
Darshan Devil Release Date: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ‘ದಿ ಡೆವಿಲ್’ ಸಿನಿಮಾ ಬಗ್ಗೆ ಒಂದು ಮಹತ್ವದ ಸುದ್ದಿ ಹೊರಬಿದ್ದಿದೆ. ಸದ್ಯ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ನಡುವೆಯೂ, ‘ದಿ ಡೆವಿಲ್’ ಚಿತ್ರದ ಕೆಲಸಗಳು ನಿಂತಿಲ್ಲ, ಬದಲಾಗಿ ಇನ್ನಷ್ಟು ವೇಗ ಪಡೆದುಕೊಂಡಿವೆ.
ಇದನ್ನೂ ಓದಿ: ಮಳೆ ಆರ್ಭಟಕ್ಕೆ ರಾಜ್ಯ ತತ್ತರ: ಹಲವು ನದಿಗಳು ಅಪಾಯದ ಮಟ್ಟಕ್ಕೆ, ಪ್ರವಾಹ ಭೀತಿ!
ಸ್ವತಃ ದರ್ಶನ್ ಅವರೇ ಈ ಚಿತ್ರಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ. ಇತ್ತೀಚೆಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು, “ನನ್ನನ್ನು ನಂಬಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ನಿರ್ಮಾಪಕರು ಮತ್ತು ನಿರ್ದೇಶಕರ ಕನಸನ್ನು ನನಸು ಮಾಡುವುದು ನನ್ನ ಮೊದಲ ಕರ್ತವ್ಯ. ‘ದಿ ಡೆವಿಲ್’ ಸಿನಿಮಾದ ಕೆಲಸಗಳಿಗೆ ಯಾವುದೇ ಅಡ್ಡಿಯಾಗದಂತೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ” ಎಂಬ ದರ್ಶನ್ ಅವರ ಸಂದೇಶವನ್ನು ಹಂಚಿಕೊಂಡಿದ್ದರು.ಇದು ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ದೊಡ್ಡ ಧೈರ್ಯ ತುಂಬಿದೆ.
ಡಿಸೆಂಬರ್ ನಲ್ಲಿ ‘ಡೆವಿಲ್’ ದರ್ಬಾರ್!
ಈಗ ಬಂದಿರುವ ಹೊಸ ಮಾಹಿತಿ ಪ್ರಕಾರ, ‘ದಿ ಡೆವಿಲ್’ ಚಿತ್ರವನ್ನು ಇದೇ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಅದ್ದೂರಿಯಾಗಿ ತೆರೆಗೆ ತರಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: How to Identify Fresh Fish: ಮೀನು ಖರೀದಿಸುವಾಗ ತಾಜಾ ಮೀನುಗಳನ್ನು ಗುರುತಿಸುವುದು ಹೇಗೆ?, ಈ ಟಿಪ್ಗಳನ್ನು ಫಾಲೋ ಮಾಡಿ
ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಚಿತ್ರದಲ್ಲಿ ದರ್ಶನ್ ಜೊತೆ ನಾಯಕಿಯಾಗಿ ರಚನಾ ರೈ ಮಿಂಚಿದ್ದು, ಶರ್ಮಿಳಾ ಮಾಂಡ್ರೆ, ಬಾಲಿವುಡ್ ನ ಖ್ಯಾತ ನಟ ಮಹೇಶ್ ಮಂಜ್ರೇಕರ್ ಮತ್ತು ಅಚ್ಯುತ್ ಕುಮಾರ್ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಇದೆ.
ಈ ವಾರಾಂತ್ಯದಲ್ಲೇ ಮೊದಲ ಹಾಡಿನ ರಸದೌತಣ
ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಲು, ಚಿತ್ರದ ಮೊದಲ ಹಾಡು ಕೂಡ ಬಿಡುಗಡೆಯಾಗುತ್ತಿದೆ. ‘ಇದ್ರೆ ನೇಮ್ದಿಯಾಗ್ ಇರ್ಬೇಕ್’ ಎಂಬ ಈ ಹಾಡನ್ನು ಇದೇ ವಾರಾಂತ್ಯದಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ವಿಶೇಷವೆಂದರೆ, ಇದೇ ಮೊದಲ ಬಾರಿಗೆ ದರ್ಶನ್ ಅವರ ಚಿತ್ರಕ್ಕೆ ‘ಕಾಂತಾರ’ ಖ್ಯಾತಿಯ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜಿಸಿದ್ದಾರೆ. ಹೀಗಾಗಿ ಈ ಹಾಡಿನ ಮೇಲೆ ನಿರೀಕ್ಷೆ ಮುಗಿಲುಮುಟ್ಟಿದೆ. ಸುಧಾಕರ್ ಎಸ್ ರಾಜ್ ಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ. ಒಟ್ಟಿನಲ್ಲಿ, ಎಲ್ಲಾ ಅಡೆತಡೆಗಳನ್ನು ಮೀರಿ ‘ದಿ ಡೆವಿಲ್’ ತನ್ನ ಅಬ್ಬರವನ್ನು ಶುರುಮಾಡಲು ಸಜ್ಜಾಗಿದ್ದಾನೆ.
