ಶಿರಾ: ತಾಲ್ಲೂಕಿನ ತಾವರೇಕೆರೆ ಗ್ರಾಮದ ಇಂಡಿಯನ್ ಪ್ಯೂಚರ್ ಶಾಲೆಯಲ್ಲಿ ಶನಿವಾರ ವಾರ್ಷಿಕ ಕ್ರೀಡಾ ದಿನ ಹಾಗೂ ಗ್ರಾಜೀಯೇಶನ್ ದಿನವನ್ನು ಬಲು ಅಮೋಘವಾಗಿ ಆಚರಿಸಲಾಯಿತು.(Sira News)
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಈ ಶಾಲೆಯೂ ಮಕ್ಕಳನ್ನ ಕೇವಲ ಪಠ್ಯಕ್ಕೆ ಸೀಮಿತ ಮಾಡದೇ ಆಟೋಟ ಚಟುವಟಿಕೆಗಳಿಗೂ ಹೆಚ್ಚಿನ ಪ್ರಾಶಸ್ತ್ಯವನ್ನ ನೀಡುತ್ತಾ ಬಂದಿದೆ ಅದಕ್ಕೆ ಕೈಗನ್ನಡಿ ಹಿಡಿದಂತೆ ಇಂದು ಕ್ರೀಡಾದಿನದ ಸಂಭ್ರಮ ಜರುಗಿತು. ಶಾಲೆಯಲ್ಲಿ ಉತ್ತಮವಾದ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯವಿದ್ದು, ಪಠ್ಯೇತರ ಚಟುವಟಿಕೆಗೆ ಪೂರಕವಾದ ವಾತಾವರಣವಿದೆ.
ಕಾರ್ಯಕ್ರಮದಲ್ಲಿ ಪುಟಾಣಿಗಳ ನೃತ್ಯ ನೋಡಗರ ಕಣ್ಮನ ಸೆಳೆಯುವಂತಿತ್ತು, ಈ ವೇಳೆ ಅನೇಕ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾವರೆಕೆರೆ ಗ್ರಾಮದ ಮುಖ್ಯಸ್ಥರಾದ ರಂಗನಾಥ್, ಮಾಜಿ ಗ್ರಾ.ಪಂ. ಸದಸ್ಯರಾದ ಶಿವಕುಮಾರ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಂಜನ್ ಕುಮಾರ್, ಮಾಸ್ಟರ್ ಮೈಂಡ್ ಆಕಾಡೆಮಿ ನಿರ್ದೇಶಕಿ ಗೀತಾ, ಐ.ಎಫ್. ಎಸ್. ಶಾಲಾ ಮುಖ್ಯಸ್ಥರಾದ ಬಲರಾಮ್, ನಳೀನಾಕ್ಷಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.(Sira News)

