ಟೊರಂಟೊ: ಕೆನಡಾದಲ್ಲಿ ಮತ್ತೆ ಭಾರತೀಯ ಮೂಲದ ಗ್ಯಾಂಗ್ಗಳ ಕ್ರೌರ್ಯ ಮುಂದುವರೆದಿದೆ. ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್(Bishnoi Gang Attack) ಕೆನಡಾದಲ್ಲಿ(Canada) ಮೂರು ಪ್ರತ್ಯೇಕ ಸ್ಥಳಗಳಲ್ಲಿ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಅಚ್ಚರಿಯೆಂದರೆ, ಈ ದಾಳಿಗಳ ಹಿಂದೆ ಲಾರೆನ್ಸ್ ಗ್ಯಾಂಗ್(Bishnoi Gang Attack) ಇರುವುದಾಗಿ ಸಾಮಾಜಿಕ ಮಾಧ್ಯಮದ ಪೋಸ್ಟ್ ಗಳಲ್ಲಿ ದೃಢಪಡಿಸಿವೆ.
ಗೋಲಿ ಧಿಲೋನ್ ಮತ್ತು ಲಾರೆನ್ಸ್ ಬಿಷ್ಣೋಯ್(Bishnoi Gang Attack) ಹೆಸರನ್ನು ಬಳಸಿಕೊಂಡು ನವೀ ತೇಸಿ ಎಂಬ ವ್ಯಕ್ತಿ ಗಾಯಕರಿಂದ ಬರೋಬ್ಬರಿ ₹50 ಲಕ್ಷ (ಭಾರತೀಯ ಮೌಲ್ಯದಲ್ಲಿ) ಸುಲಿಗೆ ಮಾಡಿದ್ರೆ ಈ ದಾಳಿಗೆ ಕಾರಣ ಎಂದು ಗ್ಯಾಂಗ್ ಹೇಳಿಕೊಂಡಿದೆ. ಈ ಘಟನೆ ಕೆನಡಾದಲ್ಲಿ ಗ್ಯಾಂಗ್ನ ಪ್ರಬಲ ನೆಲೆ ಇರುವುದನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.
ವಿಡಿಯೋದಲ್ಲಿ ಮುಸುಕುಧಾರಿಗಳ ಅರ್ಭಟ
ಸಾಮಾಜಿಕ ಮಾಧ್ಯಮದಲ್ಲಿ ಈ ದಾಳಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಮುಸುಕು ಧರಿಸಿದ ವ್ಯಕ್ತಿಯೊಬ್ಬ ವಿವಿಧ ಸ್ಥಳಗಳಲ್ಲಿ ಬಂದೂಕಿನಿಂದ ಗುಂಡು ಹಾರಿಸುವುದನ್ನು ಇದರಲ್ಲಿ ನೋಡಬಹುದು. ಮೊದಲು ಕಾರಿನೊಳಗೆ ಕುಳಿತು ಗುಂಡು ಹಾರಿಸಿದ ಆತ ನಂತರ ರಸ್ತೆಯ ಮಧ್ಯದಲ್ಲಿ ನಿಂತು ಫೈರಿಂಗ್ ನಡೆಸಿದ್ದಾನೆ. ಈ ದಾಳಿಯಲ್ಲಿ ಯಾರೂ ಗಾಯಗೊಂಡಿರುವ ಅಥವಾ ಸಾವನ್ನಪ್ಪಿರುವ ಬಗೆ, ಇನ್ನೂ ವರದಿಯಾಗಿಲ್ಲ.
ತೇಸಿಗೆ ಸೇರಿದ ನಿವಾಸ ಮತ್ತು ವ್ಯಾಪಾರ ಸ್ಥಳಗಳು ಸೇರಿದಂತೆ ಮೂರು ಕಡೆಗಳಲ್ಲಿ ದಾಳಿ ನಡೆದಿದೆ. ಬಿಷ್ಣೋಯ್ ಗ್ಯಾಂಗ್ನ (Bishnoi Gang Attack) ಸಹವರ್ತಿ ಎಂದು ಹೇಳಲಾದ ಫತೇ ಪೋರ್ಚುಗಲ್ ಸಾಮಾಜಿಕ ಮಾಧ್ಯಮದಲ್ಲಿ ಈ ಗುಂಡಿನ ದಾಳಿಗೆ ತಾನೇ ಹೊಣೆ ಎಂದು ಹೇಳಿಕೊಂಡಿದ್ದಾನೆ.
ಫತೇಪೋರ್ಚುಗಲ್ ಪೋಸ್ಟ್ನಲ್ಲಿ ಏನಿದೆ?: ‘ನವೀ ತೇಸಿ ಲಾರೆನ್ಸ್ ಬಿಡೋಯ್ ಹೆಸರಿನಲ್ಲಿ ಗಾಯಕರಿಂದ
15 ಮಿಲಿಯನ್ (ಕೆನಡಾ ಡಾಲರ್ ಮೌಲ್ಯದಲ್ಲಿ) ಹಣವನ್ನು ವಸೂಲಿ ಮಾಡಿದ್ದಾನೆ. ಅದಕ್ಕಾಗಿಯೇ ನಾವು ಈ ಕ್ರಮ ಕೈಗೊಂಡಿದ್ದೇವೆ. ಯಾರ ಜೀವ ಅಥವಾ ವ್ಯವಹಾರಕ್ಕೆ ತೊಂದರೆಯಾದರೆ, ಅದು ಅವರವರ ಜವಾಬ್ದಾರಿ ನಮ್ಮ ವಿಧಾನಗಳು ಅತಿರೇಕವೆಂದು ಕಂಡರೂ, ನಮ್ಮ ಉದ್ದೇಶಗಳು ತಪ್ಪು ಅಲ್ಲ ಎಂದು ಫತೇ ಪೋರ್ಚುಗಲ್ ಸ್ಪಷ್ಟಪಡಿಸಿದ್ದಾನೆ. ಲಾರೆನ್ಸ್ ಬಿಷ್ಣೋಯ್ ಅಥವಾ ಗೋಲಿ, ಧಿಲೋನ್ ಹೆಸರನ್ನು ಬಳಸಿಕೊಂಡು ಯಾರೇ ಸುಲಿಗೆ ಮಾಡಲು ಪ್ರಯತ್ನಿಸಿದರೂ ಇದೇ ರೀತಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಆತ ಎಚ್ಚರಿಕೆ ನೀಡಿದ್ದಾನೆ.
ಟೆರರ್ ಪಟ್ಟದ ನಡುವೆಯೇ ಸವಾಲು
ಈ ದಾಳಿಯು ಕೆನಡಾದ ಅಧಿಕಾರಿಗಳು ಲಾರೆನ್ಸ್ ಬಿಟ್ಟೋಯ್ ಗ್ಯಾಂಗ್ (Bishnoi Gang Attack) ಅನ್ನು ಉಗ್ರಗಾಮಿ ಸಂಘಟನೆ ಎಂದು ಅಧಿಕೃತವಾಗಿ ಘೋಷಿಸಿದ ಕೆಲವೇ ದಿನಗಳ ನಂತರ ನಡೆದಿದೆ. ಈ ಘೋಷಣೆಯು ಗ್ಯಾಂಗ್ನ ಸದಸ್ಯರ ವಿರುದ್ಧ ಕಠಿಣ ಕಾನೂನು ಕ್ರಮ, ಆಸ್ತಿ ಮುಟ್ಟುಗೋಲು ಮತ್ತು ಅಂತರರಾಷ್ಟ್ರೀಯ ತನಿಖೆಗೆ ಅವಕಾಶ ನೀಡುತ್ತದೆ. ಆದರೂ ಗ್ಯಾಂಗ್ ಈ ರೀತಿ ಬಹಿರಂಗವಾಗಿ ದಾಳಿ ನಡೆಸಿರುವುದು ಕೆನಡಾದಲ್ಲಿನ ಅದರ ಪ್ರಭಾವವನ್ನು ತೋರಿಸುತ್ತದೆ ಗ್ಯಾಂಗ್ನ ಗಡಿ ದಾಟಿ ನಡೆಯುವ ಅಪರಾಧ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕೆನಡಾ ಮತ್ತು ಭಾರತದ ಕಾನೂನು ಜಾರಿ ಸಂಸ್ಥೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಹಿಂದಿನ ಘಟನೆ ನೆನಪು: ಈ ಹಿಂದೆ ಕೆನಡಾದ ಸರ್ರೆಯಲ್ಲಿ ಹಾಸ್ಯ ನಟ ಕಪಿಲ್ ಶರ್ಮಾ ಅವರ ಒಡೆತನದ ‘ಕ್ಯಾಪ್ಸ್ ಕೆಫೆ’ ಮೇಲೆಯೂ ಇದೇ ಗ್ಯಾಂಗ್ ದಾಳಿ ನಡೆಸಿತ್ತು. ಕರೆಗಳನ್ನು ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ದಾಳಿಕೋರರು ಕೆಫೆ ಮೇಲೆ ಅರ್ಧ ಡಜನ್ ಗೂ ಹೆಚ್ಚು ಗುಂಡು ಹಾರಿಸಿದ್ದರು.
