ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ,(Belthangady Accident) ಎಂಜಿನಿಯರಿಂಗ್ ಅಂತಿಮ ವರ್ಷದ ಯುವ ವಿದ್ಯಾರ್ಥಿನಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಈ ದುರಂತದಲ್ಲಿ ಆಕೆಯ ಗೆಳತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾಳೆ.
ಕಾಲೇಜಿಗೆ ಹೋಗುತ್ತಿದ್ದಾಗ ದುರಂತ: ಅನನ್ಯಾ ಸ್ಥಳದಲ್ಲೇ ಸಾವು
ಮೃತ ವಿದ್ಯಾರ್ಥಿನಿಯನ್ನು (21) ವರ್ಷದ ಅನನ್ಯಾ ಎಂದು ಗುರುತಿಸಲಾಗಿದೆ. ಈಕೆ ಮಂಗಳೂರಿನ ಸಹ್ಯಾದಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಅನನ್ಯಾ ಮತ್ತು ಆಕೆಯ ಗೆಳತಿ ಪೃಥ್ವಿ ರಾವ್ (21) ಅವರು ಬೆಳ್ತಂಗಡಿಯಿಂದ ತಮ್ಮ ಕಾಲೇಜಿಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪುಂಜಾಲಕಟ್ಟೆ ಬಳಿ ಇವರು ಪ್ರಯಾಣಿಸುತ್ತಿದ್ದ ಹೋಂಡಾ ಆಕ್ಟಿವಾ ಸ್ಕೂಟಿಗೆ ವ್ಯಾಗನಾರ್ ಕಾರು ತೀವ್ರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅನನ್ಯಾ ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.(Belthangady Accident)
ಇದನ್ನೂ ಓದಿ: ತಲಾಖ್-ಎ-ಹಸನ್ ರದ್ದಾಗುತ್ತಾ?: ಮುಸ್ಲಿಂ ವಿಚ್ಛೇದನ ಪದ್ಧತಿ ರದ್ದುಗೊಳಿಸುವ ಆಶಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್
ಗೆಳತಿ ಪೃಥ್ವಿಗೆ ಗಂಭೀರ ಗಾಯ: ಮಂಗಳೂರಿಗೆ ದಾಖಲು
ಸ್ಕೂಟಿಯ ಹಿಂಬದಿ ಸವಾರಿಯಾಗಿದ್ದ ಪೃಥ್ವಿ ರಾವ್ ಅವರಿಗೆ ಅಪಘಾತದಲ್ಲಿ ಗಂಭೀರ ಗಾಯಗಳಾಗಿವೆ. ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೃಥ್ವಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ದುರಂತಕ್ಕೆ ಕಾರಣವಾದ ಅಪಾಯಕಾರಿ ತಿರುವು
ಈ ದುರಂತವು ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಾವಳಕಟ್ಟೆಯಿಂದ ಎನ್ಸಿ ರೋಡ್ಗೆ ಸಾಗುವ ದಾರಿಯ ಅಪಾಯಕಾರಿ ತಿರುವಿನಲ್ಲಿ ಸಂಭವಿಸಿದೆ.(Belthangady Accident) ಈ ತಿರುವು ಈ ಹಿಂದೆಯೂ ಅನೇಕ ಅಪಘಾತಗಳಿಗೆ ಸಾಕ್ಷಿಯಾಗಿದೆ. ಮೃತ ಅನನ್ಯಾ ಅವರು ಕಡಬದ ಸುನೀಲ್ ಎಂಬುವವರ ಪುತ್ರಿ. ಗಾಯಗೊಂಡ ಪೃಥ್ವಿ ಅವರು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯ ನಿವಾಸಿಯಾಗಿದ್ದು, ಇಲ್ಲಿನ ಪುಣಮ್ಯ ಸ್ಟುಡಿಯೋ ಮಾಲೀಕರ ಪುತ್ರಿ. ಈ ದುರ್ಘಟನೆಯು ವಿದ್ಯಾರ್ಥಿ ಸಮುದಾಯ ಮತ್ತು ಎರಡು ಕುಟುಂಬಗಳಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ.
