BCCI Earning: ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ, ಅದೊಂದು ಭಾವನೆ. ಈ ಭಾವನೆಗೆ ಬೆಲೆ ಕಟ್ಟುವಂತೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಳೆದ 5 ವರ್ಷಗಳಲ್ಲಿ ಆರ್ಥಿಕವಾಗಿ ಅಸಾಧಾರಣ ಯಶಸ್ಸು ಗಳಿಸಿದೆ. ಹಣದ ವಿಷಯದಲ್ಲಿ ಇಡೀ ವಿಶ್ವ ಕ್ರಿಕೆಟ್ಗೆ ಸವಾಲು ಹಾಕುತ್ತಿರುವ ಬಿಸಿಸಿಐ(BCCI Earning) ಇತ್ತೀಚಿನ ವರದಿಗಳ ಪ್ರಕಾರ, ತನ್ನ ಖಜಾನೆಗೆ ಸಾವಿರಾರು ಕೋಟಿಗಳನ್ನು ಸೇರಿಸಿಕೊಂಡಿದೆ. ಐಪಿಎಲ್ನ ಯಶಸ್ಸು ಮತ್ತು ಮಂಡಳಿಯ ವಾಣಿಜ್ಯ ಕಾರ್ಯತಂತ್ರಗಳು ಹೇಗೆ ಬಿಸಿಸಿಐನ ಆದಾಯವನ್ನು ಗಗನಕ್ಕೇರಿಸಿವೆ ಎಂಬುದನ್ನು ಈ ವರದಿ ವಿವರಿಸುತ್ತದೆ.
ಇದನ್ನೂ ಓದಿ: Criketer Karun Nair: ಒಂದು ತ್ರಿಶತಕ, ಅದೆಷ್ಟೋ ಕನಸುಗಳು: ಅಂತ್ಯವಾಯಿತೆ ಕರುಣ್ ನಾಯರ್ ಅವರ ವೃತ್ತಿಜೀವನ ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಳೆದ ಐದು ವರ್ಷಗಳಲ್ಲಿ ಆರ್ಥಿಕವಾಗಿ ಮಹತ್ವದ ಬೆಳವಣಿಗೆ ಸಾಧಿಸಿದ್ದು, ಅದರ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ನಲ್ಲಿ ₹14,000 ಕೋಟಿಗೂ ಅಧಿಕ ಆದಾಯ ದಾಖಲಾಗಿದೆ. ಕ್ರಿಕೆಟ್ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐ, ತನ್ನ ಆದಾಯದ ಮೂಲಗಳನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಹಣಕಾಸು ವರದಿಯ ವಿವರಗಳು
ಕ್ರಿಕ್ಬಜ್ ವರದಿಯ ಪ್ರಕಾರ, 2019ರಲ್ಲಿ ಬಿಸಿಸಿಐ ಬ್ಯಾಂಕ್ ಬ್ಯಾಲೆನ್ಸ್ ₹6,059 ಕೋಟಿ ಇತ್ತು. ಆದರೆ, 2024ರ ಹೊತ್ತಿಗೆ ಇದು ₹20,686 ಕೋಟಿಗೆ ಏರಿಕೆಯಾಗಿದೆ. ಕೇವಲ ಐದು ವರ್ಷಗಳಲ್ಲಿ ₹14,627 ಕೋಟಿ ಆದಾಯ ಹೆಚ್ಚಳವಾಗಿದ್ದು, ಇದು ಬಿಸಿಸಿಐನ(BCCI Earning) ವ್ಯವಹಾರ ಮಾದರಿಯ ಯಶಸ್ಸನ್ನು ತೋರಿಸುತ್ತದೆ. ಇದರ ಜೊತೆಗೆ, ಮಂಡಳಿಯ ಸಾಮಾನ್ಯ ನಿಧಿ (General Fund) ಸಹ 2019ರ ₹3,906 ಕೋಟಿಯಿಂದ ₹7,988 ಕೋಟಿಗೆ ಏರಿದೆ.
ಕಳೆದ ಹಣಕಾಸು ವರ್ಷವಾದ 2023-24ರಲ್ಲಿ ಬಿಸಿಸಿಐ ₹4,193 ಕೋಟಿ ಆದಾಯ ಗಳಿಸಿದೆ. ಸೆಪ್ಟೆಂಬರ್ 28ರಂದು ನಡೆಯಲಿರುವ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ಈ ಕುರಿತು ಮತ್ತಷ್ಟು ವಿವರಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ICC Announcement: ಮಹಿಳಾ ಕ್ರಿಕೆಟ್ನಲ್ಲಿ ಐತಿಹಾಸಿಕ ಬದಲಾವಣೆ!, ಪುರುಷರ ವಿಶ್ವಕಪ್ಗಿಂತಲೂ ಹೆಚ್ಚಿನ ಬಹುಮಾನ ಮೊತ್ತ ಘೋಷಣೆ
ಆದಾಯದ ಮೂಲಗಳು ಮತ್ತು ಇಳಿಕೆ
ಬಿಸಿಸಿಐನ ಆದಾಯ ಹೆಚ್ಚಳಕ್ಕೆ ಮುಖ್ಯ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರಸಾರ ಹಕ್ಕುಗಳು ಮತ್ತು ಪ್ರಾಯೋಜಕತ್ವ. ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಕೆಲವು ಪ್ರಮುಖ ಆದಾಯ ಮೂಲಗಳಲ್ಲಿ ಇಳಿಕೆಯಾಗಿದೆ.
ಅಂತರರಾಷ್ಟ್ರೀಯ ಪಂದ್ಯಗಳ ಆದಾಯ: ಕಳೆದ ವರ್ಷ ಅಂತರರಾಷ್ಟ್ರೀಯ ಪಂದ್ಯಗಳ ಮಾಧ್ಯಮ ಹಕ್ಕುಗಳಿಂದ ಬಿಸಿಸಿಐ ₹2,524.80 ಕೋಟಿ ಗಳಿಸಿತ್ತು. ಆದರೆ, ಈ ಬಾರಿ ಪಂದ್ಯಗಳ ಸಂಖ್ಯೆ ಕಡಿಮೆಯಾದ ಕಾರಣ ಅದು ₹813.14 ಕೋಟಿಗೆ ಇಳಿದಿದೆ.
ವಿದೇಶ ಪ್ರವಾಸದ ಆದಾಯ: ಭಾರತೀಯ ತಂಡದ ವಿದೇಶ ಪ್ರವಾಸಗಳಿಂದ ಕಳೆದ ವರ್ಷ ₹642.78 ಕೋಟಿ ಆದಾಯ ಬಂದಿದ್ದರೆ, ಈ ವರ್ಷ ಅದು ₹361.22 ಕೋಟಿಗೆ ಕುಸಿದಿದೆ.
ಬ್ಯಾಂಕ್ ಠೇವಣಿ ಬಡ್ಡಿ: ಬ್ಯಾಂಕ್ ಠೇವಣಿಗಳಿಂದ ಬರುವ ಬಡ್ಡಿ ಆದಾಯಾವು ಕೂಡ ಕಳೆದ ವರ್ಷದ ₹986.45 ಕೋಟಿಯಿಂದ ₹533.05 ಕೋಟಿಗೆ ಇಳಿದಿದೆ.
ಬಿಸಿಸಿಐನ ವೆಚ್ಚಗಳು
ಆದಾಯದ ಜೊತೆಗೆ ಬಿಸಿಸಿಐನ ವೆಚ್ಚವೂ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ ₹1,167.99 ಕೋಟಿ ಇದ್ದ ಒಟ್ಟು ವೆಚ್ಚ, ಈ ಬಾರಿ ₹1,623.08 ಕೋಟಿಗೆ ಏರಿದೆ. ಇದರ ಜೊತೆಗೆ, ಬಿಸಿಸಿಐ ತನ್ನ ಸಾಮಾಜಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳಿಗಾಗಿ ದೊಡ್ಡ ಮೊತ್ತವನ್ನು ಮೀಸಲಿಟ್ಟಿದೆ.
ಮೂಲಸೌಕರ್ಯ ಅಭಿವೃದ್ಧಿ: ದೇಶಾದ್ಯಂತ ಕ್ರಿಕೆಟ್ ಕ್ರೀಡಾಂಗಣಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸುಧಾರಿಸಲು ₹1,200 ಕೋಟಿ ಹಂಚಿಕೆ ಮಾಡಲಾಗಿದೆ.
ತೆರಿಗೆ: 2023-24ರ ಆರ್ಥಿಕ ವರ್ಷಕ್ಕೆ ₹3,150 ಕೋಟೆಯನ್ನು ತೆರಿಗೆಗಾಗಿಯೇ ಮೀಸಲಿರಿಸಲಾಗಿದೆ.
ಇತರ ನಿಧಿಗಳು: ಪ್ಲಾಟಿನಂ ಜುಬಿಲಿ ಬೆನೆವೊಲೆಂಟ್ ಫಂಡ್ ಗೆ ₹350 ಕೋಟಿ ಮತ್ತು ಕ್ರಿಕೆಟ್ ಅಭಿವೃದ್ಧಿ ನಿಧಿಯ ಮೂಲಸೌಕರ್ಯಕ್ಕಾಗಿ ₹500 ಕೋಟಿ ಹಂಚಿಕೆ ಮಾಡಲಾಗಿದೆ.
