Vastu copper Sun: ಬಹುತೇಕ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮನೆಯ ವಾಸ್ತುವಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಬೇಕೆಂದರೆ ಧನಾತ್ಮಕ ಶಕ್ತಿ ತುಂಬಿರಬೇಕೆಂದರೆ ವಾಸ್ತು ಸರಿಯಾಗಿರಬೇಕು ಎಂಬುದು ಬಹುತೇಕರ ನಂಬಿಕೆ. ವಾಸ್ತು ಸರಿಪಡಿಸಿಕೊಳ್ಳಲು ಕೆಲವೊಮ್ಮೆ ದೊಡ್ಡ ಬದಲಾವಣೆಗಳಿಗೂ ನಾವು ಸಿದ್ಧರಾಗುತ್ತೇವೆ ಆದರೆ, ಚಿಕ್ಕ ಚಿಕ್ಕ ಬದಲಾವಣೆಗಳು ಮತ್ತು ಸರಿಯಾದ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದಲೂ ವಾಸ್ತು ದೋಷಗಳನ್ನು ನಿವಾರಿಸಬಹುದು. ಅಂತಹ ಒಂದು ಪ್ರಮುಖ ವಸ್ತು ಎಂದರೆ ಅದು ತಾಮ್ರದ ಸೂರ್ಯ.(Vastu copper Sun)
ಹೌದು, ತಾಮ್ರದಿಂದ ಮಾಡಿದ ಸೂರ್ಯನ ಪ್ರತಿಮೆಯನ್ನು ಮನೆಯಲ್ಲಿ ಇಡುವುದು ತುಂಬಾ ಶುಭಕರ ಎಂದು ನಂಬಲಾಗಿದೆ. ಇದು ಮನೆಯಿಂದ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ, ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ ಹಾಗಾದರೆ ಈ ತಾಮ್ರದ ಸೂರ್ಯನನ್ನು ನಿಮ್ಮ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
ತಾಮ್ರದ ಸೂರ್ಯನ ಪ್ರಾಮುಖ್ಯತೆ ಮತ್ತು ಪ್ರಯೋಜನಗಳು(Vastu copper Sun)
- ವಾಸ್ತು ಶಾಸ್ತ್ರದ ಪ್ರಕಾರ,(Vastu copper Sun) ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಅನೇಕ ಪ್ರಯೋಜನಗಳಿವೆ.
- ಪ್ರತಿ ನಕಾರಾತ್ಮಕ ಶಕ್ತಿಗೆ ರಕ್ಷಾಕವಚ: ತಾಮ್ರದ ಸೂರ್ಯನು ದುಷ್ಟ ಶಕ್ತಿಗಳು ಮನೆಯೊಳಗೆ
ಪ್ರವೇಶಿಸುವುದನ್ನು ತಡೆಯುತ್ತಾನೆ ಎಂದು ನಂಬಲಾಗಿದೆ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೋಗಲಾಡಿಸಿ, ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. - ಅದೃಷ್ಟ ಮತ್ತು ಸಮೃದ್ಧಿ: ತಾಮ್ರದಿಂದ ಮಾಡಿದ ಸೂರ್ಯನ ಪ್ರತಿಮೆಯನ್ನು ಮನೆಯ ಮುಖ್ಯ ದ್ವಾರಕ್ಕೆ ಎದುರಾಗಿ ಇಟ್ಟರೆ, ಮನೆಯವರಿಗೆ ಅದೃಷ್ಟ ಒಲಿದು ಬರುತ್ತದೆ ಎಂದು ಹೇಳಲಾಗುತ್ತದೆ.
- ಸೂರ್ಯನ ಆಕರ್ಷಣಾ ಶಕ್ತಿ: ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ.
- ಮತ್ತು ಅಗ್ನಿಯ ಸ್ವರೂಪ ಎಂದೂ ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಸೂರ್ಯನಿಗೆ ವಿಶೇಷ ಸ್ಥಾನವಿದೆ ಅವನ ಕಿರಣಗಳು ಆರೋಗ್ಯಕ್ಕೆ ಉತ್ತಮ ಎಂದು ಎಲ್ಲರಿಗೂ ತಿಳಿದಿದೆ. ಹಾಗೆಯೇ ತಾಮ್ರದ ಸೂರ್ಯನು ಪ್ರಬಲ ಆಕರ್ಷಣಾ ಶಕ್ತಿಯನ್ನು ಹೊಂದಿದ್ದು ಕೀರ್ತಿ, ಪ್ರತಿಷ್ಠೆ ಮತ್ತು ಉತ್ತಮ ಜನಸಂಪರ್ಕವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಉನ್ನತ ಮಟ್ಟದ ವ್ಯಕ್ತಿಗಳೊಂದಿಗೆ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ತಾಮ್ರದ ಸೂರ್ಯನನ್ನು ಇಡಬೇಕಾದ ಸರಿಯಾದ ದಿಕ್ಕು
- ವಾಸ್ತು ತಜ್ಞರ ಪ್ರಕಾರ,(Vastu copper Sun)ತಾಮ್ರದ ಸೂರ್ಯನ ಪ್ರತಿಮೆಯನ್ನು ಪೂರ್ವ ದಿಕ್ಕಿನಲ್ಲಿಯೇ ಇಡಬೇಕು. ಇದಕ್ಕೆ ಕಾರಣ ಇಷ್ಟೇ ಸೂರ್ಯನು ಪ್ರತಿದಿನ ಪೂರ್ವ ದಿಕ್ಕಿನಲ್ಲಿಯೇ ಉದಯಿಸುತ್ತಾನೆ.
- ಸಕಾರಾತ್ಮಕ ಶಕ್ತಿ: ಮನೆಯಲ್ಲಿ ತಾಮ್ರದ ಸೂರ್ಯನನ್ನು ಕಿಟಕಿಗಳ ಬಳಿ ಅಥವಾ ಗೋಡೆಯ ಮೇಲೆ ಪೂರ್ವ ದಿಕ್ಕಿನಲ್ಲಿ ನೇತುಹಾಕಬೇಕು. ಇದು ಮನೆಯೊಳಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಎಲ್ಲಾ ರೀತಿಯ ಪ್ರತಿಕೂಲ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ.
- ಸೂರ್ಯ ಕಿರಣಗಳ ಪರ್ಯಾಯ ಮೂಲ: ಸೂರ್ಯನ ಕಿರಣಗಳನ್ನು ನೇರವಾಗಿ ಪಡೆಯಲು ಸಾಧ್ಯವಾಗದ ಸ್ಥಳಗಳಲ್ಲಿ ಅಥವಾ ಮನೆಗಳಲ್ಲಿ, ಈ ತಾಮ್ರದ ಸೂರ್ಯನ ಪ್ರತಿಮೆಯು ಆ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ.
ಪ್ರತಿದಿನ ಸೂರ್ಯದೇವನನ್ನು ಪ್ರಾರ್ಥಿಸುವುದು ಆರೋಗ್ಯ ಮಾನಸಿಕ ನೆಮ್ಮದಿ ಮತ್ತು ವೃತ್ತಿ-ವ್ಯವಹಾರದಲ್ಲಿ ಶುಭವನ್ನು ತರುತ್ತದೆ ಎಂದು ಪುರಾತನ ನಂಬಿಕೆಗಳು ಹೇಳುತ್ತವೆ. ಆದ್ದರಿಂದ, ಬಹಳಷ್ಟು ಜನರು ತಮ್ಮ ಮನೆಗಳಲ್ಲಿ ಈ ತಾಮ್ರದ ಸೂರ್ಯನ(Vastu copper Sun) ಪ್ರತಿಮೆಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳುತ್ತಾರೆ. ಇದು ಕೇವಲ ಅಲಂಕಾರಿಕ ವಸ್ತುವಾಗದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಯಶಸ್ಸನ್ನು ತರುವ ಸಂಕೇತವಾಗಿದೆ.
ವಿಸೂ: ಈ ಲೇಖನದಲ್ಲಿ ನೀಡಲಾದ ಮಾಹಿತಿ ಕೇವಲ ವಾಸ್ತು ಶಾಸ್ತ್ರ ಮತ್ತು ಕೆಲವು ನಂಬಿಕೆಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಈ ಮಾಹಿತಿಯನ್ನು ಎಷ್ಟು ನಂಬಬೇಕು ಎಂಬುದು ನಿಮ್ಮ ವೈಯಕ್ತಿಕ ಆಯ್ಕೆ.
