Weather Report: ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿರುವ ಹಿನ್ನಲೆಯಲ್ಲಿ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 8ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ(Weather Report) (IMD) ತಿಳಿಸಿದೆ. ಇದರ ಪ್ರಭಾವದಿಂದ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲೂ ಮಳೆಯಾಗಲಿದ್ದು, ಉತ್ತರ ಆಂಧ್ರಪ್ರದೇಶದ ಕೆಲ ಸ್ಥಳಗಳಲ್ಲಿ ಗುರುವಾರ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
ರಾಜ್ಯದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ. ಇದರ ಜೊತೆಗೆ ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಎಲ್ಲೆಡೆ ಮಳೆಯಾಗಲಿದೆ.(Weather Report)
ಇದನ್ನೂ ಓದಿ: Vijaya Dashami: ಸತ್ಯ, ಶುದ್ಧತೆಯ ಪಥ; ಪ್ರತಿಯೊಂದು ವಿಜಯದ ಹಿಂದಿನ ಉದಾತ್ತ ಸಂದೇಶ-ಹಬ್ಬದ ವಿಶೇಷ ಲೇಖನ
ಈಗಾಗಲೇ ರಾಜ್ಯದ ಯಲ್ಲಾಪುರದಲ್ಲಿ ಭಾರೀ ಮಳೆ ದಾಖಲಾಗಿದ್ದು, ಹೊನ್ನಾವರ, ಆಗುಂಬೆ, ಅಂಕೋಲಾ, ಕ್ಯಾಸಲ್ ರಾಕ್, ಗೇರುಸೊಪ್ಪ, ಮಂಕಿ, ಕದ್ರಾ, ಕಾರವಾರ, ಕೋಟಾ, ಕೊಟ್ಟಿಗೆಹಾರ, ಕುಮಟಾ, ಕುಂದಾಪುರ, ಲೋಂಡಾ, ಮಂಗಳೂರು ಮತ್ತು ಮುಂಡಗೋಡಿನಲ್ಲಿ ಮಳೆಯಾಗಿದೆ.
ಇನ್ನು ಉಷ್ಣಾಂಶದ ಕುರಿತು ಹೇಳುವುದಾದರೆ, ಬೆಂಗಳೂರು ಎಚ್ಎಎಲ್ ನಲ್ಲಿ ಗರಿಷ್ಠ 29.5°C ಮತ್ತು ಕನಿಷ್ಠ 20.0°C ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ 28.9°C ಮತ್ತು ಕನಿಷ್ಠ 20.1°C ಇದ್ದು, ಮೋಡಕವಿದ ವಾತಾವರಣವಿದೆ. ಕರಾವಳಿ ಪ್ರದೇಶದಲ್ಲಿ ಹೊನ್ನಾವರದಲ್ಲಿ ಗರಿಷ್ಠ 30.1 C ಮತ್ತು ಕನಿಷ್ಠ 24.3°C ಹಾಗೂ ಕಾರವಾರದಲ್ಲಿ ಗರಿಷ್ಠ 30.0°C ಮತ್ತು ಕನಿಷ್ಠ 23.2 C ದಾಖಲಾಗಿದೆ. ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಬೀದರ್ನಲ್ಲಿ ಗರಿಷ್ಠ 31.0°C, ಕಲಬುರಗಿಯಲ್ಲಿ ಗರಿಷ್ಠ, 31.0 C, ರಾಯಚೂರಿನಲ್ಲಿ ಗರಿಷ್ಠ 30.6°C ಮತ್ತು ವಿಜಯಪುರದಲ್ಲಿ ಗರಿಷ್ಠ 29.6 C ಉಷ್ಣಾಂಶ ದಾಖಲಾಗಿದೆ.(Weather Report)
