ತುಮಕೂರು: ತುಮಕೂರು ದಸರಾ(Tumkur Dasara) ಉತ್ಸವವು ದಿನದಿಂದ ದಿನಕ್ಕೆ ಹೊಸ ಮೆರಗು ಪಡೆಯುತ್ತಿದೆ. ಈ ವರ್ಷದ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ಬಾರಿ ಹಲವು ಹೊಸ ಆಕರ್ಷಣೆಗಳನ್ನು ಸೇರಿಸಲಾಗಿದೆ ಎಂದು ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ. ಸೆಪ್ಟೆಂಬರ್ 8ರಂದು ಉತ್ಸವದ ಲಾಂಛನ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ದಸರಾ ಸಂಭ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಳೆದ ವರ್ಷದ 9 ದಿನಗಳ ದಸರಾ(Tumkur Dasara) ಯಶಸ್ಸಿನ ನಂತರ, ಈ ಬಾರಿ 11 ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 22ರಿಂದ ಆರಂಭವಾಗುವ ಈ ಉತ್ಸವವನ್ನು ಜಿಲ್ಲೆಯ ಪ್ರಮುಖ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಜಿಲ್ಲೆಯಾದ್ಯಂತ ಪ್ರತಿಯೊಬ್ಬರೂ ಭಾಗವಹಿಸುವಂತೆ ಮಾಡಲು, ಈಗಾಗಲೇ 330ಕ್ಕೂ ಹೆಚ್ಚು ವಂಚಾಯತ್ಗಳಲ್ಲಿ ಪ್ರಚಾರ ಕಾರ್ಯಗಳು ನಡೆಯುತ್ತಿವೆ.
ಇದನ್ನೂ ಓಡಿ: ICC Announcement: ಮಹಿಳಾ ಕ್ರಿಕೆಟ್ನಲ್ಲಿ ಐತಿಹಾಸಿಕ ಬದಲಾವಣೆ!, ಪುರುಷರ ವಿಶ್ವಕಪ್ಗಿಂತಲೂ ಹೆಚ್ಚಿನ ಬಹುಮಾನ ಮೊತ್ತ ಘೋಷಣೆ
ಈ ಬಾರಿಯ ಪ್ರಮುಖ ಆಕರ್ಷಣೆಗಳು:
ಪಂಜಿನ ಕವಾಯತು: ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಂಜಿನ ಕವಾಯತು ಆಯೋಜಿಸಲಾಗಿದೆ. ಇದರಲ್ಲಿ 256 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ವಿಶೇಷವಾಗಿ 160 ವಿದ್ಯಾರ್ಥಿನಿಯರು ತಮ್ಮ ಕೌಶಲ್ಯ ಪ್ರದರ್ಶಿಸಲಿದ್ದಾರೆ. ಭಾಗವಹಿಸುವ ಎಲ್ಲರಿಗೂ ಮೆಡಲ್ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.
ಡ್ರೋನ್ ಮತ್ತು ಕಾರು ಶೋ: ಮನಮೋಹಕ ಡ್ರೋನ್ ಶೋ(Drone Show) ಮತ್ತು ಹೈದರಾಬಾದ್ನಿಂದ ತರಿಸಿದ ವಿಶೇಷ ಕಲಾಕೃತಿಯ ಕಾರುಗಳ ಪ್ರದರ್ಶನ(Car Show) ಇರಲಿದೆ. ಇದು ದಸರಾ ಉತ್ಸವಕ್ಕೆ ಆಧುನಿಕ ಸ್ಪರ್ಶ ನೀಡಲಿದೆ.
ಹೆಲಿಕಾಪ್ಟರ್ ರೈಡ್: ಈ ಬಾರಿಯ ದಸರಾದಲ್ಲಿ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ಹೆಲಿಕಾಪ್ಟರ್ ರೈಡ್(Helicopter Ride) ವ್ಯವಸ್ಥೆ ಮಾಡಲಾಗಿದೆ. ಉತ್ಸವದ 11 ದಿನಗಳೂ ಎರಡು ಹೆಲಿಕಾಪ್ಟರ್ಗಳು ಕಾರ್ಯನಿರ್ವಹಿಸಲಿವೆ. ವಯಸ್ಕರಿಗೆ 4,000 ರೂ ಮತ್ತು ಮಕ್ಕಳಿಗೆ ಪ್ರತ್ಯೇಕ ದರ ಇರುತ್ತದೆ. 15 ನಿಮಿಷಗಳ ಈ ರೈಡ್ ಗೆ ಸೆಪ್ಟೆಂಬರ್ 8ರಿಂದ ನೋಂದಣಿ ಆರಂಭವಾಗಲಿದೆ.
ಆನೆಗಳ ಮೆರವಣಿಗೆ: ಮೈಸೂರು ದಸರಾದಂತೆಯೇ ತುಮಕೂರು ದಸರಾ ಮೆರವಣಿಗೆಗೂ ಈ ಬಾರಿ
ಆನೆಗಳು ಬರಲಿವೆ. ಕಳೆದ ವರ್ಷದ ಎರಡು ಆನೆಗಳ ಜೊತೆಗೆ ಈ ಬಾರಿ ಅರಣ್ಯ ಇಲಾಖೆಯಿಂದ ಇನ್ನೂ ಮೂರು ಆನೆಗಳನ್ನು ಕರೆತರಲು ಮನವಿ ಮಾಡಲಾಗಿದೆ. ಮರವಣಿಗೆಗೂ ಮುನ್ನ ಗಜಪಡೆಗೆ ತಾಲೀಮು ಕೂಡ ನೀಡಲಾಗುವುದು.
ಸಾಂಸ್ಕೃತಿಕ ವೈಭವ: ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಮ, ಗಾಯಕಿಯರಾದ ಅನನ್ಯ ಭಟ್ ಮತ್ತು ಅನುರಾಧ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ರಾಜಸ್ಥಾನದ ಪ್ರಸಿದ್ಧ ದಾಂಡಿಯಾ ನೃತ್ಯ ಈ ಬಾರಿ ವಿಶೇಷ ಆಕರ್ಷಣೆಯಾಗಲಿದೆ.

