INS Androth: ಸಾಗರ ಗಡಿಗಳನ್ನು ಕಾಯುವ ನಮ್ಮ ನೌಕಾಪಡೆಯ ಕೈಗೆ ಈಗ ಮತ್ತೊಂದು ಅಪ್ರತಿಮ ಅಸ್ತ್ರ ಸೇರ್ಪಡೆಯಾಗಿದೆ. ಕೇವಲ ನಾಲ್ಕು ತಿಂಗಳ ಅಂತರದಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಜಲಾಂತರ್ಗಾಮಿ ವಿರೋಧಿ ಕ್ರಾಫ್ಟ್ (ASW SWC) ಇದಾಗಿದ್ದು ಇದು ದೇಶದ ರಕ್ಷಣಾ ಸಾಮರ್ಥ್ಯಕ್ಕೆ ದೊಡ್ಡ ಬಲ ತುಂಬಿದೆ.
ವಿಶಾಖಪಟ್ಟಣದಲ್ಲಿ ಇತ್ತೀಚೆಗೆ ‘ಐಎನ್ಎಸ್ ಆಂಡ್ರೋತ್ ಯುದ್ಧನೌಕೆಯನ್ನು ಭಾರತೀಯ ನೌಕಾಪಡೆಗೆ ಔಪಚಾರಿಕವಾಗಿ ಸೇರ್ಪಡೆ ಮಾಡಲಾಗಿದೆ.(commissioning)ಶೇಕಡಾ 80ಕ್ಕೂ ಹೆಚ್ಚು ದೇಶೀಯ ತಂತ್ರಜ್ಞಾನದಿಂದ ನಿರ್ಮಾಣಗೊಂಡಿರುವ ಈ ನೌಕೆ, ಕರಾವಳಿಯ ಆಳವಿಲ್ಲದ ನೀರಿನಲ್ಲಿ ಕದ್ದು ನುಸುಳುವ ಶತ್ರು ಸಬ್ಮರೀನ್ಗಳನ್ನು ಪತ್ತೆ ಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ ಯುದ್ಧನೌಕೆಯಲ್ಲ, ನಮ್ಮ ‘ಆತ್ಮನಿರ್ಭರ ಭಾರತ’ದ(Atma Nirbar Bharat) ಹೆಮ್ಮೆಯ ಸಂಕೇತವೂ ಹೌದು. ಈ ಹೊಸ ಸೇರ್ಪಡೆಯು ನಮ್ಮ ಕಡಲ ಕಾವಲನ್ನು ಹೇಗೆ ಇನ್ನಷ್ಟು ಬಲಪಡಿಸಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ?
ಕಳೆದ ಕೇವಲ ನಾಲ್ಕು ತಿಂಗಳಲ್ಲಿ ಭಾರತೀಯ ನೌಕಾಪಡೆಗೆ ಇದು ಎರಡನೇ ಆಂಟಿ ಸಬ್ಮರೀನ್ ವಾರ್ಫೇರ್ ಷಾಲೋ ವಾಟರ್ ಕ್ರಾಮ್ (ASW SWC) ಯುದ್ಧನೌಕೆಯಾಗಿದೆ.
ಈ ನೌಕೆಗಳ ಮುಖ್ಯ ಕಾರ್ಯವೆಂದರೆ, ಕರಾವಳಿಯ ಆಳವಲ್ಲದ ನೀರಿನಲ್ಲಿ ನುಸುಳುವ ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚಿ, ಅವುಗಳ ಇರುವಿಕೆಯನ್ನು ನಮ್ಮ ನೌಕಾಪಡೆಗೆ ತಿಳಿಸುವುದು. ಶೇಕಡಾ 80ಕ್ಕೂ ಹೆಚ್ಚು ದೇಶೀಯ ತಂತ್ರಜ್ಞಾನದಿಂದ ನಿರ್ಮಿಸಲಾಗಿರುವ ಈ ‘ಐಎನ್ಎಸ್ ಆಂಡ್ರೋತ್ ನಮ್ಮ ನೌಕಾಪಡೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಶತ್ರು ಜಲಾಂತರ್ಗಾಮಿಗಳ ಬೇಟೆಗೆ ಬ್ರಹ್ಮಾಸ್ತ್ರ

ನಮ್ಮ ಜಲ ಪ್ರದೇಶಕ್ಕೆ ನುಸುಳುವ ಶತ್ರು ಜಲಾಂತರ್ಗಾಮಿ ನೌಕೆಗಳನ್ನು(Submarine warfare ships) ಪತ್ತೆ ಹಚ್ಚಲು ಭಾರತೀಯ ನೌಕಾಪಡೆಗೆ ಮತ್ತೊಂದು ಅದ್ಭುತ ಅಸ್ತ್ರ ಲಭಿಸಿದೆ. ಈಗಾಗಲೇ ಐಎನ್ಎಸ್ ಅರ್ನಾಲಾ’ ಈ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಈಗ ಅದಕ್ಕೆ ‘ಐಎನ್ಎಸ್ ಆಂಡ್ರೋತ್ ಜೊತೆಯಾಗಿದೆ. ಈ ಎರಡೂ ಯುದ್ಧನೌಕೆಗಳನ್ನು ವಿಶಾಖಪಟ್ಟಣಂನಲ್ಲಿಯೇ ಆಯೋಗಗೊಳಿಸಿರುವುದು ಮತ್ತೊಂದು ವಿಶೇಷ. ಈ ಎರಡು ನೌಕೆಗಳ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯಗಳು ಗಮನಾರ್ಹವಾಗಿ ಹೆಚ್ಚಲಿವೆ ಎಂದು ಮೂಲಗಳು ತಿಳಿಸಿವೆ.
ಐಎನ್ಎಎಸ್ ಆಂಡ್ರೋತ್(INS Androth) ಯುದ್ಧನೌಕೆಯನ್ನು ಸೋಮವಾರ ವಿಶಾಖ ನೇವಲ್ ಡಾಕ್ಯಾರ್ಡನಲ್ಲಿ ಪೂರ್ವ ನೌಕಾಪಡೆಯ ಕಮಾಂಡ್ ಫ್ಲಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ವೈಸ್ ಅಡ್ಮಿರಲ್ ರಾಜೇಶ್ ಪಂಧರ್ಕರ್ ಅವರು ಔಪಚಾರಿಕವಾಗಿ ಸೇವೆಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿಗಳು ಮತ್ತು ಹಡಗು ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ಸರ್ಕಾರಿ ಸ್ವಾಮ್ಯದ ಹಡಗು ನಿರ್ಮಾಣ ಸಂಸ್ಥೆ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ (GRSE) ಈ ಯುದ್ಧನೌಕೆಯನ್ನು ವಿನ್ಯಾಸಗೊಳಿಸಿ, ನಿರ್ಮಿಸಿದೆ. ‘ಐಎನ್ಎಸ್ ಆಂಡ್ರೋತ್ ಶೇ.80ಕ್ಕೂ ಹೆಚ್ಚು ಭಾಗಗಳನ್ನು ದೇಶೀಯವಾಗಿ ತಯಾರಿಸಲಾಗಿದೆ. ಎಂದು ಸಂಬಂಧಿತ ಮೂಲಗಳು ದೃಢಪಡಿಸಿದ್ದು, ಇದು ಭಾರತದ ಸ್ಥಳೀಯ ಹಡಗು ನಿರ್ಮಾಣ ಸಾಮರ್ಥ್ಯಕ್ಕೆ ದೊಡ್ಡ ಸಾಕ್ಷಿಯಾಗಿದೆ.
‘ಐಎನ್ಎಸ್ ಆಂಡ್ರೋತ್’ ವಿಶೇಷತೆಗಳು:

ಎರಡನೇ ಯುದ್ಧನೌಕೆ: ಆಂಟಿ ಸಬ್ಮರೀನ್ ವಾರ್ಫರ್ ಷಾಲೋ ವಾಟರ್ ಕ್ರಾಫ್ಟ್ (ASW SWC) ಶ್ರೇಣಿಯಲ್ಲಿ ‘ಐಎನ್ಎಸ್ ಅರ್ನಾಲಾ ನಂತರ ಇದು ಎರಡನೇ ಯುದ್ಧನೌಕೆಯಾಗಿದೆ. ‘ಐಎನ್ಎಸ್ ಅರ್ನಾಲಾ’ ಈ ವರ್ಷದ ಜೂನ್ 18 ರಂದು ಭಾರತೀಯ ನೌಕಾಪಡೆಗೆ ಸೇರಿತ್ತು.
ಹೆಸರಿನ ಹಿಂದಿನ ಕಥೆ: ಲಕ್ಷದ್ವೀಪದಲ್ಲಿರುವ ಆಂಡ್ರೋತ್(INS Androth)ಎಂಬ ದ್ವೀಪದ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದೆ.
ದೇಶೀಯ ಶಸ್ತ್ರಾಸ್ತ್ರ: ಐಎನ್ಎಸ್ ಆಂಡ್ರೋತ್(INS Androth) ದೇಶೀಯವಾಗಿ ವಿನ್ಯಾಸಗೊಳಿಸಲಾದ 30 ಮಿಲಿಮೀಟರ್ ಸರ್ಫೇಸ್ ಗನ್ ಅನ್ನು ಹೊಂದಿದೆ.
ಸಮನ್ವಯ ಕಾರ್ಯಾಚರಣೆ: ಈ ನೌಕೆಗಳು ವಿಮಾನಗಳೊಂದಿಗೆ ಸಮನ್ವಯ ಸಾಧಿಸಿ, ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಬೇಟೆಯಾಡಲಿವೆ.
ಅತ್ಯಾಧುನಿಕ ವ್ಯವಸ್ಥೆಗಳು: ಈ ಎರಡು ಯುದ್ಧನೌಕೆಗಳು ಅತ್ಯಾಧುನಿಕ ಯುದ್ಧ ನಿರ್ವಹಣಾ
ವ್ಯವಸ್ಥೆಗಳನ್ನು, ಹಗುರವಾದ ಟಾರ್ಪಿಡೊಗಳನ್ನು ಮತ್ತು ಜಲಾಂತರ್ಗಾಮಿ ವಿಧ್ವಂಸಕ ರಾಕೆಟ್ಗಳನ್ನು ಹೊಂದಿವೆ.
ಬೃಹತ್ ಯೋಜನೆ: ಆಳವಿಲ್ಲದ ನೀರಿನಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ಬೇಟೆಯಾಡಲು ಭಾರತೀಯ ನೌಕಾಪಡೆಯು ಒಟ್ಟು 16 ಸುಧಾರಿತ ನೌಕೆಗಳಿಗೆ ಆದೇಶ ನೀಡಿದೆ. ಇದರಲ್ಲಿ 8 ಯುದ್ಧನೌಕೆಗಳನ್ನು ಕೊಲ್ಕತ್ತಾದ GRSE ಸಂಸ್ಥೆ ನಿರ್ಮಿಸುತ್ತಿದೆ.
‘ಐಎನ್ಎಸ್ ಆಂಡ್ರೋತ್(INS Androth) ನೌಕಾಪಡೆಗೆ ಸೇರ್ಪಡೆಯಾಗುವುದರೊಂದಿಗೆ ಭಾರತೀಯ ನೌಕಾಪಡೆಯ ಸ್ಥಳೀಯಕರಣದ ಪ್ರಯತ್ನಗಳಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದೆ ಎಂದು ಆಸ್ಮರ್ನ್ ನೇವಲ್ ಕಮಾಂಡ್ ಪ್ರಕಟಣೆಯಲ್ಲಿ ತಿಳಿಸಿದೆ ಇದು ನಮ್ಮ ದೇಶದ ರಕ್ಷಣಾ ಸಾಮರ್ಥ್ಯಕ್ಕೆ ಮತ್ತು ಬಲ ತುಂಬಲಿದೆ
