ಶಿರಾ: ನಾವು ಮನುಷ್ಯರಾಗಬೇಕು, ಪೋಷಕರನ್ನು ಗೌರವಿಸಬೇಕಿದೆ, ವಿದ್ಯೆಯ ಜೊತೆಗೆ ವಿನಯವು ಅವಶ್ಯಕ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪಿ. ನಂಜುಡಪ್ಪ ಹೇಳಿದರು.(Sira News)
ಶಿರಾ ತಾಲೂಕಿನ(Sira News) ತಾವರೆಕೆರೆಯಲ್ಲಿರುವ ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ವಾರ್ಷಿಕೋತ್ಸವ ಸಮಾರಂಭ ಅಮೋಘವಾಗಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಪಿ. ನಂಜುಡಪ್ಪ, ಮನುಷ್ಯ ಮೊದಲು ಮನಸಿನಿಂದ ಶುದ್ದನಾಗಬೇಕಿದೆ, ಜ್ಞಾನವೇ ಶ್ರೇಷ್ಠ, ಇವತ್ತಿನ ಕಾಲಕ್ಕೆ ಕೌಶಲ್ಯ ಸಹಿತ ಶಿಕ್ಷಣ ಅನಿವಾರ್ಯವಾಗಿದೆ, ನೀವೆಲ್ಲರೂ ಶ್ರಮಪಟ್ಟು ಓದಿ, ಜಗತ್ತಿನಲ್ಲಿ ಸೋಮಾರಿ ಎಂದಿಗೂ ದುಃಖಿತ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡಿದರು.
ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಶಿಕ್ಷಣಾಧಿಕಾರಿ ದೇವರಾಜು ಮಾತಾನಾಡಿ ಪರೀಕ್ಷೆಗಳಿಗೆ ಚೆನ್ನಾಗಿ ಸಿದ್ಧರಾಗಿ, ಇಡೀ ಕಾಲೇಜಿಗೆ ಹೆಸರು ಬರುವಂತೆ ಒಳ್ಳೆಯ ಅಂಕಗಳನ್ನು ಗಳಿಸಬೇಕು, ನಿಮ್ಮ ಭವಿಷ್ಯ ರೂಪಿಸಿಕೊಳ್ಳುವವರು ನೀವೆಯೇ ಆಗಿರುತ್ತೀರಾ ಎಂದೇಳಿದರು. ಈ ವೇಳೆ ಕಳೆದ ವರ್ಷ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿರಾ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಧನಶಂಕರ್, ಕಾಲೇಜಿನ ಅಭಿವೃದ್ದಿ ಸಮಿತಿ ಅಧ್ಯಕ್ಷ ಶಿವಕುಮಾರ್, ಇಂಡಿಯನ್ ಪ್ಯೂಚರ್ ಶಾಲೆ ಸಂಸ್ಥಾಪಕ ಬಲರಾಮ್, ಯುವ ಮುಖಂಡ ಚೇತನ್, ತಾವರೆಕೆರೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ನಾಗರಾಜು, ತಾವರೇಕೆರೆ ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲ್, ಉಪನ್ಯಾಸಕರಾದ ಚಂದ್ರಶೇಖರ್, ನಾಗಮಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು(Sira News)

