Priyanka Chopra: ಸದ್ಯ ಹಾಲೀವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಗ್ಲೋಬಲ್ ಸ್ಮಾರ್ ಪ್ರಿಯಾಂಕಾ ಚೋಪ್ರಾ, ಸುದೀರ್ಘ ವಿರಾಮದ ನಂತರ ಭಾರತೀಯ ಚಿತ್ರರಂಗಕ್ಕೆ ಮರಳಿದ್ದಾರೆ. ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಹಿರೋ ಆಗಿ ನಟಿಸುತ್ತಿರುವ ‘ವಾರಣಾಸಿ’ ಸಿನಿಮಾದಲ್ಲಿ ಪ್ರಿಯಾಂಕಾ ಪ್ರಮುಖ . ಪಾತ್ರವೊಂದನ್ನು ನಿರ್ವಹಿಸುತ್ತಿದ್ದು ಸದ್ಯ ಇದರ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆ ನೀಡಿದ ಸಂದರ್ಶನವೊಂದರಲ್ಲಿ ತಾನು ಬಾಲಿವುಡ್ ಬಿಟ್ಟು ಹಾಲೀವುಡ್ಗೆ ಹೋಗಲು ಕಾರಣವೇನು ಎಂಬ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಬಾಲಿವುಡ್ ಬಿಟ್ಟಿದ್ದೇಕೆ?
“ನಾನು ಬಾಲಿವುಡ್ ಬಿಟ್ಟು ಹೋಗಬೇಕು ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಆದರೆ ಅಲ್ಲಿ ಕೆಲಸ ಮಾಡುವಾಗ ಹಲವು ಕಾರಣಗಳಿಂದಾಗಿ ನನ್ನನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಭಾವನೆ ಮೂಡಿತು. ಈ ಕಾರಣದಿಂದಲೇ ನಾನು ನನ್ನ ಗಡಿಗಳನ್ನು ವಿಸ್ತರಿಸಲು ನಿರ್ಧರಿಸಿದೆ. ಒಬ್ಬ ನಟಿಯಾಗಿ ನನಗೆ ಉತ್ಸಾಹ ನೀಡುವಂತಹ ಹೊಸ ಅವಕಾಶಗಳ ಹುಡುಕಾಟದಲ್ಲಿ ನಾನು ಅಮೆರಿಕಕ್ಕೆ ತೆರಳಿ ನಟಿಸಲು ಪ್ರಾರಂಭಿಸಿದೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.(Priyanka Chopra)

ಭಾರತೀಯ ಸಿನಿಮಾಗಳ ಬಗ್ಗೆ ಪ್ರೀತಿ:
ಸುಮಾರು 12 ವರ್ಷಗಳ ನಂತರ ಮತ್ತೆ ಅದ್ಭುತವಾದ ಕಥೆಗಳನ್ನು ಆಯ್ಕೆ ಮಾಡಿ ನಟಿಸುವ ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ ಎಂದಿರುವ ಅವರು, “ನನಗೆ ಭಾರತೀಯ ಸಿನಿಮಾಗಳೆಂದರೆ ತುಂಬಾನೇ ಇಷ್ಟ. ‘ವಾರಣಾಸಿ’ ಮೂಲಕ ಮತ್ತೆ ಇಲ್ಲಿಗೆ ಮರಳುತ್ತಿರುವುದು ಸಂತಸ ತಂದಿದೆ. ನಾನೀಗ ಹಾಲಿವುಡ್ ಮತ್ತು ಬಾಲಿವುಡ್ ಎಂದು ಪ್ರತ್ಯೇಕವಾಗಿ ನೋಡಲು ಇಷ್ಟಪಡುವುದಿಲ್ಲ. ನಾನು ಎರಡು ಲೋಕಗಳ ನಡುವೆ ಪಯಣಿಸುತ್ತಿದ್ದೇನೆ ಎಂಬ ಭಾವನೆ ನನಗಿದೆ. ಎರಡೂ ಕಡೆಗಳಲ್ಲಿ ಕೆಲಸ ಮಾಡುವುದನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ” ಎಂದು ವಿವರಿಸಿದ್ದಾರೆ. (Priyanka Chopra)
ಇದನ್ನೂ ಓದಿ: Parvati Nair: ಕಪ್ಪು ಸೀರೆಯಲ್ಲಿ ಮಿಂಚಿದ ನಟಿ ಪಾರ್ವತಿ ನಾಯರ್; ಇಂಟರ್ನೆಟ್ನಲ್ಲಿ ಭಾರಿ ವೈರಲ್ !
