ತುಮಕೂರು: ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಪ್ರತಿಷ್ಠಿತ ರಾಷ್ಟ್ರಪತಿಗಳ ಪೊಲೀಸ್ ವಿಶಿಷ್ಟ ಸೇವಾ ಪದಕ(Tumkur Police President’s Medal) ಹಾಗೂ ಪೊಲೀಸ್ ಇಲಾಖೆಯ(Police Department) ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ವಿವಿಧ ಸಾಲಿನ ಗಣರಾಜ್ಯೋತ್ಸವ(Republic Day) ಮತ್ತು ಸ್ವಾತಂತ್ರ್ಯ ದಿನಾಚರಣೆ(Indipendens Day) ಸಂದರ್ಭದಲ್ಲಿ ಘೋಷಿಸಲಾಗಿದ್ದ ಈ ಪದಕಗಳನ್ನು ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನೀಡಲಾಗಿದೆ.
ಇದನ್ನೂ ಓಡಿ: Tumkur Dasara: ತುಮಕೂರು ದಸರಾ, ಈ ಬಾರಿ ಇನ್ನಷ್ಟು ವೈಭವ! – ಹೆಲಿಕಾಪ್ಟರ್ ರೈಡ್, ಡೋನ್ ಶೋ, ಮತ್ತು ಆನೆಗಳ ಮೆರವಣಿಗೆ
ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್(Thawar Chand Gehlot) ಅವರು ಅಧಿಕಾರಿಗಳಿಗೆ ಪದಕಗಳನ್ನು ಪ್ರದಾನ ಮಾಡಿದರು(Tumkur Police President’s Medal). ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್, ಮತ್ತು ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಪದಕ ಪಡೆದ ಅಧಿಕಾರಿಗಳು:
ಶೇಖರ್ ಬಿ.ಕೆ. – ಸಿರಾ ಉಪವಿಭಾಗದ ಡಿವೈಎಸ್ಪಿ.
ಆರ್.ಪಿ. ಅನಿಲ್ – ಕೊರಟಗೆರೆ ಪೊಲೀಸ್ ಇನ್ಸ್ಪೆಕ್ಟರ್.
ಸ್ವಪ್ನಾ ಎಸ್. ಹಾವನೂರ – ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಇನ್ಸ್ಪೆಕ್ಟರ್.
ಪ್ರಭಾಕರ ಎಚ್ – ತುಮಕೂರು ನಗರದ ಮಹಿಳಾ ಪೊಲೀಸ್ ಠಾಣೆಯ ಪೇದೆ.
ಪ್ರಶಸ್ತಿ ಪುರಸ್ಕೃತ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಕೆ.ವಿ. ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಗೌರವವು ಅವರ ಕರ್ತವ್ಯ ನಿಷ್ಠೆ ಮತ್ತು ನಿಸ್ವಾರ್ಥ ಸೇವೆಗೆ ಸಂದ ಮನ್ನಣೆಯಾಗಿದೆ.
