Love Story: ಏನೋ ಕೇಳ್ದೆ ದೇವರ ಹತ್ತಿರ ..? ನನ್ನ ಪ್ರೀತಿ ಸಿಗಲಿ ಅಂತ ಕೇಳ್ದೆ.. ಯಾರೋ ಅದು ಹುಡುಗಿ..! ಸಮಯ ಬಂದಾಗ ಹೇಳ್ತಿನಿ ಯಾಕೆ ಈಗ್ಲೆ ಹೇಳೋಕೆ ಏನ್ ಕಷ್ಟ ..? ಹಾಗಲ್ಲ ಅವಳು ಓಕೆ ಅಂದ್ಧೇಲೆ ನಾನೇ ಹೇಳ್ತೀನಿ!! ಪರವಾಗಿಲ್ಲ ಹುಡುಗಿ ಯಾರು ಹೇಳು ಸಾಕು.. No… ಸಮಯ ಬರ್ಲಿ ನಾನೇ ಹೇಳ್ತಿನಿ…ಹೋಗ್ಲಿ ನನಗೆ ಗೊತ್ತಾ ಆ ಹುಡುಗಿ.? ಹುಂ ಗೊತ್ತು!! ಯಾಕೋ ಇಷ್ಟೊಂದು ಕುತೂಹಲ ಸೃಷ್ಟಿ ಮಾಡ್ತಿಯಾ..? ಹೇಳೋದಲ್ವಾ?? ಅವಳ ಮನಸಲ್ಲಿ ನಾನು ಇದಿನೋ ಇಲ್ಲೋ ತಿಳಿದ್ಮೇಲೆನೇ ಹೇಳೋದು..
ಎಷ್ಟು ವರ್ಷದಿಂದ ಹಿಂಗೆ ಕಾಯ್ಕೊಂಡು ಕೂತಿದಿಯಾ..? ನಿನ್ನ ಪರಿಚಯ ಅವಳ ಪರಿಚಯ ಎರಡೂ ಅವತ್ತೇ ಆಗಿದ್ದು. ನನ್ನ ಪರಿಚಯ ಆಗಿ 3 ವರ್ಷ ಆಗ್ತಾ ಬಂತು. ಅವಳ ಮನಸಲ್ಲಿ ಇರೋದು ತಿಳ್ಳೋಳ್ಳೋಕೆ ಎಷ್ಟು ವರ್ಷ ಬೇಕು.. ಕೇಳೋಕೂ ಹೇಳೋಕೂ ನನಗೆ ಭಯ… ನೀನು ಹಿಂಗೆ late ಮಾಡಿ ಮಾಡಿ ಅವಳು ಗ್ಯಾಪ್ ಅಲ್ಲಿ ಯಾರ್ನಾದ್ರು love ಮಾಡಿದ್ರೆ..? ಅದು ನನಗೆ ಗೊತ್ತಿಲ್ಲಾ ಆದ್ರೆ ನನ ಮನಸಲ್ಲಿ ಅವಳಿಗೆ ಮಾತ್ರ ಜಾಗ..(Love story)
ಸರೀ ಗೊತ್ತಾಯ್ತು, ತಡ ಮಾಡ್ಡೆ ಬೇಗ ನಿನ್ನ ಪ್ರೀತಿ ಅರ್ಥ ಮಾಡಿಸು ಅವಳಿಗೆ.. ಅದೇ ಹೇಗ್ ಅರ್ಥ ಮಾಡಸ್ಟೇಕು ಅಂತ ಗೊತ್ತಾಗಿಲ್ಲ.. ಅವಳ ಜೊತೆ ಸ್ವಲ್ಪ ಜಾಸ್ತಿ time spend ಮಾಡು..! ಅದು ಮಾಡ್ತಾ ಇರ್ತಿನಿ ಆಗಾಗ ಆದ್ರೆ ಮನಸ್ಸಲ್ಲಿ ಇರೋದನ್ನ ಹೇಳ್ಕೊಳ್ಳೋ ಧೈರ್ಯ ಬರ್ತಾ ಇಲ್ಲ. Direct ಆಗಿ I LOVE YOU ಅಂತ ಹೇಳ್ಬಿಡು ಅಷ್ಟೇ..ಏನಂತಾ??(Love story)
I Love You ಅಂತ.. ಅವಳು I hate You ಅಂದ್ರೆಕೆಟ್ಟದಾಗಿ ಯಾಕ್ ಯೋಚ್ನೆ ಮಾಡ್ತಿಯಾ..? ಹಾಗಾಲ್ಲ ಅವಳು ಹಾಗೆ ಹೇಳಿದ್ರೆ, ನನಗೆ ತಡಿಯೋ ಶಕ್ತಿ ಇಲ್ಲ ಅದಕ್ಕೆ. ಸರೀ ನೋಡು ಏನ್ ಮಾಡ್ತಿಯೋ..? ಒಟ್ನಲ್ಲಿ ಬೇಗ ಹೇಳಿ ಸಿಹಿ ಸುದ್ದಿ ತಿಳಿಸು… ನಾ ಬರ್ತಿನಿ.. ಹಾ …ಸರಿ ಸರೀ ಹೋಗು..
ಮನದಿ ಕೂತು ಅರಿಯಬೇಕಾದವಳು ನೀನೇ..! ಆದರೆ ಅರಿಯಲೇ ಇಲ್ಲ..ನನ್ನ ಕಣ್ಣಂಚಿನಲ್ಲಿ ಅಡಗಿದ ಪ್ರೀತಿ ನಿನಗೆ ಕಾಣಿಸಲೇ ಇಲ್ಲ ..! ಪ್ರತಿ ಬಾರಿ ನಿನ್ನೊಂದಿಗೆ ಆಡುವ ಮಾತು ಪ್ರೀತಿಯನ್ನು ಉಣಬಡಿಸುತ್ತಿದೆ..!ಸಮಯ ಖಾಲಿ ಆಗುವ ಮುನ್ನ ಅರಿತುಕೋ ನನ್ನ ಭಾವನೆಗಳನ್ನ ..! ಹೇಳಿಬಿಡು ಉತ್ತರ ಹೃದಯದಲ್ಲಿ ಅಡಗಿದ ಪ್ರೀತಿಗೆ ನಿರುತ್ತರ..!
ಗುಲಾಬಿಯಷ್ಟೇ ಸುಂದರ ನೀನು.. ನಿನ್ನ ಸುತ್ತ ಇರುವ ಮುಳ್ಳಂತೆ ನಾನು.. ನಿನ್ನ ಅಂದಕ್ಕೆ ನನ್ನನ್ನು ತೊಂದರೆ ಎನ್ನಬೇಡ ನೀನು. ನಿನ್ನಂದಕ್ಕೆ ಶರಣಾಗುವ ಪ್ರೇಕ್ಷಕರನ್ನ ನೀ ಕೇಳು.. ನಾ ತೊಂದರೆಯಲ್ಲ ರಕ್ಷಣೆ ಒಮ್ಮೆಯಾದರೂ ಯೋಚಿಸಿ ನೋಡು…
ನೀನು ನನ್ನ ಜೀವನದಲ್ಲಿ ಬಂದಾಗ, ಎಲ್ಲವೂ ಬಣ್ಣಗಳಿಂದ ತುಂಬಿದಂತೆ ತೋರುವುದು. ನಿನ್ನ ಸ್ಮಿತ ಮಾತ್ರ ನನ್ನ ದಿನಗಳನ್ನ ಬೆಳಗಿಸುತ್ತದೆ. ನಿನ್ನ ನಗುವು, ನಿನ್ನ ಮಾತು, ನಿನ್ನ ಅಲಿಸು ನೋವುಗಳನ್ನೂ ಮರೆಮಾಚುತ್ತದೆ. ನಾನು ನಿನ್ನೊಂದಿಗೆ ಇರುವ ಪ್ರತಿಯೊಂದು ಕ್ಷಣವನ್ನು ನೆನೆಸಿಕೊಂಡು, ತಾನು ಎಷ್ಟು ಭಾಗ್ಯಶಾಲಿ ಎಂಬುದನ್ನು ಅರಿಯುತ್ತೇನೆ.
ನೀನು ತಿಳಿಯದೇ ಇರಬಹುದಾದರೂ, ನನ್ನ ಹೃದಯದಲ್ಲಿ ನಿನಗಾಗಿ ಬೆಳೆಸಿದ ಪ್ರೀತಿ ಒಂದು ಸುಮ್ಮನಿರುವ ನದಿಯಂತೆ ಧೀರವಾಗಿ ಹರಿಯುತ್ತಿದೆ. ಪ್ರತಿ ರಾತ್ರಿ ನಿನ್ನ ಕನಸು ನೋಡುತ್ತಾ, ನಿನ್ನನ್ನು ಕುರಿತು ಹಾಡುವಂತಾಗಿ ನನ್ನ ಮನಸ್ಸು ತುಂಬಿ ಹೋಗುತ್ತದೆ. ನಾನು ನಿನ್ನೊಡನೆ ಹಾಸುಹೊರೆಯುವ ಮಾತುಗಳಲ್ಲಿಯೇ ನನ್ನ ಭಾವನೆಗಳನ್ನು ಹೇಳಲು ಪ್ರಯತ್ನಿಸುತ್ತೇನೆ, ಆದರೆ ನಿನಗೆ ಕಾಣಿಸದಿರುವುದರಿಂದ ಅಷ್ಟೇನೂ ಅರ್ಥವಾಗದು.
ಸಮಯವೇ ನನ್ನಲ್ಲಿನ ನಿರೀಕ್ಷೆಯನ್ನು ಪರೀಕ್ಷಿಸುತ್ತಿದೆ. ನನ್ನ ಹೃದಯದ ಆಳದಿಂದ ಬರುವ ಪ್ರೀತಿ, ನಿನ್ನ ಅಡಕದೊಳಗೆ ತಲುಪಬೇಕು. ಯಾವ ದಿನ, ಯಾವ ಕ್ಷಣದಲ್ಲಿ ನೀನು ನನ್ನ ಭಾವನೆಗಳನ್ನು ಅರಿಯುವೆ ಎಂಬುದರ ನಿರೀಕ್ಷೆ ನನಗೆ ಶಕ್ತಿಯನ್ನು ಕೊಡುತ್ತಿದೆ.
ನನ್ನ ಹೃದಯದಲ್ಲಿ ಅಡಗಿರುವ ಪ್ರೀತಿ, ನಿನ್ನ ಹೃದಯವರೆಗೂ ತಲುಪುವುದಾದರೆ, ನನ್ನ ಬದುಕಿನ ಗಮ್ಯತೆಯು ಪೂರ್ಣವಾಗುತ್ತದೆ ಎಂದು ನಂಬುತ್ತೇನೆ.ಈ ಪ್ರೀತಿ ಹೃದಯದ ನಿಸ್ವಾರ್ಥ, ಶುದ್ಧ ಉಸಿರಿನಂತೆ ನಿತ್ಯ ಹರಿಯುತ್ತಾ, ನಿನ್ನ ಜೀವನದಲ್ಲಿ ಬೆಳಕು ಮೂಡಿಸಲಿ ಎಂದು ನಾನು ಹಾರೈಸುತ್ತೇನೆ. ಪ್ರತಿ ಕ್ಷಣವೂ ನಿನ್ನ ಸನ್ನಿಧಿಯ ಕನಸಿನಲ್ಲಿ ಮಸುಕಾಗಿ, ನಿನ್ನ ಮೇಲೆ ನನ್ನ ಪ್ರೀತಿ ಬೆಳಗುತ್ತಲೇ ಇರಲಿ…
~ ಲಿಖಿತ್ ಹೊನ್ನಾಪುರ
