ತುಮಕೂರು: ಕೃಷ್ಣಜನ್ಮಾಷ್ಟಮಿಯ ವಿಶೇಷ ಸಂದರ್ಭದಲ್ಲಿ ಯಕ್ಷದೀವಿಗೆಯು ನಗರದ ರಾಮಕೃಷ್ಣ – ವಿವೇಕಾನಂದ ಆಶ್ರಮದಲ್ಲಿ ದಿನಾಂಕ: 16-08-2025ರಂದು ಸಂಜೆ 5:30ರಿಂದ ‘ಕೃಷ್ಣಸಂಧಾನ’ ಎಂಬ ಯಕ್ಷಗಾನ ತಾಳಮದ್ದಳೆಯನ್ನು ನಡೆಸಿಕೊಡಲಿದೆ.
ಇದನ್ನೂ ಓದಿ: Mysore Dasara 2025: ಗಜಪಡೆಯ ತೂಕ ಪರೀಕ್ಷೆ, ಭೀಮ ಅತಿ ಭಾರದ ಆನೆ – ಅಭಿಮನ್ಯುವಿನ ತೂಕದಲ್ಲೂ ಅಚ್ಚರಿ ಏರಿಕೆ!
ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತೂರು ರಮೇಶ್ ಭಟ್, ಚೆಂಡೆವಾದಕರಾಗಿ ಪಿ. ಜಿ. ಜಗನ್ನಿವಾಸ ರಾವ್, ಮದ್ದಳೆವಾದಕರಾಗಿ ಅವಿನಾಶ್ ಬೈಪಾಡಿತ್ತಾಯ, ಚಕ್ರತಾಳದಲ್ಲಿ ಸಂವೃತ ಶರ್ಮಾ ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಡಾ. ಸಿಬಂತಿ ಪದ್ಮನಾಭ ಕೆ. ವಿ. (ಕೃಷ್ಣ), ಶಶಾಂಕ ಅರ್ನಾಡಿ (ಕೌರವ) ಹಾಗೂ ಡಾ. ಆರತಿ ಪಟ್ರಮೆ (ವಿದುರ) ಭಾಗವಹಿಸಲಿದ್ದಾರೆ. ಕಲಾಸಕ್ತರು ಈ ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದು ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ.
