
Anaya Bangar Bigg Boss 19: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಮತ್ತು ಕೋಚ್ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್(Anaya Bangar ) ಅವರು ಮುಂಬರುವ ಬಿಗ್ ಬಾಸ್ ಸೀಸನ್ 19ರಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ(Anaya Bangar Bigg Boss 19). ಈ ಕುರಿತು ಪ್ರಮುಖ ಸುದ್ದಿ ಮಾಧ್ಯಮವೊಂದು ವರದಿ ಪ್ರಕಟಿಸಿದ್ದು, ಅನಯಾ ಬಂಗಾರ್ ಅವರು ಆಗಸ್ಟ್ 24ರಿಂದ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಲಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: Karnataka Weather Report: ಬೆಂಗಳೂರಲ್ಲಿ ವಾರವಿಡೀ ಮಳೆ, ಹಲವು ಜಿಲ್ಲೆಗಳಿಗೆ Red Alert!
ಈ ವರದಿಗಳ ಪ್ರಕಾರ, ಅನಯಾ ಬಂಗಾರ್(Anaya Bangar) ಅವರು ತಮ್ಮ ಲಿಂಗ ಪರಿವರ್ತನೆಯ ಕಥೆ, ಟ್ರಾನ್ಸ್ಜೆಂಡರ್ ಕ್ರೀಡಾಪಟುವಾಗಿ ಎದುರಿಸಿದ ಸವಾಲುಗಳು ಮತ್ತು LGBTQ+ ಸಮುದಾಯದ ವಕೀಲೆಯಾಗಿ ತಮ್ಮ ಹೋರಾಟದ ಬಗ್ಗೆ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವ ಸಾಧ್ಯತೆ ಇದೆ. ಅನಯಾ ಗ್ರಾಫಿಕ್ ಡಿಸೈನರ್ ಮತ್ತು ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮುನ್ನ, ಅನಯಾ ಮಹಿಳಾ ಕ್ರಿಕೆಟ್ನಲ್ಲಿ ಆಡಲು ಅವಕಾಶ ಕೋರಿ ಬಿಸಿಸಿಐ ಮತ್ತು ಐಸಿಸಿಗೆ ವೈಜ್ಞಾನಿಕ ವರದಿಯೊಂದಿಗೆ ಮನವಿ ಸಲ್ಲಿಸಿದ್ದರು. ಆದರೆ, ಐಸಿಸಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಟ್ರಾನ್ಸ್ಜೆಂಡರ್(Transgender) ಆಟಗಾರರನ್ನು ಮಹಿಳಾ ಕ್ರಿಕೆಟ್ನಿಂದ ನಿಷೇಧಿಸಿರುವ ಕಾರಣ, ಅವರಿಗೆ ಅವಕಾಶ ಸಿಗಲಿಲ್ಲ.
ಇದನ್ನೂ ಓದಿ: KSCA ಗೆ ಮಾಜಿ ಕ್ರಿಕೆಟಿಗನ ಎಂಟ್ರಿ: ಚುನಾವಣೆಗೆ ಸ್ಪರ್ಧಿಸಲು ರೆಡಿಯಾದ ಭಾರತದ ಮಾಜಿ ವೇಗಿ
ಈ ನಿರ್ಧಾರದ ವಿರುದ್ಧ ಅನಯಾ(Anaya Bangar ) ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ತಮ್ಮ ಪ್ರತಿಭೆ ಮತ್ತು ಸಮರ್ಪಣೆಯನ್ನು ಗುರುತಿಸದಿರುವುದು ವೈಯಕ್ತಿಕವಾಗಿ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಅನಯಾ(Anaya Bangar ) ತಮ್ಮ ಲಿಂಗ ಪರಿವರ್ತನೆಯ ಜೊತೆಗೆ ಗ್ರಾಫಿಕ್ ಡಿಸೈನರ್ ಮತ್ತು ನಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ LGBTQ+ ಸಮುದಾಯದ ಪರವಾಗಿ ಕೆಲಸ ಮಾಡುತ್ತಿದ್ದಾರೆ.
