India Strong Reply to Pakistan: ವಿಶ್ವಸಂಸ್ಥೆಯ ಬೃಹತ್ ವೇದಿಕೆಯಲ್ಲಿ ಭಾರತದ ವಿರುದ್ಧ ಅಸಂಬದ್ಧ ಭಾಷಣ ಮಾಡಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಗೆ ಭಾರತದ ರಾಜತಾಂತ್ರಿಕ ರಾಯಭಾರಿ ಪೆಟಲ್ ಗೆಹ್ಲೋಟ್ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: New OTT Movies: OTT ಹೊಸ ಸಿನಿಮಾಗಳ ಸಂಭ್ರಮ, Netflix, Prime, Z5, jio hotstar ನಲ್ಲಿ ಈ ಹೊಸ ಚಿತ್ರಗಳು ಲಭ್ಯ!
ಇತ್ತೀಚೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಪಾಕಿಸ್ತಾನಿ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಅವರು ತಮ್ಮ ಮಾತುಗಳಲ್ಲಿ ಭಾರತದ ವಿರುದ್ಧ ಅಸಂಬದ್ಧ ಆರೋಪಗಳನ್ನು ಮಾಡಿದಾಗ, ಅವರಿಗೆ ಸೂಕ್ತ ಉತ್ತರ ನೀಡಲು ಭಾರತೀಯ ರಾಜತಾಂತ್ರಿಕ ಪೆಟಲ್ ಗಹೋಟ್ ಅವರು ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. (India Strong Reply to Pakistan)
ಷರೀಫ್ ಅವರು, ಹಿಂದೂಮ್ಮೆ ಯುದ್ಧದ ಉಲ್ಬಣವನ್ನು ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ತಡೆದರು ಎಂದು ಸುಳ್ಳು ಕಥೆ ಹೇಳಿ, ಟ್ರಂಪ್ ಅವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದು ನಗೆಪಾಟಲಿಗೀಡಾದರು. ಅಲ್ಲದೆ, ‘ಆಪರೇಷನ್ ಸಿಂಧೂರ್'(Operation Sindhoor) ಕಾರ್ಯಾಚರಣೆಯ ಸಮಯದಲ್ಲಿ ಭಾರತದ ಏಳು ವಿಮಾನಗಳನ್ನು(Indian Air Force) ಹೊಡೆದುರುಳಿಸಿದವು ಎಂದು ತಮ್ಮ ಸೈನ್ಯದ ಬೂಟಾಟಿಕೆಯ ಶೌರ್ಯವನ್ನು ಶ್ಲಾಘಿಸಿದರು.(India Strong Reply to Pakistan)
ಇದಕ್ಕೆ ತೀಕ್ಷ್ಯ ಪ್ರತಿಕ್ರಿಯೆ ನೀಡಿದ ಭಾರತ, ಭಯೋತ್ಪಾದಕರನ್ನು ವೈಭವೀಕರಿಸುವುದು ಮತ್ತು ಸುಳ್ಳು ಹೇಳುವುದು ಪಾಕಿಸ್ತಾನದ ವಿದೇಶಾಂಗ ನೀತಿಯ ಮೂಲಬಿಂದು ಎಂದು ಕಟುವಾಗಿ ಟೀಕಿಸಿತು. “ಯಾವುದೇ ನಾಟಕ ಅಥವಾ ಸುಳ್ಳು, ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ,” ಎಂದು ಗುಡುಗಿದ ಗಹೋಟ್, ಪೆಹಲಾಗಾವ್ ದಾಳಿಗೆ ಕಾರಣವಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಎಂಬ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ಷಿಸಿದ್ದಕ್ಕಾಗಿ ಪಾಕಿಸ್ತಾನದ ಕುತಂತ್ರವನ್ನು ಬಯಲು ಮಾಡಿದರು.(India Strong Reply to Pakistan)
ಭಯೋತ್ಪಾದನೆಯ ವಿರುದ್ಧದ ಪಾಲುದಾರರಂತೆ ನಟಿಸುತ್ತಿದ್ದರೂ, ಇದೇ ದೇಶವು ವಿಶ್ವದ ಅತಿದೊಡ್ಡ ಭಯೋತ್ಪಾದಕನಾದ ಒಸಾಮಾ ಬಿನ್ ಲಾಡೆನ್ಗೆ ಒಂದು ದಶಕದ ಕಾಲ ಆಶ್ರಯ ನೀಡಿತ್ತು ಎಂದು ಪಾಕ್ನ ದ್ವಂದ್ವ ನೀತಿಯನ್ನು ಹೊರಹಾಕಿದರು.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಗ್ಗೆ ಪಾಕ್ ಪ್ರಧಾನಿಯ ಹೇಳಿಕೆ ಸುಳ್ಳು ಎಂದು ಅಲ್ಲಗಳೆದ ಭಾರತ, ಮೇ 10ರಂದು ಪಾಕಿಸ್ತಾನ ಸೈನ್ಯವೇ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಅಂಗಲಾಚಿತ್ತು ಎಂಬ ಸತ್ಯವನ್ನು ಜಗತ್ತಿಗೆ ತಿಳಿಸಿತು. ಅಲ್ಲದೆ, ಬಹಾವಲ್ಪುರ್ ಮತ್ತು ಮುರಿಡೈ ಉಗ್ರರ ನೆಲೆಗಳಲ್ಲಿ
ಹತ್ಯೆಯಾದ ಭಯೋತ್ಪಾದಕರಿಗೆ ಪಾಕಿಸ್ತಾನದ(Pakistan) ಹಿರಿಯ ಸೇನಾಧಿಕಾರಿಗಳು ಸಾರ್ವಜನಿಕವಾಗಿ ಗೌರವ ಸಲ್ಲಿಸಿರುವುದನ್ನು ಪ್ರಶ್ನಿಸಿ, ಇದು ಯಾವ ನೀತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ ಎಂಬುದು ಸತ್ಯ, ಅಂತಹ ಕ್ರಮಗಳ ವಿರುದ್ಧ ನಮ್ಮ ಜನರನ್ನು ರಕ್ಷಿಸುವ ಹಕ್ಕನ್ನು ನಾವು ಬಳಸಿದ್ದೇವೆ ಎಂದು ಸಮರ್ಥಿಸಿಕೊಂಡರು. ಕೊನೆಯಲ್ಲಿ, ಪಾಕ್ ಪ್ರಧಾನಿ(Pakistan Prime Minister) ಪರೋಕ್ಷವಾಗಿ ನೀಡಿದ ಪರಮಾಣು ಬಾಂಬ್ ದಾಳಿಯ ಬೆದರಿಕೆಗೆ ಭಾರತ ಹೆದರುವುದಿಲ್ಲ ಎಂದು ಖಡಕ್ ತಿರುಗೇಟು ನೀಡಿದ ಭಾರತ,(India) ನಿಜವಾಗಿಯೂ ಶಾಂತಿ ಬೇಕಿದ್ದರೆ, ಪಾಕಿಸ್ತಾನವು ತನ್ನ ನೆಲದಲ್ಲಿರುವ ಎಲ್ಲಾ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿತು. ದ್ವೇಷ ಮತ್ತು ಅಸಹಿಷ್ಣುತೆಯಲ್ಲಿ ಮುಳುಗಿರುವ ದೇಶವು ಈ ಸಭೆಗೆ ಬಂದು ನಂಬಿಕೆಯ ಪಾಠ ಮಾಡುತ್ತಿರುವುದು ವಿಪರ್ಯಾಸ ಎಂದು ಪಾಕಿಸ್ತಾನದ ನಿಜ ಸ್ವರೂಪವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿತು(India Strong Reply to Pakistan)
