ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿರುವುದು ದರ ಏರಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಮಧ್ಯಪ್ರದೇಶ ಮತ್ತು ದೆಹಲಿಯಂತಹ ರಾಜ್ಯಗಳ ಪಾನ್ ಮಸಾಲಾ ಕಂಪನಿಗಳು ಶಿವಮೊಗ್ಗದಿಂದ ದೊಡ್ಡ ಪ್ರಮಾಣದಲ್ಲಿ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿವೆ.ಕೆAreca Nut Rate)
ಪ್ರತಿದಿನ ನೂರಾರು ಲಾರಿಗಳು ಶಿವಮೊಗ್ಗದಿಂದ ಅಡಿಕೆ ಸಾಗಿಸುತ್ತಿದ್ದು, ಹೊಸ ಫಸಲು ಮಾರುಕಟ್ಟೆಗೆ ಬರುವಲ್ಲಿ ಆಗಿರುವ ವಿಳಂಬದಿಂದಾಗಿ ಈ ಕೊರತೆ ಮತ್ತಷ್ಟು ತೀವ್ರಗೊಂಡಿದೆ.
ತಜ್ಞರ ಅಭಿಪ್ರಾಯ
ಇಷ್ಟೊಂದು ದಾಸ್ತಾನು ಕೊರತೆ ಉಂಟಾಗಿರುವುದು ಇದೇ ಮೊದಲ ಬಾರಿ. ಮಲೆನಾಡಿನ ಫಸಲು ಕಡಿಮೆಯಾಗಿರುವುದು ಮತ್ತು ಬಯಲುಸೀಮೆಯ ಸಂಸ್ಕರಣೆಗೆ ಮಳೆ ಅಡ್ಡಿಯಾಗಿರುವುದು ಅನಿರೀಕ್ಷಿತ ಬೇಡಿಕೆಯನ್ನು ಸೃಷ್ಟಿಸಿದೆ,” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
