Tumkur News: ನಾವು ಓದಿದ ಶಾಲೆಗೆ ನಮ್ಮದೇ ಆದ ಸೇವೆ ಸಲ್ಲಿಸಬೇಕು, ಸರ್ಕಾರಿ ಶಾಲೆ ಉಳಿಸುವುದು ನಮ್ಮ ಕರ್ತವ್ಯ ಎಂದು ರಾಯನ್ಸ್ ಕಂಪ್ಯೂಟರ್ ಮಾಲೀಕ ಹಾಗೂ ಸಮಾಜ ಸೇವಕ ಜೋಗಿಹಳ್ಳಿ ನವೀನ್ ಹೇಳಿದರು.
ಗುಬ್ಬಿ ತಾಲ್ಲೂಕಿನ ಜೋಗಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರೊಬ್ಬರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ನವೀನ್ ಜೋಗಿಹಳ್ಳಿ ಮಕ್ಕಳಿಲ್ಲದೆ ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿ ಬಂದೊದಗಿದೆ ಆಗಾಗಿ ಶಾಲೆಯ ಹಿರಿಯ ವಿದ್ಯಾರ್ಥಿಗಳು ಶಾಲೆಗಳ ಉಳಿಸುವಿಕೆಗೆ ಶ್ರಮಿಸಬೇಕಿದೆ ಎಂದರು.
ಈ ವೇಳೆ ನವೀನ್ ಜೋಗಿಹಳ್ಳಿ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳಾದ ಪುಸ್ತಕ, ಪೆನ್, ಜಾಮಿಟ್ರಿ ಕೊಟ್ಟು ಮಕ್ಕಳಿಗೆ ಚೆನ್ನಾಗಿ ಓದಲು ಸಲಹೆ ನೀಡಿದರು.(Tumkur News)
ಇನ್ನೂ ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಸಂತ ಕುಮಾರಿ,
ಮಂಜುನಾಥ್, ಅಮೀದ್ ಪಾಷ ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು.
