
ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಾ, ಸರ್ಕಾರದ ವಿರುದ್ಧವೇ ನೇರ ಆರೋಪಗಳನ್ನ ಮಾಡುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿ(Mahesh Shetty Timarodi) ಅವರಿಗೆ ಈಗ ಸಂಕಷ್ಟ ಎದುರಾದಂತಿದೆ.
ಇದನ್ನೂ ಓದಿ: Anaya Bangar: ಬಿಗ್ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರ ಲಿಂಗಪರಿವರ್ತಿತ ಕ್ರಿಕೆಟ್ ಆಟಗಾರ್ತಿ?
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ’28 ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿದ್ದ ತಿಮರೋಡಿ(Mahesh Shetty Timarodi) ಅವರನ್ನು ತಕ್ಷಣವೇ ಬಂಧಿಸುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್(DR G Parameshwar) ಅವರು ಮಂಗಳೂರು ಪೊಲೀಸ್ ಕಮಿಷನರ್ಗೆ(police commissioner) ಆದೇಶ ನೀಡಿದ್ದಾರೆ ಎನ್ನಲಾಗಿದೆ.
ವಿಧಾನಸಭೆಯನ್ನೇ ತಲ್ಲಣಗೊಳಿಸಿದ ಆಡಿಯೋ!
ಸೌಜನ್ಯ(Soujanya Case) ಪರ ಹೋರಾಟದ ಮೂಲಕ ರಾಜ್ಯದ ಗಮನ ಸೆಳೆದಿದ್ದ ಮಹೇಶ್ ತಿಮರೋಡಿ(Mahesh Shetty Timarodi), ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಗಂಭೀರ ಆರೋಪ ಮಾಡಿದ್ದರು.
ಈ ಹಳೆಯ ಆಡಿಯೋ ತುಣುಕು ಈಗ ಮತ್ತೆ ವೈರಲ್ ಆಗಿದ್ದು, ವಿಧಾನಸಭೆಯಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. “ಮುಖ್ಯಮಂತ್ರಿಗಳೇ ಕೊಲೆ ಮಾಡಿದ್ದಾರೆ” ಎಂಬ ಹೇಳಿಕೆ ಸಹಜವಾಗಿಯೇ ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಮುಗಿಬೀಳಲು ದೊಡ್ಡ ಅಸ್ತ್ರವಾಯಿತು. ಸದನದಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿ, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.
ಇದನ್ನೂ ಓದಿ: Election Commission: 65 ಲಕ್ಷ ನಕಲಿ ಮತದಾರರು ಪತ್ತೆ, ಚುನಾವಣಾ ಆಯೋಗದಿಂದ ಪಟ್ಟಿ ಬಿಡುಗಡೆ
‘ಕಾನೂನು ತನ್ನ ಕೆಲಸ ಮಾಡುತ್ತದೆ’:
ಗೃಹ ಸಚಿವರ ಘರ್ಜನೆ ಈ ಗದ್ದಲದ ಬೆನ್ನಲ್ಲೇ ಎಚ್ಚೆತ್ತ ಗೃಹ ಇಲಾಖೆ, ಕಠಿಣ ಕ್ರಮಕ್ಕೆ ಮುಂದಾಗಿದೆ. ಸದನದಲ್ಲಿ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್,(DR G Parameshwar) “ಸರ್ಕಾರ ಸುಮ್ಮನೆ ಕೂತಿಲ್ಲ, ನಾವು ಅಸಹಾಯಕರಲ್ಲ. ಇಂತಹ ವ್ಯಕ್ತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೂ ಗೊತ್ತು,” ಎಂದು ಖಡಕ್ ಮಾತುಗಳನ್ನಾಡಿದ್ದಾರೆ.
“ತಿಮರೋಡಿ ವಿರುದ್ಧ ಈಗಾಗಲೇ ಹತ್ತಾರು ಪ್ರಕರಣಗಳಿವೆ
ಯಾವುದೇ ಮುಲಾಜಿಲ್ಲದೆ ಅವರ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ. ಇಂಥವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಇದಕ್ಕಾಗಿಯೇ ಕಾನೂನು ಇರುವುದು,” ಎಂದು ಹೇಳುವ ಮೂಲಕ, ತಿಮರೋಡಿ(Mahesh Shetty Timarodi) ಬಂಧನದ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಈ ಆದೇಶದ ಹಿನ್ನೆಲೆಯಲ್ಲಿ, ತಿಮರೋಡಿ(Mahesh Shetty Timarodi) ಅವರನ್ನು ಬಂಧಿಸಿ, ಕಾನೂನು ಪ್ರಕಾರ ತನಿಖೆ ನಡೆಸುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ.
ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು?
ಈ ಬೆಳವಣಿಗೆಯಿಂದಾಗಿ ಧರ್ಮಸ್ಥಳ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಎಸ್ಐಟಿ(sit) ತಂಡವು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ತಿಮರೋಡಿ(Mahesh Shetty Timarodi) ಅವರ ಆರೋಪಗಳ ಸತ್ಯಾಸತ್ಯತೆಯನ್ನೂ ಪರಿಶೀಲಿಸುವ ಸಾಧ್ಯತೆಯಿದೆ.
ಒಟ್ಟಿನಲ್ಲಿ, ಈ ಬಂಧನದ ಆದೇಶವು ರಾಜ್ಯ ರಾಜಕಾರಣದಲ್ಲಿ ಮತ್ತು ಧರ್ಮಸ್ಥಳ ಪ್ರಕರಣದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
