ತುಮಕೂರು: ನೈಸರ್ಗಿಕ ಖುಷಿಯತ್ತ ಮುಖ ಮಾಡಲು ಸಾವಯವ ಕೃಷಿ ಹರಿವು ಕಾರ್ಯಕ್ರಮವನ್ನು IFHD ಬೆಂಗಳೂರು ಮತ್ತು ಆಶ್ರಯ ಹಸ್ತ ಟ್ರಸ್ಟ್ ಬೆಂಗಳೂರು ಸಂಸ್ಥೆಗಳ ಸಹಭಾಗಿತ್ವದಲ್ಲಿ ತುಮಕೂರು ಜಿಲ್ಲೆಯ (Tumkur News) ಸುಣ್ಣಕಲ್ಲರಪಾಳ್ಯ ಗ್ರಾಮದಲ್ಲಿ ವಿಶೇಷ ತರಬೇತಿ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ: Fertilizer misuse : ಮಣ್ಣಿಗೆ ರಸಗೊಬ್ಬರವನ್ನು ಉಪ್ಪಿನಕಾಯಿಯಂತೆ ಬಳಸಬೇಕೆ ವಿನಃ, ಉಪ್ಪಿನಕಾಯಿಯೇ ಊಟವಾಗಬಾರದು!
ಸಂಪನ್ಮೂಲ ವ್ಯಕ್ತಿಗಳಾದ ಧನುಷ್ ಎಂ, ಬಸವರಾಜು ಕಾರ್ಯಕ್ರಮದಲ್ಲಿ , ರೈತರಿಗೆ ನೈಸರ್ಗಿಕ ಕೃಷಿಯ ಆವಶ್ಯಕತೆ, ಅದರ ಇತಿಹಾಸ, ಶಾಶ್ವತತೆಯ ತತ್ವಗಳು, ಮಣ್ಣಿನ ಸೃಜನಶೀಲತೆ, ನೀರಿನ ಸಂರಕ್ಷಣೆ, ಪರಿಸರ ಸ್ನೇಹಿ ಕೃಷಿ ಪದ್ಧತಿ, ಹಾಗೂ ಆಹಾರದಲ್ಲಿ ವಿಷರಹಿತ ಗುಣಮಟ್ಟದ ಭದ್ರತೆಗಳ ಕುರಿತು ಅರಿವು ಮತ್ತು ಚರ್ಚೆ ನಡೆಸಿದರು.
ಹಾಗೆಯೇ, ಜೈವಿಕ ಸಂಪನ್ಮೂಲ ಕೇಂದ್ರ (BRC) ಯಲ್ಲಿ ತಯಾರಾಗುವ ಜೀವಾಮೃತ, ಬೀಜಾಮೃತ, ನಿಂಮಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಾಸ್ತ್ರ, ದಶಪರ್ಣಿ ಕಷಾಯ ಇತ್ಯಾದಿ ಜೈವಿಕ Inputs ಗಳ ತಯಾರಿಕಾ ವಿಧಾನ, ಅವುಗಳನ್ನು ಹೊಲದಲ್ಲಿ ಬಳಕೆ ಮಾಡುವ ಸರಿಯಾದ ವಿಧಾನ, ಬಳಕೆಯಿಂದ ಲಭ್ಯವಾಗುವ ಕೃಷಿ ಪ್ರಯೋಜನಗಳು, ಉತ್ಪಾದನಾ ವೆಚ್ಚದ ಇಳಿಕೆ, ಮಣ್ಣಿನ ಆರೋಗ್ಯದ ಸುಧಾರಣೆ, ಬೆಳೆಯ ಉತ್ಪಾದಕತೆ ಹಾಗೂ ರೈತರ ಆದಾಯದಲ್ಲಿ ಹೆಚ್ಚಳಗಳ ಕುರಿತು ಉಪಯುಕ್ತ ಮಾಹಿತಿಯನ್ನು ರೈತರಿಗೆ ನೀಡಲಾಯಿತು.
ಈ ತರಬೇತಿಯಲ್ಲಿ ರೈತರು ತಮ್ಮ ಹೊಲದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ವಿಷಕಾರಿ ಕೀಟನಾಶಕಗಳ ಬದಲು ಕಡಿಮೆ ವೆಚ್ಚದ, ಮಣ್ಣಿನ ಸ್ನೇಹಿ, ಪರಿಸರಕ್ಕೆ ಹಾನಿಯಿಲ್ಲದ, ಆರೋಗ್ಯಕರ ಮತ್ತು ಶಾಶ್ವತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಲಾಯಿತು.
ಇದೇ ವೇಳೆ, ರೈತರಿಗೆ ಬಿತ್ತನೆಗೆ ಮುನ್ನ ಮಾಡುವ ಬೀಜ ಶುದ್ಧೀಕರಣ, ಮಣ್ಣಿನ ಜೀವಾಣು ಚಟುವಟಿಕೆ ಹೆಚ್ಚಿಸುವ ವಿಧಾನ, ಹಸಿರು ಗೊಬ್ಬರ ಬೆಳೆ ಬೆಳೆಯುವ ಮಹತ್ವ, ಮಿಶ್ರ ಬೆಳೆ ಹಾಗೂ ಅಂತರ ಬೆಳೆ ಪದ್ಧತಿ, ಮಳಿನೀರು ಸಂಗ್ರಹಣೆ, ಹಾಗು ಜೀವ ವೈವಿಧ್ಯತೆಯನ್ನು ಕಾಪಾಡುವ ತಂತ್ರಗಳು ಕುರಿತು ಮಾರ್ಗದರ್ಶನ ನೀಡಲಾಯಿತು. ತರಬೇತಿ ಶಿಬಿರವು ರೈತರಲ್ಲಿ ಜ್ಞಾನ ವೃದ್ಧಿ, ಕೌಶಲ್ಯಾಭಿವೃದ್ಧಿ ಹಾಗೂ ನೈಸರ್ಗಿಕ ಕೃಷಿಯ Practically ಅನುಷ್ಠಾನದ ಬಗ್ಗೆ ವಿಶ್ವಾಸ ಮೂಡಿಸುವಲ್ಲಿ ಸಹಾಯವಾಯಿತು.(Tumkur News)
