ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆ ಮತ್ತು ಗಟ್ಟಿದನಿಯ ಮೂಲಕ ಗಮನ ಸೆಳೆದಿರುವ ನಟ ವಸಿಷ್ಠ ಸಿಂಹ(Vasishta Simha) ಅವರು ತಮ್ಮ ಅಧಿಕೃತ X (ಹಿಂದಿನ ಟ್ವಿಟರ್) ಖಾತೆಯಲ್ಲಿ ಮಾಡಿದ ಒಂದು ಪೋಸ್ಟ್ ನಿಂದಾಗಿ ಇದೀಗ ಕನ್ನಡಿಗ X ಬಳಕೆದಾರರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಪೋಸ್ಟ್ ನಲ್ಲಿ ಅವರು ತೆಲುಗು ನಟ ಪವನ್ ಕಲ್ಯಾಣ್ ಅವರ ಹೇಳಿಕೆಯೊಂದನ್ನು ಸಮರ್ಥಿಸಿಕೊಂಡಿದ್ದು ಇದು ಕೆಲವರ ಭಾವನೆಗಳನ್ನು ಕೆರಳಿಸಿದೆ.
ಪವನ್ ಕಲ್ಯಾಣ್ ಹೇಳಿಕೆ ಹಾಗೂ ವಸಿಷ್ಠ ಸಿಂಹ ಸಮರ್ಥನೆ
ನಟ ವಸಿಷ್ಠ ಸಿಂಹ(Vasishta Simha) ಅವರು ಪವನ್ ಕಲ್ಯಾಣ್ ಅವರ ಹೇಳಿಕೆಯ ಕುರಿತು ಟ್ವಿಟ್ ಮಾಡಿ, “ಇದು ನಾ ಹಂಚಿಕೊಳ್ಳ ಬಯಸಿದ ವಿಷಯ! ಇದು ಚೆನ್ನಾಗಿರೋದು ಸಮಾಜಕ್ಕೆ ಬೇಕಿರೋದು. kudos to you dear @Pawan Kalyan sir” ಎಂದು ಬರೆದಿದ್ದರು. ಇದರ ಜೊತೆಗೆ, ‘ಸಿದ್ಧಾಂತಗಳ ಹೋರಾಟದಲ್ಲಿ ನೊಂದು ಬೆಂದು ಬಳಲುತ್ತಿರುವ ಜೀವಗಳಿಗೆ ಪ್ರಾರ್ಥನೆ’ ಎಂದೂ ತಿಳಿಸಿದ್ದರು.
ಆದರೆ, ಈ ಪೋಸ್ಟ್ ನಾ ಕೊನೆಯಲ್ಲಿ ವಸಿಷ್ಠ ಸಿಂಹ(Vasishta Simha) ಸೇರಿಸಿದ ”ಮರೆಯಲ್ಲಿ ಕೂತು ಬೊಬ್ಬಿರಿಯುವ comment ಶೂರರಿಗೆ ಒಳಿತಾಗಲೆಂದು ಈ ಪೋಸ್ಟ್ ಸಮರ್ಪಣೆ” ಎಂಬ ಸಾಲುಗಳು ವಿವಾದಕ್ಕೆ ಕಿಡಿ ಹೆಚ್ಚಿವೆ. ಹೋರಾಟದ ಪರವಾಗಿ ಧ್ವನಿ ಎತ್ತುವವರನ್ನು ಪರೋಕ್ಷವಾಗಿ ಟೀಕಿಸಲು ನಟ ಈ ಪದಬಳಕೆ ಮಾಡಿದ್ದಾರೆ. ಎಂಬುದು ಕನ್ನಡಿಗರ ಪ್ರಮುಖ ಅಸಮಾಧಾನವಾಗಿದೆ.
ವಿಡಿಯೋದಲ್ಲಿ ಏನಿದೆ?
ವಸಿಷ್ಟ ಸಿಂಹ(Vasishta Simha) ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪವನ್ ಕಲ್ಯಾಣ್ ಅವರು ಕನ್ನಡದ ಸೂಪರ್ ಹಿಟ್ ಚಲನಚಿತ್ರ ‘ಕಾಂತಾರ’ದ ಕುರಿತು ಮಾತನಾಡಿರುವ ವಿಡಿಯೋ ಅದಾಗಿದೆ. ಆ ಹೇಳಿಕೆಯ ಸಾರಾಂಶ ಹೀಗಿದೆ
ಪವನ್ ಕಲ್ಯಾಣ್ ಅವರು ಮಾತನಾಡುತ್ತಾ “ನೀವು ಕಾಂತಾರ ನೋಡಬಾರದು ಎಂದು ಹೇಳಿದರೆ, ಅದು ನಮ್ಮನ್ನು ಒಗ್ಗೂಡಿಸುವುದಿಲ್ಲ. ನಮ್ಮ ಕಲಾ ಪ್ರಕಾರವನ್ನು ದಯವಿಟ್ಟು ಹಾಗೆ ಮಾಡಬೇಡಿ. ಕೆಲವೇ ಮಂದಿ ಮಾಡಿದ ತಪ್ಪಿಗೆ ಕೋಟಿಗಟ್ಟಲೆ ಜನರಿಗೆ ಹೇಗೆ ಅನ್ವಯಿಸುತ್ತೀರಿ?” ಎಂದು ಕೇಳಿದ್ದರು. ‘ಕಲೆಯು ನಮ್ಮನ್ನು ಒಗ್ಗೂಡಿಸಬೇಕು. ಕಲೆಯು ಹರಡಬೇಕು. ಕಲೆಯು ನಮ್ಮನ್ನು ವಿಭಜಿಸಬಾರದು ಅಥವಾ ಒಡೆಯಬಾರದು” ಎಂಬುದು ಅವರ ಅಭಿಪ್ರಾಯವಾಗಿತ್ತು.
ಕನ್ನಡಿಗರ ಆಕ್ರೋಶ ಮತ್ತು ತೀಕ್ಷ್ಣ ಪ್ರತಿಕ್ರಿಯೆಗಳು
“ಕನ್ನಡ ಪರ ಹೋರಾಟಗಳು ನಡೆಯುವಾಗ ಮೌನವಾಗಿದ್ದ ಸಿಂಹ, ಈಗ ಪರಭಾಷಾ ನಟನ ಹೇಳಿಕೆ ಸಮರ್ಥನೆಗೆ ಮುಂದಾಗಿ, ಕನ್ನಡಿಗರನ್ನು ಟೀಕಿಸಿದ್ದು ಸರಿಯಲ್ಲ” ಎಂದು X ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ #VasishtaSimha ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ.
Balunatesh ಎಂಬ ಬಳಕೆದಾರರು, “ಕನ್ನಡಿಗರ ಮೇಲೆ ದೌರ್ಜನ್ಯ ಆದಾಗ ಮಾತಾಡದೇ ಇರೋ ಸಿಂಹ ಈಗ ಬೊಬ್ಬಿರಿತಿದೆ. ಒಳ್ಳೆ ಸಿನಿಮಾ ಮಾಡಿ ಮೊದಲು. ಯಾವೋ ಚಂಗ್ಲು ಪೋಸ್ಟ್ ನ ರಿಪೋಸ್ಟ್ ಮಾಡೋಡಿ” ಎಂದು ನೇರವಾಗಿ ಟೀಕಿಸಿದ್ದಾರೆ.
ಮತ್ತೊಬ್ಬ ಬಳಕೆದಾರರಾದ Jagadish S ಎನ್ನುವವರು “ಏನೇ ಅಗಲಿ ನಿನ್ನ ಸಿನಿಮಾ ನಾನ್ ನೋಡಲ್ಲ, ಬೇರೆಯವರಿಗೂ ನೋಡೆಕೆ ಬಿಡುವುದಿಲ್ಲ. ನಾಡದ್ರೋಹಿ’ ಎಂದು ವಾಗ್ದಾಳಿ ನಡೆಸಿದ್ದಾರೆ. ಹಲವರು ನಟರಿಂದ ಸ್ಪಷ್ಟನೆ ಅಥವಾ ಬಹಿರಂಗ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.
ಅಭಿಮಾನಿಗಳಿಂದ ಬೆಂಬಲದ ಮಾತು
ಈ ಟೀಕೆಗಳ ನಡುವೆ, ವಸಿಷ್ಠ ಸಿಂಹ(Vasishta Simha) ಅವರ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ನಟನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ವಾದಿಸಿದ್ದಾರೆ. ಸಾರಥಿ ಹೆಸರಿನ X ಬಳಕೆದಾರರು. “ಸಿಂಹ ಅವರೇ ಓಲಾಟಗಳ ಬಗ್ಗೆ ತಲೆಕೆಡಿಸಕೊಳ್ಳಬೇಡಿ ನಿಜವಾದ ಕನ್ನಡಿರು ಸದಾ ನಿಮ್ಮೊಂದಿಗೆ ಇರುತ್ತಾರೆ ” ಎಂದು ಕಾಮೆಂಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ನಟನ ಈ ಪೋಸ್ಟು ನಿಂದ ಎದ್ದಿರುವ ಬಿರುಗಾಳಿ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ವಸಿಷ್ಠ ಸಿಂಹ ಅವರು ಈ ವಿವಾದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದರ ಮೇಲೆ ಮುಂದಿನ ವಿದ್ಯಮಾನಗಳು ನಿಂತಿವೆ
